ಬೆಂಗಳೂರು, ಜನವರಿ 23: ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ ಸಿಗುತ್ತದೆ? ಚಿನ್ನವೋ, ಬೆಳ್ಳಿಯೋ ಅಥವಾ ಷೇರುಗಳೋ ಎಂದು ಯಾರಾದರೂ ಕೇಳಿದರೆ ಏನು ಹೇಳಬಹುದು? ಕಳೆದ ಒಂದು ವರ್ಷದಿಂದ ಮಾತ್ರವೇ ಮಾರುಕಟ್ಟೆಯನ್ನು ಗಮನಿಸುತ್ತಿರುವವರು ಯಾರಾದರೂ ಇದ್ದರೆ ಅವರು ಥಟ್ಟನೆ ಹೇಳುತ್ತಾರೆ ಹೆಸರು ಬೆಳ್ಳಿ ಅಥವಾ ಚಿನ್ನ. ಆದರೆ, ದೀರ್ಘಾವಧಿಯಲ್ಲಿ, ಅಂದರೆ ಐದಾರರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ಮೆಂಟ್ ಮಾಡುತ್ತಿರುವವರನ್ನು ಕೇಳಿದಾಗ ಷೇರುಪೇಟೆಯ ಹೆಸರು ಸೂಚಿಸುತ್ತಾರೆ. TV9 ಪಾಡ್ಕ್ಯಾಸ್ಟ್ ಕುರಿತು ಮಾತನಾಡುತ್ತಿದ್ದ ಹೂಡಿಕೆ ತಜ್ಞರುದ್ರಮೂರ್ತಿ (ರುದ್ರ ಮೂರ್ತಿ) ಅವರು ಅಂಕಿ ಅಂಶ ಸಮೇತ ಯಾವ್ಯಾವ ಹೂಡಿಕೆಗೆ ಎಷ್ಟು ರಿಟರ್ನ್ ಲಭ್ಯವಿದೆ ಎಂದು ಮಾಹಿತಿ ಇದೆ.
1986ರಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ 100 ಅಂಕಗಳು ಪ್ರಾರಂಭವಾಯಿತು. ಇವತ್ತು ಅದು 88,000 ಅಂಕಗಳನ್ನು ದಾಟಿದೆ. ಈ 40 ವರ್ಷದಿಂದ ಅದು ಕೊಟ್ಟಿರುವ ರಿಟರ್ನ್ ಶೇ. 82,000. ಇದೆ ವೇಳೆ, ಚಿನ್ನದ ಬೆಲೆ 1986ರಲ್ಲಿ 10 ಗ್ರಾಮ್ಗೆ 2,150 ರೂ ಇತ್ತು. ಇವತ್ತು ಅದು 1,50,000 ರೂ ದಾಟಿದೆ. ಬೆಳ್ಳಿ 1986ರಲ್ಲಿ ಒಂದು ಕಿಲೋಗೆ 4,000 ರೂ ಇತ್ತು. ಇವತ್ತು ಅದರ ಬೆಲೆ 3.60 ಲಕ್ಷ ರೂ ಆಗಿದೆ. ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಶೇ. 7,000 ಮತ್ತು ಶೇ. 8,000 ರಿಟರ್ನ್ಸ್ ಕೊಟ್ಟಿವೆ. ಚಿನ್ನ ಮತ್ತು ಬೆಳ್ಳಿ ಕೊಟ್ಟಿರ ಅಂದರೆ ಸೆನ್ಸೆಕ್ಸ್ ಹತ್ತು ಪಟ್ಟು ಹೆಚ್ಚು ಲಾಭ ಕೊಟ್ಟಿರುವ ಅಂಶವನ್ನು ರುದ್ರಮೂರ್ತಿಯಾಗಿದೆ.
ಹೂಡಿಕೆ ಮಾಡಬೇಕೆನ್ನುವವರು ದೀರ್ಘಾವಧಿಯಲ್ಲಿ ಯಾವ ಸರಕು ಎಷ್ಟು ಉತ್ತಮ ಸಾಧನೆ ತೋರಿದೆ ಎಂಬುದನ್ನು ಗಮನಿಸಬೇಕು ಎಂಬುದು ರುದ್ರ ಮೂರ್ತಿ ಅವರ ಸಲಹೆ.
ಇದನ್ನೂ ಓದಿ: ಇಂದು ಚಿನ್ನದ ದರ ಬೆಂಗಳೂರು: 10 ಗ್ರಾಂ ಚಿನ್ನದ ಬೆಲೆ 5,400 ರೂ ಏರಿಕೆ
ಚಿನ್ನ, ಬೆಳ್ಳಿ ಬೆಲೆ ಏರಲು ಏನು ಕಾರಣ?
ರುದ್ರಮೂರ್ತಿ ಅವರ ಪ್ರಕಾರ ಚಿನ್ನದ ಬೆಲೆ ಏರಲು ಪ್ರಮುಖ ಕಾರಣಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ನೀತಿ. ಜಾಗತಿಕ ಅನಿಶ್ಚಿತ ಸ್ಥಿತಿ ಮತ್ತೊಂದು ಕಾರಣ. ಸೆಂಟ್ರಲ್ ಬ್ಯಾಂಕುಗಳು ಹೆಚ್ಚಚ್ಚು ಚಿನ್ನವನ್ನು ಖರೀದಿಸುತ್ತಿರುವುದೂ ಮಗದೊಂದು ಕಾರಣ.
ಬೆಳ್ಳಿ ಬೆಲೆ ಇನ್ನೂ ಹೆಚ್ಚಿನ ವೇಗದಲ್ಲಿ ಏರಲು ಕಾರಣವೆಂದರೆ ಅದರ ಕೈಗಾರಿಕೆ ಬಳಕೆ. ಎಐ ಪೋಷಿಸಲು ಬೇಕಾದ ಸರ್ವರ್, ಇವಿ ವಾಹನ, ಸೋಲಾರ್ ಪ್ಯಾನಲ್ ಇತ್ಯಾದಿಗಳ ತಯಾರಿಕೆಗೆ ಸಿಲ್ವರ್ ಅಗತ್ಯವಿದೆ. ಹೀಗಾಗಿ, ಬೆಳ್ಳಿ ಬೆಲೆ ಒಂದು ಎರಡು ಪಟ್ಟು ಹೆಚ್ಚಾಗುತ್ತಿದೆ ಎಂದು ರುದ್ರಮೂರ್ತಿ.
ದೇಶದ ಜಿಡಿಪಿಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣ ಸಾಮಾನ್ಯ ಜನರು
ರುದ್ರಮೂರ್ತಿ ಮತ್ತೊಂದು ಕುತೂಹಲಕಾರಿ ಅಂಶವನ್ನು ಎತ್ತಿ ತೋರಿಸಿದ್ದಾರೆ. ಭಾರತದ ಸೆಂಟ್ರಲ್ ಬ್ಯಾಂಕ್ ಆರ್ ಬಿಐ ಬಳಿ 880 ಟನ್ ಚಿನ್ನ ಇದೆ. ಆದರೆ, ಸಾಮಾನ್ಯ ಭಾರತೀಯ ಜನರ ಬಳಿ 34,500 ಟನ್ ಚಿನ್ನ ಇದೆ. ಇದು ಇವತ್ತಿನ ಬೆಲೆಗೆ ಇವುಗಳ ಒಟ್ಟು ಮೌಲ್ಯ 5.7 ಟ್ರಿಲಿಯನ್ ಡಾಲರ್ ಆಗುತ್ತದೆ. ಷೇರು ಮಾರುಕಟ್ಟೆಯ ಒಟ್ಟು ಗಾತ್ರ ಸುಮಾರು 4 ಭಾರತದ ಟ್ರಿಲಿಯನ್ ಡಾಲರ್ಗಿಂತ ತುಸು ಹೆಚ್ಚಿರಬಹುದು. ಜನರ ಬಳಿ ಇದಕ್ಕೂ ಹೆಚ್ಚಿನ ಮೌಲ್ಯದ ಚಿನ್ನ ಇದೆ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು?
ಕಾಪರ್, ಅಲುಮಿನಿಯಂ ಮೇಲೆ ಹೂಡಿಕೆ ಮಾಡಬಹುದೇ?
ಕಾಪರ್ ಮತ್ತು ಅಲೂಮಿಯಮ್ಗಳು ಭವಿಷ್ಯದ ಬೆಳ್ಳಿ ಎಂದು ರುದ್ರಮೂರ್ತಿ ಬಣ್ಣಿಸುತ್ತಾರೆ. ಚಿನ್ನ ಮತ್ತು ಸಿಲ್ವರ್ಗಳಲ್ಲಿ ಐಟಿಎಫ್ ಮೂಲಕ ಹೂಡಿಕೆ ಮಾಡಬಹುದು. ಆದರೆ, ಕಾಪರ್ ಮತ್ತು ಅಲೂಮಿನಿಯಮ್ಗೆ ಇಟಿಎಫ್ಗಳಿಲ್ಲ. ತಾಮ್ರದ ಮೇಲೆ ಹೂಡಿಕೆ ಮಾಡಬೇಕೆನ್ನುವವರು ಹಿಂದೂಸ್ತಾನ್ ಕಾಪರ್ ಎಂಬ ತಾಮ್ರ ತಯಾರಕ ಕಂಪನಿಯ ಶೇರಿನ ಮೇಲೆ ಹೂಡಿಕೆ ಮಾಡಬಹುದು. ನಾಲ್ಕೋ, ಹಿಂಡಾಲ್ಕೋ ಇತ್ಯಾದಿ ಅಲೂಮಿನಿಯಂ ತಯಾರಕ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಬಹುದು. ಅಥವಾ ನಿಫ್ಟಿ ಮೆಟಲ್ ಇಂಡೆಕ್ಸ್ನಲ್ಲಿ ಹೂಡಿಕೆ ಮಾಡಬಹುದು ಎಂದು ರುದ್ರ ಮೂರ್ತಿ ಅವರು ಟಿವಿ9 ಪಾಡ್ಕ್ಯಾಸ್ಟ್ನಲ್ಲಿ ಸಲಹೆ ನೀಡುತ್ತಾರೆ.
ಮಾಲತೇಶ್ ಅವರೊಂದಿಗಿನ ಪಾಡ್ಕ್ಯಾಸ್ಟ್ನ ವಿಡಿಯೋ ಲಿಂಕ್ ಇಲ್ಲಿದೆ:
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ