
ಈ ಹಾರರ್ ಥ್ರಿಲ್ಲರ್ ಚಿತ್ರವು ಒಟ್ಟು 16 ಆಸ್ಕರ್ ನಾಮಿನೇಷನ್ ಪಡೆದಿದೆ. ಈ ಸಾಧನೆ ಮಾಡಿದ ಮೊದಲ ಚಿತ್ರ ಇದು. ಇದು, ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ನಿರ್ಮಿಸಿದ ಸಿನ್ನರ್ಸ್ ಸಿನಿಮಾ (Sinners). ಈ ಚಿತ್ರವು ಏಪ್ರಿಲ್ 17, 2025 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವನ್ನು ರಯಾನ್ ಕೂಗ್ಲರ್ ಬರೆದು, ನಿರ್ದೇಶಿಸಿದ್ದಾರೆ,ಮತ್ತು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಮೈಕೆಲ್ ಬಿ. ಜೋರ್ಡಾನ್, ಹೈಲೀ ಸ್ಟೈನ್ಫೆಲ್ಡ್, ವುನ್ಮಿ ಮೊಸಾಕು, ಮೈಲ್ಸ್ ಕ್ಯಾಟನ್ ಮತ್ತು ಡೆಲ್ರಾಯ್ ಲಿಂಡೋ ನಟಿಸಿದ್ದಾರೆ.