
ಉತ್ಖನನಕ್ಕೆ ಅಡ್ಡಿಪಡಿಸುತ್ತಿರುವುದನ್ನು ಕಂಡ ಲಕ್ಕುಂಡಿಯ ಗ್ರಾಮಸ್ಥರು ಪ್ರತಿಭಟನಾಕಾರನ ವಿರುದ್ಧ ತಿರುಗಿಬಿದ್ದರು. ‘ಹಲವು ದಶಕಗಳ ನಂತರ ನಮ್ಮೂರಿನ ಇತಿಹಾಸ ಹೊರಬರುತ್ತಿದೆ, ಇಂತಹ ಸಮಯದಲ್ಲಿ ಬೆಂಗಳೂರಿನಿಂದ ಬಂದು ಇಲ್ಲಿ ಯಾಕೆ ಹೈಡ್ರಾಮಾ ಮಾಡುತ್ತಿದ್ದೀರಿ?’ ಎಂದು ಗ್ರಾಮಸ್ಥರು ಅಶ್ವಥ್‌ನನ್ನು ಪ್ರಶ್ನಿಸಿದರು.
ಕಾರ್ಮಿಕರ ಪರ ಹೋರಾಟದ ಹೆಸರಲ್ಲಿ ಇತಿಹಾಸದ ಶೋಧಕ್ಕೆ ಅಡ್ಡಿ ಮಾಡುತ್ತಿರುವುದಕ್ಕೆ ತೀವ್ರ ಛೀಮಾರಿ ಹಾಕಿದರು. ಗ್ರಾಮಸ್ಥರು ಮತ್ತು ಹೋರಾಟಗಾರನ ನಡುವೆ ಕೆಲಕಾಲ ತೀವ್ರ ವಾಕ್ಸಮರ ನಡೆಯಿತು.
ನಿಧಿ ಹಿಂದಿರುಗಿಸಿದ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯತ್‌ನಿಂದ ಬಂಪರ್ ಕೊಡುಗೆ ಘೋಷಣೆ