Headlines

ಮಗನ ಅನೈತಿಕ ಸಂಬಂಧಕ್ಕೆ ತಾಯಿ ಫುಲ್ ಸಪೋರ್ಟ್​! ನವವಿವಾಹಿತೆ ಗಂಭೀರ ಆರೋಪ

ಮಗನ ಅನೈತಿಕ ಸಂಬಂಧಕ್ಕೆ ತಾಯಿ ಫುಲ್ ಸಪೋರ್ಟ್​! ನವವಿವಾಹಿತೆ ಗಂಭೀರ ಆರೋಪ


ಹೆಂಡತಿಯ ಎಂಗೇಜ್ಮೆಂಟ್ ಸೀರೆಯನ್ನು ಪ್ರೇಯಸಿಗೆ ಗಿಫ್ಟ್ ಕೊಟ್ಟ ಪತಿ!

ಆನೇಕಲ್, ಜನವರಿ 24: ನವವಿವಾಹಿತರ ನಡುವಿನ ವೈವಾಹಿಕ ಕಲಹ ತೀವ್ರ ಸ್ವರೂಪವಾಗಿದ್ದರು, ಪತ್ನಿಯ ಕುಟುಂಬಸ್ಥರಿಂದ ಪತಿ ಹಲ್ಲೆಗೊಳಗಾದ ಘಟನೆ ಆನೇಕಲ್ (ಆನೇಕಲ್) ಅತ್ತಿಬೆಲೆಯಲ್ಲಿ ನಡೆದಿದೆ. ಪತಿ ಆರೋಪಕ್ಕೆ ಪ್ರತ್ಯಾರೋಪ ಮಾಡಿರುವ ಪತ್ನಿ, ಆತನಿಗೆ ಅನೈತಿಕ ಸಂಬಂಧವಿದ್ದು, ಆತನ ತಾಯಿಯೂ ಆರೋಪಿಸಿದ್ದಾಳೆ.

ಪತಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಪತ್ನಿಯ ಕುಟುಂಬಸ್ಥರು

ಅಂಬರೀಶ್ ಮತ್ತು ನಂದಿನಿ ನಡುವೆ ಮದುವೆಯಾಗಿ ತಿಂಗಳೊಳಗೇ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆ ನವವಿವಾಹಿತೆಯ ಮಾವ ಸಂಪಂಗಿ, ಅಂಬರೀಶ್ ಮೇಲೆ ಹಲ್ಲೆ ನಡೆಸಿದ್ದರು. ನಂತರ ನಂದಿನಿ ಮತ್ತು ಆಕೆಯ ಕುಟುಂಬಸ್ಥರು ಸೇರಿ ಅಂಬರೀಶ್‌ನೊಡನೆ ಜಗಳಕ್ಕಿಳಿದಿದ್ದರು. ಅದಲ್ಲದೆ ಆತನ ಬಳಿಯಿದ್ದ ಮೊಬೈಲ್, ಚೈನ್, ರಿಂಗ್ ಕಸಿದುಕೊಂಡು 4 ಲಕ್ಷ ರೂ.ಗೆ ಬೇಡಿಕೆ ಇಟ್ಟು, 15 ಸಾವಿರ ರೂ. ಹಣ ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಂಬರೀಶ್ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತ್ನಿಯಿದ್ದರೂ ಪ್ರೇಯಸಿಯರನ್ನರಸಿ ಹೋಗಿದ್ದ ಪತಿ

ಇದಕ್ಕೆ ಪ್ರತಿಯಾಗಿ ನವವಿವಾಹಿತೆ ನಂದಿನಿ ತನ್ನ ಪತಿ ಮತ್ತು ಅತ್ತೆ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ.ಮದುವೆಗೆ ಮೊದಲು ಹಾಗೂ ಮದುವೆಯ ನಂತರವೂ ಪತಿ ಮತ್ತೊಬ್ಬ ಯುವತಿ ಪ್ರೇಮ ಸಂಬಂಧ ಹೊಂದಿದ್ದು, ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ನಂದಿನಿ ಆರೋಪಿಸಿದ್ದಾಳೆ.

ಪತಿ ಕುಡಿದು ಮನೆಗೆ ಬಂದು ನಿತ್ಯ ಹಲ್ಲೆ ನಡೆಸುತ್ತಿದ್ದನಲ್ಲದೆ, ಅತ್ತೆಯೂ ಆತನೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದರೆಂದು ನಂದಿನಿ ಹೇಳಿದ್ದಾಳೆ. ಪತಿಯ ರಾಸಲೀಲೆಗೆ ಅತ್ತೆಯೂ ಸಾಥ್ ಕೊಟ್ಟಿದ್ದಾರೆಂದು ಆರೋಪಿಸಿರುವ ನಂದಿನಿ, ತನ್ನ ಎಂಗೇಜ್ಮೆಂಟ್ ವೇಳೆ ನಂದಿನಿ ಧರಿಸಿದ್ದ ಸೀರೆಯನ್ನು ಪತಿಯ ತಾಯಿಯೇ ಐರನ್ ಮಾಡಿ ಮಗನ ಮೂಲಕ ಅವನ ಪ್ರೇಯಸಿಗೆ ಗಿಫ್ಟ್ ಕೊಟ್ಟಿದ್ದಾಳೆಂದು ಹೇಳಿದ್ದಾಳೆ.

ಇದನ್ನೂ ಓದಿ ಕಪಾಳಮೋಕ್ಷ ಮಾಡಿದಕ್ಕೆ ನಾನೇ ನನ್ನ ಸ್ನೇಹಿತನನ್ನು ಕೊಂಡೆ: ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ತಪ್ಪೊಪ್ಪಿಕೊಂಡ ಯುವಕ

ಇನ್ನು, ತನ್ನ ಜಾತಿಯ ಬಗ್ಗೆ ಪತಿ ಮತ್ತು ಅತ್ತೆಗೆ ಸಂಪೂರ್ಣವಾಗಿ ತಿಳಿದಿದ್ದರೂ, ಮದುವೆಯ ನಂತರ ಪದೇ ಪದೇ ಜಾತಿ ನಿಂದನೆ ಮಾಡಿ ಕಿರುಕುಳ ನೀಡಬೇಕೆಂದು ನಂದಿನಿ ದೂರಿದ್ದಾಳೆ. ಪತಿ ಹಾಗೂ ಅತ್ತೆಯ ಹಲ್ಲೆ ಮತ್ತು ಮಾನಸಿಕ ಪೀಡನೆಗೆ ಬೇಸತ್ತು ನಂದಿನಿ ನ್ಯಾಯಕ್ಕಾಗಿ ಮುಂದಾಗಿದ್ದು, ಈ ಪ್ರಕರಣ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 2:48 pm, ಶನಿ, 24 ಜನವರಿ 26



Source link

Leave a Reply

Your email address will not be published. Required fields are marked *