Headlines

ಜನವರಿ 24ರಿಂದ 27ರವರೆಗೆ, ಸತತ ನಾಲ್ಕು ದಿನ ದೇಶದ ಎಲ್ಲಾ ಬ್ಯಾಂಕುಗಳಿಗೆ ರಜೆ

ಜನವರಿ 24ರಿಂದ 27ರವರೆಗೆ, ಸತತ ನಾಲ್ಕು ದಿನ ದೇಶದ ಎಲ್ಲಾ ಬ್ಯಾಂಕುಗಳಿಗೆ ರಜೆ


ಜನವರಿ 23: ಬ್ಯಾಂಕುಗಳು ನಾಳೆಯಿಂದ (ಜ. 24) ಸತತ ನಾಲ್ಕು ದಿನ ಬಂದ್ (ಬ್ಯಾಂಕ್ ರಜೆ) ಆಗಿರುತ್ತದೆ. ಜನವರಿ 24, ಶನಿವಾರದಿಂದ ಜನವರಿ 27, ಮಂಗಳವಾರದವರೆಗೂ ಬ್ಯಾಂಕುಗಳ ಬಾಗಿಲು ಮುಚ್ಚಲಿದೆ. ತುರ್ತಾಗಿ ಬ್ಯಾಂಕ್ ಕೆಲಸ ಇದ್ದವರು ಇವತ್ತಿಗೇ ಪ್ಲಾನ್ ಮಾಡಿಕೊಳ್ಳಬಹುದು. ಬ್ಯಾಂಕ್ ನೌಕರರ ಮುಷ್ಕರ (ಬ್ಯಾಂಕ್ ನೌಕರರ ಮುಷ್ಕರ) ಹಾಗೂ ಗಣರಾಜ್ಯೋತ್ಸವ (ಗಣರಾಜ್ಯೋತ್ಸವ) ಇರುವ ಜೊತೆಗೆ ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇದೆ.

ಬ್ಯಾಂಕುಗಳಿಗೆ ರಜೆ

  • ಜ. 24: ನಾಲ್ಕನೇ ಶನಿವಾರದ ಪ್ರಯುಕ್ತ ರಜೆ
  • ಜ. 25: ಭಾನುವಾರದ ರಜೆ
  • ಜ. 26, ಸೋಮವಾರ: ಗಣರಾಜ್ಯೋತ್ಸವ ಅಂಗವಾಗಿ ರಜೆ
  • ಜ. 27, ಮಂಗಳವಾರ: ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ.

ಜನವರಿ 24 ರಿಂದ 27 ರವರೆಗೂ ದೇಶವ್ಯಾಪಿ ಎಲ್ಲಾ ಬ್ಯಾಂಕುಗಳಿಗೆ ರಜೆ ಅನ್ವಯವಾಗುತ್ತದೆ. ಬ್ಯಾಂಕ್ ನೌಕರರನ್ನು ಸಮಾಧಾನಗೊಳಿಸಿ ಮುಷ್ಕರ ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ನಿನ್ನೆ (ಜ. 22) ಕೂಡ ದೆಹಲಿಯಲ್ಲಿ ಸಂಧಾನ ಸಭೆ. ಆದರೂ ಕೂಡ ರಾಜಿ ಅಥವಾ ಪರಿಹಾರ ಬರಲಿಲ್ಲ. ಇವತ್ತೂ ಕೂಡ ಮಾತುಕತೆಗಳು ನಡೆಯಲಿವೆ. ಸಂಜೆ ಈ ಸಂಧಾನ ಯಶಸ್ವಿಯಾಗಿ ನೌಕರರ ಸಂಘ ಸಮಾಧಾನಗೊಂಡರೆ ಜನವರಿ 27ರಂದು ಮುಷ್ಕರವನ್ನು ಕೈಬಿಡಬಹುದು. ಇಲ್ಲದಿದ್ದರೆ ಮಂಗಳವಾರವೂ ಬ್ಯಾಂಕ್ ಬಂದ್ ಆಗಿರುತ್ತದೆ.

ಇದನ್ನೂ ಓದಿ: ಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ಬ್ಯಾಂಕ್ ನೌಕರರ ಮುಷ್ಕರಕ್ಕೆ ಬೇಡಿಕೆಗಳೇನು?

ಕೆಲ ಸರ್ಕಾರಿ ಸಂಸ್ಥೆಗಳಲ್ಲಿ ಇರುವಂತಹ ಬ್ಯಾಂಕುಗಳಿಗೆ ಐದು ದಿನ ಕೆಲಸದ ನಿಯಮ ತರಬೇಕೆಂಬುದು ನೌಕರರ ಪ್ರಮುಖ ಒತ್ತಾಯವಾಗಿದೆ. ಸದ್ಯ ಪ್ರತೀ ಭಾನುವಾರ ರಜೆ ಇದೆ. ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ರಜೆಯಾಗಿ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ. ಬಹಳ ದಿನಗಳಿಂದ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *