Headlines

ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್​ನಲ್ಲಿ ಗಮನಿಸಬೇಕಾದ ಸಂಗತಿಗಳಿವು

ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್​ನಲ್ಲಿ ಗಮನಿಸಬೇಕಾದ ಸಂಗತಿಗಳಿವು


ಜನವರಿ 23: ಟ್ಯಾರಿಫ್, ಯುದ್ಧ, ದರ್ಪ, ಭಯ, ಅನಿಶ್ಚಿತತೆ ಇತ್ಯಾದಿ ಬಿಕ್ಕಟ್ಟಿನ ಸ್ಥಿತಿಯಲ್ಲಿ ಜಗತ್ತು ಇರುವ ಹೊತ್ತಲ್ಲೇ ಭಾರತ ಸರ್ಕಾರ ಮುಂಬರುವ ವರ್ಷಕ್ಕೆ ಬಜೆಟ್ (ಕೇಂದ್ರ ಬಜೆಟ್) ರೂಪಿಸಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಆರ್ಥಿಕತೆಯ ಬೆಳವಣಿಗೆಗೆ ಪೂರಕವಾದ ಪದಾರ್ಥಗಳ ಬಜೆಟ್ನಿಂದ ನಿರೀಕ್ಷಿಸಲಾಗುತ್ತಿದೆ. ಸಾಮಾನ್ಯ ರೀಟೇಲ್ ಹೂಡಿಕೆದಾರರು ಈ ಬಜೆಟ್‌ನಲ್ಲಿ ಏನು ನಿರೀಕ್ಷಿಸಬಹುದು, ಅಥವಾ ಗಮನಿಸಬಹುದೇ? ಇಲ್ಲಿದೆ ಒಂದಷ್ಟು ವಿವರ.

ಕ್ಯಾಪಿಟಲ್ ಗೇನ್ ಟ್ಯಾಕ್ಸ್ ನಲ್ಲಿ ಬದಲಾವಣೆ

ಸರ್ಕಾರ ಕಳೆದ ಒಂದು ವರ್ಷದಿಂದ ಜಿಎಸ್ಟಿ ಮತ್ತು ಆದಾಯ ತೆರಿಗೆಯನ್ನು ಕಡಿಮೆಗೊಳಿಸಿದೆ ಮತ್ತು ಸರಳೀಕೃತಗೊಳಿಸಿದೆ. ಆದರೆ, ಷೇರು ಮಾರುಕಟ್ಟೆಯ ರೀಟೇಲ್ ಹೂಡಿಕೆದಾರರಿಗೆ ಟ್ಯಾಕ್ಸ್ ಹೊರೆ ಹೆಚ್ಚು. ಎರಡು ವರ್ಷದ ಹಿಂದಿನ ಬಜೆಟ್‌ನಲ್ಲಿ ಸರ್ಕಾರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ. 12.5ಕ್ಕೆ ಏರಿಸಿತ್ತು. ಅದರ ಜೊತೆಗೆ, ವಿನಾಯಿತಿ ಮಿತಿಯನ್ನು 1 ಲಕ್ಷ ರೂನಿಂದ 1.25 ಲಕ್ಷ ರೂಗೂ ಏರಿಸಿತ್ತು. ಈಗ ಎಲ್ಟಿಸಿಜಿ ಟ್ಯಾಕ್ಸ್ ಅನ್ನು ಕಡಿಮೆಗೊಳಿಸಲಿ ಮತ್ತು ಎಕ್ಸೆಂಪ್ಷನ್ ಲಿಮಿಟ್ ಏರಲಿ ಎಂದು ರೀಟೇಲ್ ಹೂಡಿಕೆದಾರರು ಬಯಸುತ್ತಿದ್ದಾರೆ. ಎಲ್ ಟಿಸಿಜಿಯನ್ನು ಕಡಿಮೆ ಮಾಡಿದರೆ ದೀರ್ಘಾವಧಿ ಹೂಡಿಕೆಗೆ ಉತ್ತೇಜನ ಸಿಕ್ಕಬಹುದು.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್‌ನಲ್ಲಿದೆ?

ಷೇರು ಖರೀದಿಸಿ 1 2 ತಿಂಗಳ ನಂತರ ಮಾರಿದರೆ ಅದಕ್ಕೆ ಎಲ್ಟಿಸಿಜಿ ಅನ್ವಯವಾಗುತ್ತದೆ. 12 ತಿಂಗಳ ಒಳಗೆ ಮಾರಿದರೆ, ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯವಾಗುತ್ತದೆ. ಸದ್ಯ ಎಸ್ಟಿಸಿ ಷೇರುಗಳಿಗೆ ಶೇ. 20ರಷ್ಟಿದೆ. ಷೇರುಗಳು, ಈಕ್ವಿಟಿ ಫಂಡ್‌ಗಳಿಗೆ ಶೇ. 20 ಎಲ್ಟಿಸಿಜಿ ಇದೆ. ಬೇರೆ ಆಸ್ತಿಗಳ ಮಾರಾಟದಿಂದ ಬಂದ ಲಾಭವಾದರೆ ಅದು ವ್ಯಕ್ತಿಯ ಆದಾಯ ತೆರಿಗೆ ಸ್ಲಾಬ್ ದರಗಳು ಅನ್ವಯವಾಗುತ್ತವೆ.

ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಾಗುವ ನಿರೀಕ್ಷೆ

ಕಳೆದ ಕೆಲ ವರ್ಷಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಮುಖ್ಯ ಶಕ್ತಿಯಾಗಿರುವುದು ಸರ್ಕಾರದ ಬಂಡವಾಳ. ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳಿಗೆ ಸರ್ಕಾರದಿಂದ ಸಾಕಷ್ಟು ಬಂಡವಾಳ ವೆಚ್ಚ. ಜೊತೆಗೆ, ಡಿಫೆನ್ಸ್, ವಿದ್ಯುತ್, ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಸರ್ಕಾರದಿಂದ ಹಣ ಹರಿದುಹೋಗುತ್ತದೆ. ಆರ್ಥಿಕ ಪ್ರಗತಿಗೆ ಕಾರಣವಾಗುವ ಸೆಕ್ಟರ್‌ಗಳಿಗೆ ಬಜೆಟ್‌ನಲ್ಲಿ ಎಷ್ಟು ಮಹತ್ವ ಕೊಡುವುದಿಲ್ಲ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ: ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಆರೋಗ್ಯ ಉದ್ಯಮದ ಬಜೆಟ್ ನಿರೀಕ್ಷೆಗಳು…

ವಿತ್ತೀಯ ಕೊರತೆ ತಗ್ಗಿಸುವುದು ಸೇರಿದಂತೆ ಹಣಕಾಸು ಶಿಸ್ತು

ಸರ್ಕಾರವು ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್ ಅನ್ನು ತಗ್ಗಿಸುವತ್ತ ಗಮನ ಕೊಡುತ್ತಿದೆ. ಸಾಲವನ್ನೂ ಕೂಡ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಮುಂದಿನ ಐದಾರು ಪಡೆದ ಸಾಲವು ದೇಶದ ಜಿಡಿಪಿಯ ಶೇ. 50ಕ್ಕಿಂತ ಕಡಿಮೆ ಇರುವಂತೆ ಸರ್ಕಾರ ಗುರಿ ಇಟ್ಟಿದೆ. ಈ ರೀತಿ ಆರ್ಥಿಕ ಶಿಸ್ತು ಕಾಯ್ದುಕೊಂಡಾಗ ವಿದೇಶೀ ಹೂಡಿಕೆದಾರರು ದೇಶದ ಮಾರುಕಟ್ಟೆಗೆ ಬರುವುದು ಸರ್ಕಾರ. ಹೂಡಿಕೆಗಳು ಹೆಚ್ಚಾದಾಗ ಮಾರುಕಟ್ಟೆ ಬೆಳೆಯುತ್ತದೆ, ಹೆಚ್ಚು ರಿಟರ್ನ್ಸ್ ಕೊಡುತ್ತದೆ. ಹೀಗಾಗಿ, ಬಜೆಟ್‌ನಲ್ಲಿ ಫಿಸ್ಕಲ್ ಡೆಫಿಸಿಟ್‌ಗೆ ಸರ್ಕಾರ ಎಷ್ಟು ಗುರಿ ಇಟ್ಟಿದೆ ಎಂಬುದನ್ನು ಗಮನಿಸಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *