ಚಿರಂಜೀವಿ ಮಧ್ಯಮ ವರ್ಗದ ಕುಟುಂಬದಿಂದ ಬಂದು ಮೆಗಾಸ್ಟಾರ್ ಆದ ನಟ. ಟಾಲಿವುಡ್‌ನಲ್ಲಿ ಮೆಗಾ ಸಾಮ್ರಾಜ್ಯವನ್ನೇ ಕಟ್ಟಿದ ಈ ಹೀರೋ, ಯಾರಿಗೂ ತಿಳಿಯದಂತೆ ಸಾಕಷ್ಟು ದಾನಗಳನ್ನೂ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಸಾವಿರಾರು ಕೋಟಿಗೆ ಒಡೆಯನಾಗಿರುವ ಚಿರಂಜೀವಿಯ ಒಂದು ದಿನದ ಖರ್ಚು ಎಷ್ಟು ಗೊತ್ತಾ?

ಯಾವುದೇ ಹಿನ್ನೆಲೆ ಇಲ್ಲದೆ ಬೆಳೆದು ಮೆಗಾಸ್ಟಾರ್ ಆದ ಚಿರಂಜೀವಿ, ಸದ್ದಿಲ್ಲದೆ ಅನೇಕರಿಗೆ ಸಹಾಯ ಮಾಡಿದ್ದಾರೆ. ಅವರ ಈ ಗುಣದ ಬಗ್ಗೆ ಆಪ್ತರೊಬ್ಬರು ಇತ್ತೀಚೆಗೆ ಕೆಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಚಿರಂಜೀವಿ ಮನೆಯ ದಿನದ ಖರ್ಚು 1-2 ಲಕ್ಷವಲ್ಲ, ಬರೋಬ್ಬರಿ 25 ಲಕ್ಷ! ಆದರೆ ಇದು ಅವರ ಸ್ವಂತಕ್ಕಲ್ಲ, ಬದಲಿಗೆ ಬಡವರಿಗೆ, ಕಷ್ಟದಲ್ಲಿರುವವರಿಗೆ ಮಾಡುವ ಸಹಾಯಕ್ಕಾಗಿ ಖರ್ಚಾಗುವ ಹಣವಂತೆ.

ಕಳೆದ 28 ವರ್ಷಗಳಿಂದ ಚಿರಂಜೀವಿ ದಿನಕ್ಕೆ 25 ಲಕ್ಷದಷ್ಟು ಹಣವನ್ನು ವೈದ್ಯಕೀಯ ಸಹಾಯ, ಶಿಕ್ಷಣ, ದಾನಗಳಿಗೆ ವಿನಿಯೋಗಿಸುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲೂ ಹೇಳಿಕೊಳ್ಳುವುದಿಲ್ಲ ಎನ್ನುತ್ತಾರೆ ಅವರ ಆಪ್ತರು.

ಸದ್ಯ ‘ವಿಶ್ವಂಭರ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಚಿರಂಜೀವಿ, ಇದರ ನಂತರ ನಿರ್ದೇಶಕ ಬಾಬಿ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಇನ್ನೂ ಕೆಲವು ಕಥೆಗಳನ್ನು ಕೇಳುತ್ತಿದ್ದು, ಸಾಲು ಸಾಲು ಚಿತ್ರಗಳಿಗೆ ಸಿದ್ಧರಾಗಿದ್ದಾರೆ.

70ರ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಹುಮ್ಮಸ್ಸಿನಿಂದ, ಸ್ಲಿಮ್ ಲುಕ್‌ನಲ್ಲಿ ಕಾಣಿಸಿಕೊಂಡು ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರದ ಮೂಲಕ ಚಿರಂಜೀವಿ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದಾರೆ.

Source link
ಚಿರಂಜೀವಿ ಮನೆಯ ಒಂದು ದಿನದ ಖರ್ಚು ಎಷ್ಟು ಲಕ್ಷ ಗೊತ್ತಾ? ಮೆಗಾಸ್ಟಾರ್ ಬಗ್ಗೆ ಆ ಸತ್ಯ ಬಿಚ್ಚಿಟ್ಟಿದ್ಯಾರು?