Mahanati Show Gagana On Bigg Boss Kannada Season 12 Winner Gilli Nata: ಗಿಲ್ಲಿ ನಟ, ಮಹಾನಟಿ ಶೋ ಖ್ಯಾತಿಯ ಗಗನಾ ಅವರು ಡ್ಯಾನ್ಸಿಂಗ್ ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಗೆ ಗಿಲ್ಲಿ ನಟ ಹೋದ ಬಳಿಕ, ಗಗನಾ ಅವರು ಗಿಲ್ಲಿ ಬಗ್ಗೆ ಮಾತನಾಡಿರಲಿಲ್ಲ. ಈಗ ಮಾತನಾಡಿದ್ದಾರೆ.

ಗಗನಾ ಅವರು ಹೋದಲ್ಲಿ ಬಂದಲ್ಲಿ ಗಿಲ್ಲಿ ನಟನ ಬಗ್ಗೆ ಯುಟ್ಯೂಬರ್ಸ್ ಪ್ರಶ್ನೆ ಮಾಡುತ್ತಿದ್ದರು. ಆದರೆ ಗಗನಾ ಮಾತ್ರ ಗಿಲ್ಲಿ ಹೆಸರು ಕೂಡ ಹೇಳುತ್ತಿರಲಿಲ್ಲ. ಇದನ್ನೇ ಇಟ್ಟುಕೊಂಡು ಅನೇಕರು ಗಗನಾರನ್ನು ಟ್ರೋಲ್ ಕೂಡ ಮಾಡಿದರು.

ಬೆಳೆಯೋವರೆಗೆ ಗಿಲ್ಲಿ ಬೇಕು, ಆಮೇಲೆ ಬೇಡ, ಗಿಲ್ಲಿ ನಟನ ಹೆಸರು ಕೂಡ ಹೇಳುತ್ತಿಲ್ಲ ಎಂದು ಗಗನಾ ಬಗ್ಗೆ ಸಿಕ್ಕಾಪಟ್ಟೆ ಕಾಮೆಂಟ್ ಕೂಡ ಮಾಡಲಾಗುತ್ತಿತ್ತು. ಈಗ ಅವರು ಯುಟ್ಯೂಬರ್ಸ್ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

“ಗಿಲ್ಲಿ ನಟ ಅವರು ಬಿಗ್ ಬಾಸ್ ಗೆದ್ದಿದ್ದಾರೆ, ಅವರು ಅಷ್ಟು ಮತ ಗಳಿಸಿದ್ದಕ್ಕೆ ಅವರು ಕೋಟ್ಯಾಧಿಪತಿಗಿಂತಲೂ ಜಾಸ್ತಿ ಆಗಿದ್ದಾರೆ, ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ.

ಅದಾದ ಬಳಿಕ ಗಿಲ್ಲಿ ನಟ ಅವರ ರೀತಿ ನೀವು ಮಾತನಾಡುತ್ತಿದ್ದೀರಿ ಎಂದು ಯುಟ್ಯೂಬರ್ಸ್ ಹೇಳಿದಾಗ, ಗಗನಾ ಅವರು, “ನನ್ನ ತಂದೆ ಕೂಡ ಚೆನ್ನಾಗಿ ಮಾತನಾಡುತ್ತಾರೆ” ಎಂದಿದ್ದಾರೆ.

“ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ನಾನು ಗಗನಾಗೆ ತುಂಬ ಇರಿಟೇಟ್ ಮಾಡಿದ್ದೀನಿ. ಕಾವ್ಯ ಶೈವಗಂತೂ ಸಿಕ್ಕಾಪಟ್ಟೆ ಇರಿಟೇಟ್ ಮಾಡಿದ್ದೀನಿ, ನಾನು ಬೇಕು ಅಂತ ಹೀಗೆ ಮಾಡಿಲ್ಲ. ಆದರೆ ಫ್ಲೋನಲ್ಲಿ ಆಗಿರೋದು” ಎಂದು ಗಿಲ್ಲಿ ನಟ ಹೇಳಿದ್ದಾರೆ.

Source link
ಟ್ರೋಲ್ ಆದ್ಮೇಲೆ, ಗಿಲ್ಲಿ ನಟ Bigg Boss ಕಪ್ ಗೆದ್ಮೇಲೆ ಕೊನೆಗೂ ಹೆಸರು ಹೇಳಿ ಮಾತನಾಡಿದ Mahanati ಗಗನಾ!