
ನವೆಂಬರ್‌ನಲ್ಲಿ ಅಂದರೆ ಮಡುರೊ ಸೆರೆಹಿಡಿಯಲ್ಪಡುವ ಸರಿಸುಮಾರು ಎರಡು ತಿಂಗಳ ಮೊದಲು, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿರುವ ಡೆಲ್ಸಿ ರೊಡ್ರಿಗಸ್(Delcy Rodríguez) ಅವರು ತಮ್ಮ ಸಹೋದರ ಜಾರ್ಜ್ ರೊಡ್ರಿಗಸ್ ಅವರೊಂದಿಗೆ ಅಮೆರಿಕದ ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿ ಮಾಡಿದ್ದರು. ಅಮೆರಿಕಾದ ಅಧಿಕಾರಿಗಳ ಜೊತೆ ಅವರು ರಹಸ್ಯ ಮಾತುಕತೆ ನಡೆಸಿದ್ದರು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಈ ಒಪ್ಪಂದ ಹೇಗೆ ನಡೆಯಿತು?
ದಿ ಗಾರ್ಡಿಯನ್ ವರದಿಯ ಪ್ರಕಾರ, ಅಮೆರಿಕದ ಅಧಿಕಾರಿಗಳು ಮತ್ತು ಆಗ ವೆನಿಜುವೆಲಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಡೆಲ್ಸಿ ರೊಡ್ರಿಗಸ್ ನಡುವಿನ ಸಂವಹನವು ನವೆಂಬರ್ 2025 ರಲ್ಲಿ ಪ್ರಾರಂಭವಾಯಿತು. ಅದೇ ಸಮಯದಲ್ಲೇ ಡೊನಾಲ್ಡ್ ಟ್ರಂಪ್, ವೆನಿಜುವೆಲಾದ ಅಧ್ಯಕ್ಷರಾಗಿ ಮಡುರೊ ಅವರೊಂದಿಗೆ ನೇರವಾಗಿ ಮಾತನಾಡಿ ಅವರನ್ನು ಪಕ್ಷ ಬಿಡುವಂತೆ ಒತ್ತಾಯಿಸಿದ್ದರು. ಆದರೆ ಮಡುರೊ ಟ್ರಂಪ್ ಮನವಿಯನ್ನು ನಿರಾಕರಿಸಿದರು. ಆದರೆ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶಕ್ತಿ ಪ್ರದರ್ಶನ ಮಾಡಿ, ಮಡುರೋ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.