ಬೆಂಗಳೂರು, (ಜನವರಿ 24): ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025’ (ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ) ಅಂಗೀಕಾರಗೊಂಡಿದ್ದು, ಇದಕ್ಕೆ ಇನ್ನೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಆದರೂ ಸಹ ಗೃಹ ಇಲಾಖೆ ದ್ವೇಷ ಭಾಷಣದಡಿಯಲ್ಲಿ ಬಿಜೆಪಿ(ಬಿಜೆಪಿ) ಮುಖಂಡರಿಗೆ ನೋಟಿಸ್ ನೀಡಲಾಗಿದೆ. ಹೌದು.. ಚಿಕ್ಕಮಗಳೂರು (ಚಿಕ್ಕಮಗಳೂರು) ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವ ಮೊದಲೇ ಬಿಜೆಪಿ ಮುಖಂಡ ವಿಕಾಸ ಪುತ್ತೂರ್ ಅವರಿಗೆ ದ್ವೇಷ ಭಾಷಣ ಕಾಯ್ದೆಯ ಎಚ್ಚರಿಕೆ ಸೂಚನೆಗಳನ್ನು ನೀಡಲಾಗಿದೆ.
ಇಂದು (ಜನವರಿ 24) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಮ್ಮಿಕೊಂಡಿದೆ, ವಿಕಾಸ ಪುತ್ತೂರ್ ದಿಚಿ ಭಾಷಣ ಹೀಗಾಗಿ ಚಿಕ್ಕಮಗಳೂರು ಪೊಲೀಸ್, ವಿಕಾಸ ಪುತ್ತೂರ್ ಅವರಿಗೆ ನೋಟಿಸ್ ಜಾರಿಯಾಗಿದೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಆನ್ವಯ ಸದರಿ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಈ ದ್ವೇಷ ಭಾಷಣ ಕಾನೂನಾಗಿ ಜಾರಿಗೆ ಬಂದಿಲ್ಲ. ಆಗಲೇ ಪೊಲೀರು ಬಿಜೆಪಿ ಮುಖಂಡರ ಮೇಲಿನ ಕ್ರಮದ ಬಗ್ಗೆ ಎಚ್ಚರಿಕೆ ಸೂಚನೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ 22ರಲ್ಲಿ 19 ಮಸೂದೆ ಪಾಸ್, ಎರಡು ವಾಪಸು: ಕಾಂಗ್ರೆಸ್ ನ ದ್ವೇಷ ಭಾಷಣ ಬಿಲ್ ಆಸೆ ಠುಸ್
ಈ ಸಂಬಂಧ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತಿದ್ದು, ಗೃಹ ಇಲಾಖೆ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದ್ವೇಷ ಭಾಷಣ ಮಸೂದೆ ಕಾಯ್ದೆಯೇ? ರಾಜ್ಯಪಾಲರಿಂದ ಇದಕ್ಕೆ ಅಂಕಿತ ಸಿಕ್ಕಿದೆಯೇ? ನಿರೀಕ್ಷಣಾ ಜಾಮೀನು ಎಂಬುದು ಗೊತ್ತಿತ್ತು. ಆದರೆ ಕಾಯ್ದೆ ಜಾರಿಯಾಗುವ ಮೊದಲೇ ನಿರೀಕ್ಷಿತ ಸೂಚನೆ ನಿಜವಾಗಿ ಗೃಹ ಇಲಾಖೆ ಹೊಸ ಕಾರ್ಯ ವೈಖರಿ ಎಂದು ಕಿಡಿಕಾರಿದ್ದಾರೆ.
ಸುರೇಶ್ ಕುಮಾರ್ ಪೋಸ್ಟ್ ಹೀಗಿದೆ
ವಿಕಾಸ ಪುತ್ತೂರ್ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರು. ನನ್ನ ಆತ್ಮೀಯ ಸಹಕಾರಿಗಳೂ ಸಹ. ಪಕ್ಷದಲ್ಲಿನ ಅನ್ಯಾನ್ಯ ಜವಾಬ್ದಾರಿಗಳನ್ನು ಬಹಳ ಶ್ರದ್ದೆಯಿಂದ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಲು ಅವರು ಬಂದಾಗ ಅವರಿಗೆ ಪೊಲೀಸರು ನೀಡಿದ್ದಾರೆ “ಪ್ರೇಮಪತ್ರ” ಇದು. ಅಂದ ಹಾಗೆ ರಾಜ್ಯದ ಗೃಹ ಸಚಿವರಿಗೆ ಹಾಗೂ ವಿಕಾಸ ಪುತ್ತೂರು ಅವರಿಗೆ ನೋಟಿಸ್ ಕೊಟ್ಟ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಇಬ್ಬರಿಗೂ ನನ್ನದೊಂದು ಪ್ರಶ್ನೆ
- ದ್ವೇಷ ಭಾಷಣ ಮಸೂದೆ ಕಾಯ್ದೆಯೇ? ರಾಜ್ಯಪಾಲರಿಂದ ಇದಕ್ಕೆ ಅಂಕಿತ ಸಿಕ್ಕಿದೆಯೇ? ನಿರೀಕ್ಷಣಾ ಜಾಮೀನು ಎಂಬುದು ಗೊತ್ತಿತ್ತು. ಆದರೆ ಕಾಯ್ದೆ ಜಾರಿಯಾಗುವ ಮೊದಲೇ ನಿರೀಕ್ಷಿತ ಸೂಚನೆ ನಿಜವಾಗಿ ಗೃಹ ಇಲಾಖೆ ಹೊಸ ಕಾರ್ಯ ವೈಖರಿ.
- ಇಷ್ಟೊಂದು ಎಚ್ಚರಿಕೆಯಿಂದ ಮತ್ತು ಜತನದಿಂದ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ರವರನ್ನು ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು ಪೊಲೀಸರ ನೋಟಿಸ್ ನಲ್ಲೇನಿದೆ?
ಈ ಮೂಲಕ ನಿಮಗೆ (ವಿಕಾಸ ಪುತ್ತೂರು ಅವರಿಗೆ) ತಿಳಿಯಪಡಿಸುವುದೇನೆಂದರೆ, ದಿನಾಂಕ 24-01-2026 ರಂದು ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಮಾರಂಭವನ್ನು ಬಯಲು ರಂಗಮಂದಿರ ತರೀಕೆರೆಯಲ್ಲಿ ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ದಿಕ್ಕೂಚಿ ಭಾಷಣಕಾರರಾಗಿ ನೀವು ಆಗಮಿಸಿದ್ದೀರಿ, ನೀವು ಹಿಂದೂ ಭಾಂದವರಿಗೆ ಭಾಷಣ ಮಾಡಲಿದ್ದಾರೆ, ತಾವುಗಳು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟ ಕಾರ್ಯಕ್ರದಲ್ಲಿ ಈ ಭಾಷಣವನ್ನು ಮಾಡಲಾಗುವುದು.
- ನೀವು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ಸಮಯದಲ್ಲಿ ಅನ್ಯ ಕೋಮಿನ ಸಮುದಾಯದವರ ಭಾವನೆಗಳಿಗೆ ದಕ್ಕದಂತೆ ನೋಡಿಕೊಳ್ಳುವುದು.
- ತಾವು ಮಾಡುವ ಭಾಷಣವು ಯಾವುದೇ ಗುಂಪಿನ ವಿರುದ್ಧ ದ್ವೇಷ ಹಿಂಸೆ ಪ್ರಚೋದನೆಗೆ ಒಳಪಡಬಾರದು.
- ಶೋಭಾಯಾತ್ರೆಯ ವೇಳೆ ತಾವುಗಳು ತರೀಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಂತ ರೀತಿಯಲ್ಲಿ ಸಾರ್ವಜನಿಕರಿಗೆ ಸುಗುಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
- ಘನ ಕರ್ನಾಟಕವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಆನ್ವಯ ಸದರಿ ಕಾಯ್ದೆಯನ್ನು ಉಲ್ಲಂಘಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.