ಪೋಲಿಸ್ ಜಪ್ತಿ ಮಾಡಿರುವ ವಸ್ತುಗಳು.
ವಿಜಯಪುರ, ಜನವರಿ 23: ಕಾರ್ಯಾಚರಣೆ ನಡೆಸುವ ಮೂಲಕ ವಿಜಯಪುರ ಗ್ರಾಮೀಣ ಪೊಲೀಸ್ ಅಂತರ್ ಜಿಲ್ಲೆ ಮತ್ತು ಭರ್ಜರಿ ಅಂತಾರಾಜ್ಯ ಕಳ್ಳರುಖದೀಮರು ಸೇರಿ ಒಟ್ಟು 14 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ ನಗದು, ಚಿನ್ನಾಭರಣ ಮತ್ತು ವಾಹನಗಳು ಸೇರಿ 1.17 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಖಾಕಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಪ್ತಿ ಮಾಡಿದ ಹಣ ಮತ್ತು ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಹಲವು ಪ್ರಕರಣಗಳನ್ನು ಭೇದಿಸಿದ ಖಾಕಿ
2025ರ ಮೇ 30ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿ 65 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿರುವ ಗ್ಯಾಂಗ್‌ನ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಕಲಬುರಗಿಯ ಪ್ರಶಾಂತ, ಆತನ ಪತ್ನಿ ಮಂಜುಳಾ, ಮಹಾರಾಷ್ಟ್ರದ ಅಂಕುಶ ಜಾಧವ್, ಗೋವರ್ಧನ ಪವಾರ, ಜಿಲ್ಲೆ ಭದ್ರಣ್ಣ ಶಿವು ಹಾಗೂ ಆತನ ಪತ್ನಿ ಶಿವಮೊಗ್ಗ ಆತನ ಪತ್ನಿಯನ್ನು ಬಂಧಿಸಿದ್ದಾರೆ. ಇನ್ನು ನಕಲಿ ಚಿನ್ನದ ನಾಣ್ಯಗಳನ್ನು ಅಸಲಿ ಎಂದು ನಂಬಿಸಿ ಮಹಾರಾಷ್ಟ್ರದ ಲಾತೂರ್ ಮೂಲದ ರಾಜಕುಮಾರ ಕುಂದರಗಿ ಎಂಬುವವರಿಗೆ ಮಾರಾಟ ಮಾಡಿದ ಆರೋಪದ ಮೇಲೆ ವಿಜಯನಗರ ಜಿಲ್ಲೆಯ ಮೂಲದ ಹಣಮಂತ ಕೊರಚರ, ರಾಜಾ ಕಾವಾಡಿ, ಹರೀಶ ಕೊರಚರ ಹಾಗೂ ಚಿರಂಜಿವಿ ಕೊರಚರ ಎಂಬ ನಾಲ್ವರನ್ನು ಬಂಧಿಸಿ ನಗದನ್ನು ವಶಕ್ಕೆ ಪಡೆದಿದ್ದಾರೆ. ವಿವಿಧ ಬೈಕ್ ಕಳವು ಪ್ರಕರಣಗಳನ್ನು ಭೇದಿಸಿದ್ದು, ವಿಜಯಪುರ ಜಿಲ್ಲೆಯ ಬಾಬು ಜಮಖಂಡಿ, ಸಿದ್ರಾಮ ಅರಕೇರಿ, ಮಂಜುನಾಥ ಉಕ್ಕಲಿ, ಆಕಾಶ ಮಠಪತಿ ಎಂಬುವವರನ್ನು ಬಂಧಿಸಿ 20 ಬೈಕ್‌ಗಳು ಮತ್ತು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು!
ಪೊಲೀಸರಿಗೆ ಸನ್ಮಾನ
ಜಿಲ್ಲೆಯ ಖದೀಮರ ಜೊತೆಗೆ ಅನ್ಯ ಜಿಲ್ಲೆ ಹಾಗೂ ಅಂತಾರಾಜ್ಯದ ಆರೋಪಿಗಳ ಕೈಗೂ ಕೋಳ ಹಾಕಿರುವ ಖಾಕಿ, ಮೋಸ ಹೋದವರಿಗೆ ಮತ್ತು ಕಳ್ಳತನಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವಿಜಯಪುರ ಗ್ರಾಮೀಣ ಡಿವೈಎಸ್ಪಿ ಟಿ. ಎಸ್. ಸುಲ್ಫಿ, ಇನ್ಸ್ ಪೆಕ್ಟರ್ ಗಳಾದ ರಾಯಗೊಂಡ ಜಾನರ, ರಮೇಶ ಆವಜಿ, ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಗಳಿಗೆ ಪ್ರಮಾಣಪತ್ರ ನೀಡಿ ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತು ಎಸ್ಪಿ ರಾಮನಗೌಡ ಹಟ್ಟಿ ಸನ್ಮಾನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.