Headlines

'ಎಂತದು ಗೊತ್ತುಂಟಾ? ಇಲ್ಲಿ ಎಂತದೂ ಇಲ್ಲ, ಆದ್ರೂ ಹೇಳ್ತೇನೆ' ಎಂದು ಲೈವ್​ಗೆ ಬಂದ ರಕ್ಷಿತಾ ಶೆಟ್ಟಿ ಹೇಳಿದ್ದೇನು?

'ಎಂತದು ಗೊತ್ತುಂಟಾ? ಇಲ್ಲಿ ಎಂತದೂ ಇಲ್ಲ, ಆದ್ರೂ ಹೇಳ್ತೇನೆ' ಎಂದು  ಲೈವ್​ಗೆ ಬಂದ ರಕ್ಷಿತಾ ಶೆಟ್ಟಿ ಹೇಳಿದ್ದೇನು?

'ಎಂತದು ಗೊತ್ತುಂಟಾ? ಇಲ್ಲಿ ಎಂತದೂ ಇಲ್ಲ, ಆದ್ರೂ ಹೇಳ್ತೇನೆ' ಎಂದು  ಲೈವ್​ಗೆ ಬಂದ ರಕ್ಷಿತಾ ಶೆಟ್ಟಿ ಹೇಳಿದ್ದೇನು?
ಬಿಗ್ ಬಾಸ್ ಖ್ಯಾತಿಯ ‘ಮಂಗಳೂರು ಪುಟ್ಟಿ’ ರಕ್ಷಿತಾ ಶೆಟ್ಟಿ, ತಮಗೆ ಸಿಕ್ಕ ಅಭೂತಪೂರ್ವ ಬೆಂಬಲಕ್ಕೆ ಆಶ್ಚರ್ಯಚಕಿತರಾಗಿದ್ದಾರೆ. ತಾನು ಇಷ್ಟು ಪ್ರೀತಿ ಗಳಿಸುತ್ತೇನೆ ಎಂದು ಊಹಿಸಿರಲಿಲ್ಲ ಎಂದಿರುವ ಅವರು, ದೇಶ-ವಿದೇಶಗಳಲ್ಲಿನ ಕನ್ನಡಿಗರಿಗೆ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.
ಮಂಗಳೂರು ಪುಟ್ಟಿ, ಟಗರು ಪುಟ್ಟಿ ಎಂದೆಲ್ಲಾ ಫೇಮಸ್​ ಆಗುತ್ತಲೇ, ಕೋಟ್ಯಂತರ ಕನ್ನಡಿಗರ ಮನಸ್ಸನ್ನು ಗೆದ್ದು ಬೀಗ್ತಿರೋರು ಕರಾವಳಿ ಬೆಡಗಿ ಬಿಗ್​ಬಾಸ್​​ ಖ್ಯಾತಿಯ, ರಕ್ಷಿತಾ ಶೆಟ್ಟಿ (Bigg Boss Rakshita Shetty).

ಈ ಚಿಕ್ಕ ವಯಸ್ಸಿನಲ್ಲಿಯೇ ರಕ್ಷಿತಾ ಶೆಟ್ಟಿ ಬಿಗ್​ಬಾಸ್​​ ಮೂಲಕ ಸೆಲೆಬ್ರಿಟಿ ಆಗಿದ್ದಾರೆ. ಕೆಲವು ದಿನಗಳಿಂದ ಎಲ್ಲಾ ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿರುವ ಕಾರಣ, ಧ್ವನಿ ಬಿದ್ದು ಹೋಗಿದೆ ಎಂದು ಹೇಳುತ್ತಲೇ ವಿಡಿಯೋ ಮಾಡಿದ್ದಾರೆ ರಕ್ಷಿತಾ.

ಏನು ಗೊತ್ತುಂಟಾ, ಇಂಟರ್​ವ್ಯೂಸ್​ನಲ್ಲಿ ಮಾತನಾಡುತ್ತಾ, ನನ್ನ ಇದು ಉಂಟಲ್ಲಾ, ಸ್ವರ ಬಿದ್ದು ಹೋಗಿದೆ, ಇಲ್ಲಿ ಎಂತದ್ದೂ ಇಲ್ಲ ಎಂದು ಧ್ವನಿ ತೋರಿಸುತ್ತಾ, ತಮಗೆ ಸಪೋರ್ಟ್ ಮಾಡಿರುವ ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ ರಕ್ಷಿತಾ ಶೆಟ್ಟಿ.

ನನಗೆ ಇದು ಕನಸು ಎನ್ನಿಸುತ್ತಿದೆ. ಇಲ್ಲಿಯವರೆಗೆ ಬರುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ. ದೇಶಮಾತ್ರವಲ್ಲದೇ ಹೊರದೇಶಗಳಲ್ಲಿನ ಕನ್ನಡಿಗರೂ ನನಗೆ ಸಪೋರ್ಟ್​ ಮಾಡಿರುವುದು ತುಂಬಾ ಖುಷಿಯಾಗ್ತಿದೆ ಎಂದು ತಮ್ಮದೇ ಭಾಷೆಯಲ್ಲಿ ಧನ್ಯವಾದ ಹೇಳಿದ್ದಾರೆ ಟಗರು ಪುಟ್ಟಿ.

ನಾನು ಬಿಗ್​ಬಾಸ್​​ ಮನೆಯಲ್ಲಿ ಇರುವಾಗ ಹೊರಗೆ ಏನಾಗುತ್ತದೆ ಎಂದು ಗೊತ್ತಿರಲಿಲ್ಲ. ಇಷ್ಟು ಮಂದಿ ನನಗೆ ಸಪೋರ್ಟ್​ ಮಾಡ್ತಾರೆ ಎಂದು ಗೊತ್ತೇ ಆಗಲಿಲ್ಲ. ಸಿಕ್ಕಾಪಟ್ಟೆ ಆಶ್ಚರ್ಯ ಆಗ್ತಿದೆ ಎಂದಿದ್ದಾರೆ ರಕ್ಷಿತಾ.

ತಮಗೆ ಸಿಕ್ಕಿರುವ ಸಪೋರ್ಟ್​ಗೆ ಏನು ಹೇಳಬೇಕು ಎಂದು ತಿಳಿಯದೇ ಭಾವುಕರಾಗಿರೋ ರಕ್ಷಿತಾ, ಇಷ್ಟೊಂದು ಟೈಮ್​ ತಗೊಂಡು, ಎಷ್ಟೊಂದು ಎಫರ್ಟ್​ ಹಾಕಿದ್ದೀರಲ್ವಾ, ತುಂಬಾ ಧನ್ಯವಾದ ಎಂದಿದ್ದಾರೆ.

Source link

Leave a Reply

Your email address will not be published. Required fields are marked *