ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 24 ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಎಲ್ಲರನ್ನೂ ನೀವು ಸಮಾನವಾಗಿ ಕಾಣುತ್ತಿಲ್ಲ ಎಂಬ ಆರೋಪವನ್ನು ಹೊತ್ತಿಕೊಳ್ಳುತ್ತದೆ. ನೀವು ಯಾವ ಸಮಜಾಯಿಷಿಯನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ಹಿಂದೆ ಯಾವಾಗಲೋ ನೀವಾಡಿದ ಮಾತು, ನಡೆದುಕೊಂಡ ರೀತಿಯನ್ನು ಉದಾಹರಿಸಿ, ನಿಮ್ಮನ್ನು ನಿಂದಿಸುತ್ತದೆ. ನೀವು ಯಾರ ನೆರವಿಗೆ ಬರಬಹುದು ಎಂದು ಭಾವಿಸಿರುತ್ತೀರೋ ಅವರು ಸಹ ನಿಮ್ಮ ಸಹಾಯಕ್ಕೆ ಬರುವುದಕ್ಕೆ ಆಗಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೀಗಾದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಉತ್ತಮ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ತಂದೆ- ತಾಯಿಯ ಆಶೀರ್ವಾದ ನಿಮ್ಮ ಮೇಲೆ ಅತ್ಯುತ್ತಮವಾಗಿ ಇರಲಿದೆ. ಬಾಹ್ಯದಿಂದ ನಿಮ್ಮ ಮೇಲೆ ಒತ್ತಡ ಬಂದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳಲ್ಲಿ ಇರುವಂಥವರಿಗೆ ನಾಯಕತ್ವ ವಹಿಸುವಂಥ ಅವಕಾಶಗಳಿವೆ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗೆ ಇದೆ. ಕರ್ಟನ್ ಮೊದಲಾದ ವಸ್ತುಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ. ಹೊಸ ಜವಾಬ್ದಾರಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ.
ಇದನ್ನೂ ಓದಿ: ಜನವರಿ 25 ರಂದು ಕೇತು ಸಂಚಾರ; ಈ ಮೂರು ರಾಶಿಗೆ ಅದೃಷ್ಟವೋ ಅದೃಷ್ಟ
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಬ್ಯಾಂಕ್ ವ್ಯವಹಾರಗಳ ಮೇಲೆ ನಿರೀಕ್ಷೆ ಇಟ್ಟುಕೊಂಡು ಮುಂದುವರಿದಲ್ಲಿ ಅಂದುಕೊಂಡಂತೆ ಕೆಲಸ ಆಗದೆ ಬೇಸರಕ್ಕೆ ಕಾರಣ ಆಗಲಿದೆ. ಮನೆ ನಿರ್ಮಾಣ ಮಾಡುವಲ್ಲಿ, ಅದಕ್ಕೆ ಹಣಕಾಸಿನ ಸಮಸ್ಯೆ ಎಂದಾದಲ್ಲಿ ಅದು ಉಲ್ಬಣಗೊಳ್ಳುತ್ತದೆ. ಸ್ನೇಹಿತರು ಅಥವಾ ಸ್ವೀಕರಿಸಿ ಅಥವಾ ನೀವು ಬಹಳ ಗೌರವಿಸುವ ವ್ಯಕ್ತಿಗಳು ಒತ್ತಡ ತಂದರು ಎಂಬ ಕಾರಣಕ್ಕಾಗಿ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಲು ಹೋಗಬೇಡಿ. ನಿಮಗೇ ಸರಿ ಅನಿಸುವ ತನಕ ಯಾವ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದಿರಿ.
ಲೇಖನ- ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ