ಬೆಂಗಳೂರು, ಜನವರಿ 23: ಬೈಕ್ ಟ್ಯಾಕ್ಸಿಗೆ ಕರ್ನಾಟಕ ಹಸಿರು ಸಿಗ್ನಲ್ ನೀಡಿರುವ ಹಿನ್ನೆಲೆ ಅದನ್ನೇ ನಂಬಿ ಜೀವನ ನಡೆಸುತ್ತಿದ್ದವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ನಮ್ಮ ಹೊರಕ್ಕೆ ಫಲ ಸಿಕ್ಕಿದೆ, ಕೋರ್ಟ್ ಹೇಳುವಂತೆ ರೂಲ್ಸ್ ಫ್ರೇಮ್ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಬೇಕಾಗಿದೆ. ಬೈಕ್ ಟ್ಯಾಕ್ಸಿ ವಿಚಾರವಾಗಿ ಈ ಹಿಂದೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದೆವು. ಆ ವೇಳೆ ಅಗತ್ಯ ಪ್ರಯತ್ನ ಮಾಡೋದಾಗಿ ಅವರು ಹೇಳಿದ್ದರು. ಅದರಂತೆ ಈಗ ನಮ್ಮ ಪರ ತೀರ್ಪು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವೈಟ್ ನಂಬರ್ ಪ್ಲೇಟ್ ನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಯಬೇಕು, ಟ್ಯಾಕ್ಸ್ ಖರೀದಿಸಲು ನಾವು ರೆಡಿ ಇದ್ದೇವೆ. 15 ರಾಜ್ಯಗಳಲ್ಲಿ ವೈಟ್ ಪ್ಲೇಟ್ ಬೈಕ್ ಟ್ಯಾಕ್ಸಿಗಳಿಗೆ ಈಗಾಲೇ ಅನುಮತಿ ನೀಡಿದೆ. ಈ ಬಗ್ಗೆ ಸಾರಿಗೆ ಸಚಿವರಿಗೆ, ನ್ಯಾಯಾಲಯಕ್ಕೆ ನೀಡಬೇಕಾಗಿದೆ ಎಂದು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.