ಬೆಂಗಳೂರು, ಜನವರಿ 23: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೇಂದ್ರ ಕಚೇರಿಯಲ್ಲಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯ ಇಂದು ಲೋಕಾರ್ಪಣೆಗೊಂಡಿದೆ. ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರ ಮಾಡಲಾಗಿತ್ತು, ಕಳೆದ ಮೂರು ದಿನಗಳಿಂದ ಜಿಬಿಎ ಕೇಂದ್ರ ಕಚೇರಿಯನ್ನು ಕಂಗೊಳಿಸಿತು.
800 ವರ್ಷಗಳ ಸುದೀರ್ಘ ಇತಿಹಾಸ
ಉದ್ಯಾನನಗರಿ ಏಳು ಬೆಂಗಳೂರಿನ ಜಿಬಿಎ ಕೇಂದ್ರ ಕಚೇರಿಯಲ್ಲಿರುವ ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯ ಸರಿ ಸಮರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಬೆಂಗಳೂರಿನ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿ ಪ್ರಸಿದ್ಧಿ ಪಡೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಏಳು ಸಹಕಾರ, ಸಹಕಾರ ಮತ್ತು ಬೆಂಬಲಗಳಿಂದ ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯದ ಉದ್ಘಾಟನೆ ಮತ್ತು ದೇವತಾ ಪೂಜಾ ಕಾರ್ಯಕ್ರಮಕ್ಕೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಇದನ್ನೂ ಓದಿ: 8ನೇ ದಿನ ಉತ್ಖನನದಲ್ಲಿ ಅಪರೂಪದ ವಸ್ತು ಪತ್ತೆ: ಲಕ್ಕುಂಡಿ ನೈಜ ಗತವೈಭವ ಈಗ ಆರಂಭ
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ದೇವರ ಪ್ರತಿಷ್ಠಾಪನೆ ಮಾಡಿದ್ದು, ಜೊತೆಗೆ ಸಪ್ತಮಾತೃಕಾ ದುರ್ಗಾ, ಶ್ರೀ ಲಕ್ಷ್ಮೀ ಸರಸ್ವತಿ ಹೋಮ, ತತ್ವನ್ಯಾಸ ಕಾಲನ್ಯಾಸ ಹೋಮ, ಕಲಾ ಹೋಮ, ನವ ಚಂಡಿಕಾ, ನವ ಚಂಡಿಕಾ ಹೋಮ, ಕುಂಭಾಭಿಷೇಕ, ವಿಶೇಷ ದುರ್ಗಾ ದೀಪ ನಮಸ್ಕಾರ ಹಾಗೂ ದೇವತಾ ಕಾರ್ಯಕ್ರಮ ನಡೆಯಿತು.
ದೇವಾಲಯದ ಜೀರ್ಣೋದ್ದಾರದ ಮಹತ್ಕಾರ್ಯಕ್ಕಾಗಿ ಸಂಘದ ವತಿಯಿಂದ ಪ್ರತಿ ನೌಕರರಿಂದ ತಲಾ ಒಂದು ಸಾವಿರ ರೂ. ಕಟಾವಣೆ ಮತ್ತು ಆರ್ಥಿಕವಾಗಿ ಸಹಾಯ ನೀಡಿ ಅಂದಾಜು 1 ಕೋಟಿ 60 ಲಕ್ಷ ರೂ. ಜೀರ್ಣೋದ್ಧಾರಕ್ಕೆ ನೌಕರರ ವರ್ಗದಿಂದ ದೇಣಿಗೆ ಕೊಡುಗೆ. ಹೆಚ್ಚುವರಿಯಾಗಿ ಪಾಲಿಕೆ ನೌಕರರ ಸಹಕಾರ ಸಂಘದಿಂದ 20 ಲಕ್ಷ ರೂ ಉದಾರ ದೇಣಿಗೆ ನೀಡಿ ದೇವಸ್ಥಾನದ ನವೀಕರಣಕ್ಕೆ ಕೈಜೋಡಿಸಲಾಗಿದೆ.
ಇದನ್ನೂ ಓದಿ: ಗದಗ: ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್
ಒಟ್ಟಾರೆಯಾಗಿ ಹಲವು ವರ್ಷಗಳಿಂದ ದೇವಸ್ಥಾನದ ಶಿಥಿಲ ವ್ಯವಸ್ಥೆ ಇಲ್ಲದೆ ಹಳೆ ದೇವಸ್ಥಾನ ಹಾಳಾಗಿತ್ತು. ನೌಕರರ ಪ್ರತಿಯಿಂದ ತಲಾ ಇಂತಿಷ್ಟು ಹಣವನ್ನು ನೀಡುವ ಮೂಲಕ ಆರ್ಥಿಕವಾಗಿ ಸಹಾಯ ನೀಡುವ ಮೂಲಕ ದೇವಸ್ಥಾನದ ನವೀಕರಣಕ್ಕೆ ಕೈಜೋಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 9:47 pm, ಶುಕ್ರ, 23 ಜನವರಿ 26