ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಭಾರತ ಮಹಿಳಾ ತಂಡದ ಸೂಪರ್ ಸ್ಟಾರ್ ಸ್ಮೃತಿ ಮಂಧಾನ (ಸ್ಮೃತಿ ಮಂಧಾನ) ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (palash muchhal) ಅವರೂ ವೈವಾಹಿಕ ಜೀವನಕ್ಕೆ ಕಾಲಿರಿಸಿ ತಿಂಗಳುಗಳನ್ನು ಕಳೆದಿದ್ದರು. ಆದರೆ ಮದುವೆಗೆ ಇನ್ನೊಂದು ದಿನ ಬಾಕಿ ಇರುವಾಗ ಮದುವೆ ಮುರಿದುಬಿದ್ದಿತ್ತು. ಆ ಸಮಯದಲ್ಲಿ ಸ್ಮೃತಿ ಅವರ ತಂದೆಗೆ ಅನಾರೋಗ್ಯದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಕಳೆದ ಡಿಸೆಂಬರ್ನಲ್ಲಿ ಈ ಮದುವೆ ರದ್ದಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಯಾವ ಕಾರಣಕ್ಕೆ ಮದುವೆ ರದ್ದಾಯಿತು ಎಂಬುದರ ಬಗ್ಗೆ ಖಚಿತವಾಗಿ ಏನನ್ನು ಹೇಳಲಿಲ್ಲ. ಆದರೀಗ ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿದ್ಯಾನ್ ಮಾನೆ, ಪಲಾಶ್ ಮುಚ್ಚಲ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದು, ಮದುವೆ ನಿಲ್ಲಲು ಕಾರಣವೇನು ಮತ್ತು ಮದುವೆಯ ಹಿಂದಿನ ದಿನ ಏನೆಲ್ಲ ನಡೆದಿದೆ ಎಂದು ವಿವರಿಸಿದ್ದಾರೆ.
ಮದುವೆ ರದ್ದಾಗಲು ಇದೇ ಕಾರಣ?
ಮದುವೆ ಅಂದು ಮನೆಯಲ್ಲಿ ನಡೆದಿದ್ದೇನು ಎಂದು ವಿವರಿಸಿರುವ ವಿದ್ಯಾನ್ ಮಾನೆ, ‘ಮದುವೆ ಸಮಾರಂಭದಲ್ಲಿ ನಾನು ಕೂಡ ಹಾಜರಿದ್ದೆ. ಅಂದು ಪಲಾಶ್ ಒಬ್ಬ ಮಹಿಳೆಯ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಅದು ಭಯಾನಕ ದೃಶ್ಯವಾಗಿತ್ತು. ಇದಾದ ಬಳಿಕ ಪರಿಸ್ಥಿತಿ ತುಂಬಾ ಉದ್ವಿಗ್ನವಾಯಿತು, ಭಾರತೀಯ ಮಹಿಳಾ ಕ್ರಿಕೆಟಿಗರು ಪಲಾಶ್ ಅವರನ್ನು ಥಳಿಸಿದರು. ಇದಾದ ಬಳಿಕ ಮದುವೆ ಮುರಿದುಬಿದ್ದಿತು’
ಈ ಪಲಾಶ್ ವಿರುದ್ಧ ವಂಚನೆ ಮತ್ತು ಆರ್ಥಿಕ ದುರುಪಯೋಗದ ಗಂಭೀರ ಆರೋಪಗಳನ್ನು ಹೊರಿಸಿರುವ ವಿದ್ಯಾನ್ ಮಾನೆ, ‘ಪಲಾಶ್ ಹೆಸರಿನಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದಾರೆ, ಆದರೆ ಆ ಚಿತ್ರವನ್ನು ನಿರ್ಮಿಸಲಾಗಿಲ್ಲ ಅಥವಾ ಹಣವನ್ನು ಹಿಂತಿರುಗಿಸಲಾಗಿಲ್ಲ. ನಾನು ಸ್ಮೃತಿಯ ಕುಟುಂಬದ ಮೂಲಕ ಪಲಾಶ್ ಅವರನ್ನು ಭೇಟಿಯಾದೆ. ಈ ಸಮಯದಲ್ಲಿ ಪಲಾಶ್ ನನ್ನ ಬಳಿ ಸಿನಿಮಾ ನಿರ್ದೇಶನದ ಬಗ್ಗೆ. ಜೊತೆಗೆ ಆರು ತಿಂಗಳೊಳಗೆ ಸಿನಿಮಾವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ. ಹೀಗಾಗಿ ನಾನು ಪಾಲಾಶ್ ಸಿನಿಮಾದ ಮೇಲೆ ಸುಮಾರು 40 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಆದಾಗ್ಯೂ, ಮದುವೆ ರದ್ದಾದ ನಂತರ ಪಲಾಶ್ ನನ್ನ ಫೋನ್ ರಿಸೀವ್ ಮಾಡುತ್ತಿಲ್ಲ.
ನ. 23 ರಂದು ಮದುವೆ ನಡೆಯಬೇಕಿತ್ತು
ಮೇಲೆ ಹೇಳಿದಂತೆ ಸ್ಮೃತಿ ಮಂಧಾನ ಅವರ ವಿವಾಹವು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನವೆಂಬರ್ 23, 2025 ರಂದು ನಿಗದಿಯಾಗಿತ್ತು. ಆದಾಗ್ಯೂ, ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರ ಹಠಾತ್ ಅನಾರೋಗ್ಯದಿಂದಾಗಿ ಸಮಾರಂಭವನ್ನು ನಿಲ್ಲಿಸಲಾಯಿತು. ಇದೆ ವೇಳೆ ಪಲಾಶ್ ಕೂಡ ಅನಾರೋಗ್ಯಕ್ಕೆ ಒಳಗಾದರು. ಹೀಗಾಗಿ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಕೆಲವು ದಿನಗಳ ನಂತರ, ಮಂಧಾನ ಅವರು ವಿವಾಹವನ್ನು ರದ್ದುಗೊಳಿಸಿದರು. ಇದೀಗ ಸ್ಮೃತಿ ಅವರ ಬಾಲ್ಯದ ಗೆಳೆಯನ ಈ ರೀತಿಯ ಹೇಳಿಕೆ ಎಲ್ಲರನ್ನೂ ಅವರಕ್ಕೊಳಗಾಗುವಂತೆ ಮಾಡಿದೆ.
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:14 pm, ಶುಕ್ರ, 23 ಜನವರಿ 26