ಮಂಜುನಾಥನ ಸನ್ನಿಧಿಯಲ್ಲಿ ಸಪ್ತಪದಿ ತುಳಿದ Bigg Boss Ugram Manju: ಸುಂದರ ಫೋಟೋಗಳು ಇಲ್ಲಿವೆ

ಮಂಜುನಾಥನ ಸನ್ನಿಧಿಯಲ್ಲಿ ಸಪ್ತಪದಿ ತುಳಿದ Bigg Boss Ugram Manju: ಸುಂದರ ಫೋಟೋಗಳು ಇಲ್ಲಿವೆ

ಮಂಜುನಾಥನ ಸನ್ನಿಧಿಯಲ್ಲಿ ಸಪ್ತಪದಿ ತುಳಿದ Bigg Boss Ugram Manju: ಸುಂದರ ಫೋಟೋಗಳು ಇಲ್ಲಿವೆ
ಬಿಗ್ ಬಾಸ್ ಕನ್ನಡ ಸೀಸನ್ 11ರ ಖ್ಯಾತಿಯ ನಟ ಉಗ್ರಂ ಮಂಜು ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ತಮ್ಮ ಗೆಳತಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಅವರ ಕುಟುಂಬಸ್ಥರು ಮತ್ತು ಬಿಗ್ ಬಾಸ್‌ನ ಸಹ ಸ್ಪರ್ಧಿಗಳು ಹಾಜರಾಗಿ ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ನಟ ಉಗ್ರಂ ಮಂಜು (Bigg Boss Ugram Manju) ಇಂದು ತಮ್ಮ ಸ್ನೇಹಿತೆ ಸಂಧ್ಯಾ ಜೊತೆ ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹವಾಗಿದ್ದಾರೆ. ಇವರ ವಿವಾಹಕ್ಕೆ ಬಿಗ್​ಬಾಸ್​​ನ ಕೆಲವು ಸ್ಪರ್ಧಿಗಳು ಸೇರಿದಂತೆ ವಿವಿಧ ಸೆಲೆಬ್ರಿಟಿಗಳು ಹಾಗೂ ಕುಟುಂಬಸ್ಥರು ಬಂದು ಆಶೀರ್ವದಿಸಿದ್ದಾರೆ.

ಮಂಜುನಾಥ್ ಗೌಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಉಗ್ರಂ ಮಂಜು ಎಂದೇ ಖ್ಯಾತಿ ಪಡೆದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಇವರು, ಸ್ಟ್ರಾಂಗ್​ ಸ್ಪರ್ಧಿ ಎನ್ನಿಸಿಕೊಂಡಿದ್ದರು. ಉಗ್ರಂ ಮಂಜು ಬಿಗ್​ಬಾಸ್​ನಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಅಂದಹಹಾಗೆ ಉಗ್ರಂ ಮಂಜು ಅವರು, ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿರುವ ಸಾಯಿ ಸಂಧ್ಯಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ನಿನ್ನೆ ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ನೆರವೇರಿತ್ತು. ಇಂದು ಮದುವೆಯಾಗಿದ್ದಾರೆ. ಅರಿಶಿಣ ಹಚ್ಚಿಕೊಂಡು ಮದುಮಗನ ಕಳೆಯಲ್ಲಿ ಮಂಜು ಕಂಗೊಳಿಸುತ್ತಿರುವ ಫೋಟೋಗಳು ವೈರಲ್​ ಆಗಿದ್ದವು. ಇದೀಗ ಮದುವೆಯ ಫೊಟೋಗಳು ವೈರಲ್​ ಆಗುತ್ತಿವೆ.

ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಉಗ್ರಂ ಮಂಜು ಅವರ ಮದುವೆ ವಿಚಾರ ಸಾಕಷ್ಟು ಸೌಂಡ್ ಮಾಡಿತ್ತು. ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯೊಳಗೆ ಮಂಜು ಅವರ ಗೆಳೆಯರು ಆಗಮಿಸಿ, ಅಲ್ಲಿಯೇ ಗ್ರ್ಯಾಂಡ್ ಆಗಿ ಬ್ಯಾಚುಲರ್ ಪಾರ್ಟಿ ಕೂಡ ಆಯೋಜಿಸಿ ಸುದ್ದಿಯಾಗಿದ್ದರು.

ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.

Source link

Leave a Reply

Your email address will not be published. Required fields are marked *