ಬಿಗ್‌ಬಾಸ್ 12 ವಿನ್ನರ್ ಗಿಲ್ಲಿ ನಟ, ರನ್ನರ್ ಅಪ್ ರಕ್ಷಿತಾ ಶೆಟ್ಟಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ರಕ್ಷಿತಾ ತನ್ನ ಲೇಡಿ ವರ್ಷನ್ ಇದ್ದಂತೆ, ಆಕೆಯಲ್ಲಿ ತನ್ನ ಅಮ್ಮನನ್ನು ಕಂಡೆ ಎಂದು ಗಿಲ್ಲಿ ಹೇಳಿಕೊಂಡಿದ್ದಾರೆ. ರಕ್ಷಿತಾ ಬಗ್ಗೆ ಗಿಲ್ಲಿ ಹೇಳಿದ್ದೇನು?

ಬಿಗ್‌ಬಾಸ್ 12 (Bigg Boss 12) ಪಯಣ ಮುಗಿದಿದೆ. ಗಿಲ್ಲಿ ನಟ ವಿನ್ನರ್ ಆಗಿ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಅವರಿಬ್ಬರೂ ಭಾರಿ ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ.

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ನನಗೆ ಗಿಲ್ಲಿಯಂಥದ್ದೇ ಹುಡುಗ ಬೇಕು ಎಂದು ಹೇಳುವ ಮೂಲಕ, ಗಿಲ್ಲಿಯ ಮೇಲೆ ಕ್ರಷ್ ಆಗಿದೆ ಎಂದೇ ಬಿಂಬಿಸಲಾಗಿತ್ತು. ಅದಕ್ಕೆ ಇದಾಗಲೇ ಸಾಕಷ್ಟು ಬಾರಿ ಇಬ್ಬರೂ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಗಿಲ್ಲಿಯಂಥ ಹುಡುಗ ಅಂದೆ, ಅದ್ರೆ ಅವ್ರೇ ಅಂದಿಲ್ಲ ಎಂದೆಲ್ಲಾ ರಕ್ಷಿತಾ ಹೇಳಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಇರುವಾಗ ಇದೇ ಕಾರಣಕ್ಕೆ ಖುದ್ದು ಗಿಲ್ಲಿ ನಟ (Bigg Boss Gilli Nata) ಕೂಡ ಸಾಕಷ್ಟು ಕಿಚಾಯಿಸಿದ್ದು ಇದೆ. ಕಾವ್ಯಾನ ಲವ್ ಮಾಡುವಾಗ ರಕ್ಷಿತಾ ಮಧ್ಯೆ ಪ್ರವೇಶಿಸಿದ್ಲು ಎಂದೆಲ್ಲಾ ತಮಾಷೆ ಮಾಡಿದ್ದಾರೆ.

ಇದೀಗ ರಕ್ಷಿತಾ ಶೆಟ್ಟಿಯ ಬಗ್ಗೆ ಗಿಲ್ಲಿ ನಟ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ. ಆಕೆಯ ಗುಣ ನನ್ನ ರೀತಿಯೇ ಇದೆ. ಅವರು ನನ್ನ ಲೇಡಿ ವರ್ಷನ್ ಅಷ್ಟೇ. ನನಗೆ ಯಾವೆಲ್ಲಾ ಸ್ವಭಾವ ಇದ್ಯೋ, ಅದೇ ರೀತಿ ಆಕೆಗೂ ಇದೆ. ಅದೇ ಕಾರಣಕ್ಕೆ ನಾನು ವಂಶದ ಕುಡಿ ಎನ್ನುತ್ತಿದ್ದೆ ಎಂದಿದ್ದಾರೆ.

ಆಕೆ ಕೆಲಸ ಮಾಡುವುದರಲ್ಲಿ ಮುಂದು. ಯಾವಾಗಲೂ ಬೇಜಾರು ಮಾಡಿಕೊಳ್ತಿರಲಿಲ್ಲ. ಅವರು ಕೆಲಸ ಮಾಡುವಾಗ, ಎಲ್ಲರ ಆರೈಕೆ ಮಾಡುವಾಗ, ಅಡುಗೆ ಮಾಡುವಾಗ ಆಕೆಯಲ್ಲಿ ನನ್ನ ಅಮ್ಮನನ್ನೇ ಕಾಣುತ್ತಿದ್ದೆ. ತುಂಬಾ ಒಳ್ಳೆಯ ಹುಡುಗಿ ಎಂದು ಗಿಲ್ಲಿ ಭಾವುಕರಾಗಿದ್ದಾರೆ.

ಒಟ್ಟಿನಲ್ಲಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ (Bigg Boss Gilli Nata and Rakshita Shetty) ಇಬ್ಬರೂ ಕೋಟ್ಯಂತರ ಜನರ ಮನಸ್ಸನ್ನು ಗೆದ್ದು ಬೀಗುತ್ತಿದ್ದಾರೆ. ಇದಾಗಲೇ ಇಬ್ಬರಿಗೂ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆ.

Source link
BBK 12: ರಕ್ಷಿತಾ ಶೆಟ್ಟಿ ನನ್ನ ಲೇಡಿ ವರ್ಷನ್: ಅವ್ರಲ್ಲಿ ನನ್ನ ಅಮ್ಮನನ್ನೇ ಕಂಡೆ- ಗಿಲ್ಲಿ ನಟ ಭಾವುಕ