
ಮೇಷ ರಾಶಿ:
ನಿಮಗೆ ಸೂಚಿತ ದಿಕ್ಕಿನಲ್ಲಿ ತೆರಳಿ ಕಾರ್ಯವನ್ನು ಸಾಧಿಸಿಕೊಳ್ಳಿ. ಹೊಸ ಅನ್ವೇಷಣೆಯ ಬಗ್ಗೆ ನಿಮಗೆ ಕುತೂಹಲ ಹೆಚ್ಚುವುದು. ಸುಮ್ಮನೆ ಒತ್ತಡವಿದ್ದಂತೆ ತೋರಿಸಿ. ಅಪನಂಬಿಕೆಯಿಂದ ಮನಸ್ಸು ಕುಗ್ಗುವುದು. ಯಾರ ಮೇಲೂ ನಂಬಿಕೆ ಇಡುವುದು ಕಷ್ಟವಾದೀತು. ಆಪತ್ತಿನಿಂದ ಜಾರಿಕೊಳ್ಳುವ ಮಾರ್ಗ ನಿಮಗೆ ತಿಳಿಯುವುದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಅನ್ಯರ ಮೂಲಕ ನಿಮ್ಮ ಕಾರ್ಯವು ಆಗಲಿದೆ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವುದು ಬೇಡ.
ವೃಷಭ ರಾಶಿ:
ಮೌನದಿಂದ ಇದ್ದರೆ ಯಾವ ಸಂಗತಿಯೂ ನಿಮ್ಮ ಬಳಿ ಇರಬಾರದು. ಸಂಗಾತಿಯನ್ನು ನೀವು ಸರಿಯಾಗಿ ತಿಳಿದುಕೊಳ್ಳಲಾಗದು. ನಿಮ್ಮ ಕೆಲವು ನಿರೀಕ್ಷೆಯು ಹುಸಿಯಾಗಬಹುದು. ಧನಸಂಪಾದನೆಯ ಚಿಂತೆ ನಿಮಗೆ ಕಾಡಲು ಆರಂಭವಾಗಲಿದೆ. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಬಂಧುಗಳಿಂದ ಅವಶ್ಯಕವಾದ ಸಂಪತ್ತನ್ನು ನಿರೀಕ್ಷಿಸುವಿರಿ. ಸಣ್ಣ ಸಣ್ಣ ವಿಚಾರಗಳನ್ನು ಸಿಟ್ಟಾಗುವುದನ್ನು ಕಡಿಮೆ ಮಾಡಿ. ಓದುವಿಕೆಯಲ್ಲಿ ಆಸಕ್ತಿಯು ಹೆಚ್ಚಾಗಬಹುದು.
ಮಿಥುನ ರಾಶಿ:
ನಕಾರಾತ್ಮಕ ಅಂಶಗಳನ್ನು ಬಿಟ್ಟು ಒಳ್ಳೆಯದರ ಕಡೆ ಯೋಚಿಸಿ. ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ಇರುವ ಸಾಲವನ್ನು ತೀರಿಸಿಕೊಳ್ಳಲು ಬೇಕಾದ ಯೋಜನೆ ಮಾಡಿ. ವಿವಾಹ ಸಂಬಂಧದಲ್ಲಿ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದರೆ ಯಾವ ವಿಷಯಕ್ಕೂ ಇರಲಾರಿರಿ. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ ನಡೆಸಲು ಇಷ್ಟಪಡುವಿರಿ. ಯಾರ ಜೊತೆಗೂ ಪಕ್ಷಪಾತವನ್ನು ಇಟ್ಟುಕೊಳ್ಳುವುದು ಬೇಡ.
ಕರ್ಕಾಟಕ ರಾಶಿ:
ಸಹೋದರರ ಹಣಕಾಸಿಗೆ ಕಲಹವಾಗಬಹುದು. ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುತ್ತಾರೆ. ಕೂಡಿಬರುವ ವಿವಾಹಕಾಲವನ್ನು ಅಲ್ಲಗಳೆಯುವುದು ಬೇಡ. ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಸಮಯಕ್ಕಾಗಿ ಕಾದು ನೋಡಿ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡಿರಿ.
ಸಿಂಹ ರಾಶಿ:
ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಸಿಗಲಿದೆ. ಹೊಸ ಗೃಹವನ್ನು ಖರೀದಿಸುವ ವಿಚಾರವನ್ನು ದಂಪತಿಗಳು ಚರ್ಚಿಸುತ್ತಾರೆ. ಮಾತಿನಿಂದ ನಿಮಗೆ ಆದಾಯ ಬರಬಹುದು. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ಸಂಗಾತಿಯ ವಿಷಯದಲ್ಲಿ ವಾಗ್ವಾದ. ಮಕ್ಕಳಿಂದ ನಿಮಗೆ ಅಸಮಾಧಾನ ಇರಲಿದೆ. ವಿವಾಹಿತರು ವಿವಾಹದ ಬಯಕೆಯನ್ನು ತಾಯಿಯ ಜೊತೆ ಹಂಚಿಕೊಳ್ಳುವರು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆ ನೀಡಿ. ಎಲ್ಲರೆದುರು ಸಭ್ಯರಂತೆ ತೋರುವಿರಿ.
ಕನ್ಯಾ ರಾಶಿ:
ಅತಿಯಾದ ಕೋಪವನ್ನು ನೀವು ಯಾವ ಮಾರ್ಗದಿಂದಲಾದರೂ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹತಾಶೆಯಿಂದ ಅಧ್ಯಾತ್ಮದ ಕಡೆ ಒಲವು ಹೆಚ್ಚಬಹುದು. ಎಲ್ಲ ಕೆಲಸದಲ್ಲಿಯೂ ನಿಮ್ಮ ನಿರೀಕ್ಷೆಯ ಸುಳ್ಳಾಗಿ ಎಲ್ಲರಿಂದ ಹೇಳಿಸಿಕೊಳ್ಳಬೇಕಾಗುವುದು. ಆರೋಗ್ಯದ ಬಗ್ಗೆ ಅತಿಯಾದ ಚಿಂತೆಯಿಂದ ಮತ್ತಷ್ಟು ಹಾಳುಮಾಡಿಕೊಳ್ಳುತ್ತೀರಿ. ವಿದ್ಯಾರ್ಥಿಗಳ ಬಗ್ಗೆ ಗಮನ ಕೊಡುವುದು ಕಷ್ಟವಾಗುತ್ತದೆ. ಹಿರಿಯರ ಉಪದೇಶದಲ್ಲಿ ಆಸಕ್ತಿ ಕಡಿಮೆ ಆಗುವುದು. ಸ್ಥಿರಾಸ್ತಿಯ ವಿಚಾರವಾಗಿ ನೆರೆಯವರ ಜೊತೆ ಕಲಹವಾಗುವುದು. ಮಾಡಿಕೊಂಡ ಸಾಲವನ್ನು ತೀರಿಸಲು ಸ್ನೇಹಿತರಿಂದ ಸಹಾಯ.
ತುಲಾ ರಾಶಿ:
ಹಣವನ್ನು ಅಲ್ಪ ಹೂಡಿಕೆ ಮಾಡಿ ಪರೀಕ್ಷಿಸಿ. ಸಂತೋಷದ ಸುದ್ದಿಯನ್ನು ಆನಂದಿಸುವ ಮನಃಸ್ಥಿತಿ ಇಂದು ನಿಮ್ಮಲ್ಲಿ ಇರದು. ಸದಾ ಅವಕಾಶಗಳನ್ನು ಹುಡುಕುತ್ತಲೇ ಇರುವಿರಿ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಲು ಯಾರದ್ದಾದರೂ ಸಹಾಯವನ್ನು ಪಡೆದುಕೊಳ್ಳಿ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ಉನ್ನತ ಸ್ಥಾನದ ನಿರೀಕ್ಷೆಯುಳ್ಳವರು ವಿರುದ್ಧ ದಿಕ್ಕಿನಲ್ಲಿ ಹೋದರೆ ಆಗದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ.
ವೃಶ್ಚಿಕ ರಾಶಿ:
ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವು ಬರಬಹುದು. ಕುಟುಂಬದ ಜೊತೆ ಸುಳ್ಳು ಹೇಳಿ, ನಿಮ್ಮ ನಿಜವಾದ ಕಾರ್ಯವನ್ನು ಮುಚ್ಚಿಡುವಿರಿ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳಿ. ಯಾರಿಗೂ ನೋವಾಗದಂತೆ ಎಚ್ಚರಿಕೆಯಿಂದ ಮುನ್ನಡೆಯುವುದು ಶ್ರೇಯಸ್ಕರ. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ವಾಹನ ಸವಾರಿಯನ್ನು ಬಹಳ ಉತ್ಸಾಹದಿಂದ ಮಾಡುವಿರಿ.
ಧನು ರಾಶಿ:
ವ್ಯಾವಹಾರಿಕ ಜಾಣ್ಮೆಯನ್ನು ನೀವು ಇಟ್ಟುಕೊಂಡು ಲಾಭವನ್ನು ಪಡೆದುಕೊಳ್ಳಿ. ನಿಮಗೆ ವಿದ್ಯೆಯನ್ನು ನೀಡಿದವರು ಹಲವು ವರ್ಷಗಳ ಅನಂತರ ಸಿಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ನಿಮ್ಮ ಶ್ರಮ ಬೇಕಾಗುವುದು. ನಿಮ್ಮ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗುವುದಿಲ್ಲ. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು. ಇಂದು ಆರ್ಥಿಕ ಸಹಾಯವನ್ನು ಇತರರಿಂದ ಪಡೆದುಕೊಳ್ಳಿ.
ಮಕರ ರಾಶಿ:
ನಿಮ್ಮ ಕೆಲಸದಿಂದ ಉತ್ತಮ ಹೆಸರು ಕುಟುಂಬಕ್ಕೆ ಸಿಗುವುದು. ನೀವೇ ಕೊಟ್ಟ ಹಣವನ್ನು ಕೇಳಲು ಮುಜುಗರವಾದೀತು. ಸಾಲದ ಬಗ್ಗೆ ನಿಮ್ಮನ್ನು ಮತ್ತೆ ಮತ್ತೆ ಎಚ್ಚರಿಸಬೇಕಾಗುವುದು. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಕೇಳಬಹುದು. ತುರ್ತು ಹಣವು ಬೇಕಾಗಿರುವುದು ಸಾಲವನ್ನು ಮಾಡಲು ನಿಮಗೆ ಭಯವಾಗಿದೆ. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮ ಸಿಗದು.
ಕುಂಭ ರಾಶಿ:
ನಿಮ್ಮೆದುರೇ ನಿಮ್ಮ ಸಹೋದರರನ್ನು ಹೊಗಳುವುದು ನಿಮಗೆ ಆಗದು. ಯಾರ ಜೊತೆಗಾದರೂ ವೈಮನಸ್ಯವಿದ್ದರೆ ಕುಳಿತು ಮಾತನಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ನಿಮಗೆ ನಿಮ್ಮವರ ಭಾವವನ್ನು ಸರಿಯಾಗಿ ಅಂದಾಜು ಮಾಡಲಾಗದು. ಹೊಸ ಕಾರ್ಯವನ್ನು ಪ್ರಾರಂಭಿಸಲು ವಿಘ್ನ ಬಾರದೇ ಇದ್ದರೆ, ಮುಂದೆ ಅದು ಬರುವ ಸೂಚನೆಯಾಗಲಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಬರಬಹುದು. ನಿರಾಕರಿಸುವುದು ಉತ್ತಮ. ಸ್ನೇಹವು ಸಡಿಲವಾಗುವ ಸಾಧ್ಯತೆಯಿದೆ.
ಮೀನ ರಾಶಿ:
ವ್ಯಾಪಾರವು ಕೆಲವು ಆಕಸ್ಮಿಕ ತಿರುವನ್ನು ಪಡೆಯಬಹುದು. ಆತ್ಮೀಯರ ಬಗ್ಗೆ ಕಾಳಜಿ ಹೆಚ್ಚಿರುವುದು. ಚರಾಸ್ತಿಯ ನಷ್ಟಕ್ಕೆ ನೀವೇ ಕಾರಣವಾಗುವಿರಿ. ಆಸ್ತಿಯ ಕಡತಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ. ವೃತ್ತಿಯ ಸ್ಥಳದಲ್ಲಿ ಬದಲಾವಣೆಯನ್ನು ಬಯಸುವಿರಿ. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡಿರಿ.
ಜನವರಿ 25, 2026ರ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಕಾರ್ಯಕ್ರಮ : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣ, ವಾರ : ಭಾನು ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸಿದ್ಧ, ಕರಣ – 40 ಸೂರ್ಯ – 5, ಸೂರ್ಯ – 40 am 19 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:54 – 18-19 ಯಮಗಂಡ ಕಾಲ 12:37 – 14:02, ಗುಳಿಕ ಕಾಲ 15:28 – 16:54
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)