Headlines

Mars in Capricorn: ಮಕರ ರಾಶಿಯಲ್ಲಿ ಕುಜ ಸಂಚಾರ; ಈ ನಾಲ್ಕು ರಾಶಿಗೆ ಅದೃಷ್ಟದ ಸುರಿಮಳೆ

Mars in Capricorn: ಮಕರ ರಾಶಿಯಲ್ಲಿ ಕುಜ ಸಂಚಾರ; ಈ ನಾಲ್ಕು ರಾಶಿಗೆ ಅದೃಷ್ಟದ ಸುರಿಮಳೆ


ಪ್ರಾಚೀನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ರಾಶಿಯು ಕುಜನ ಉಚ್ಚ ರಾಶಿ. ಅಂದರೆ ಇಲ್ಲಿ ಕುಜನು ಅತ್ಯಂತ ಬಲಿಷ್ಠನಾಗಿರುತ್ತಾನೆ. ಮಕರ ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಕುಜನು ಸಂಚರಿಸುವಾಗ ಉಂಟಾಗುವ ಶುಭ-ಅಶುಭ ಫಲಗಳ ವಿವರ ಇಲ್ಲಿದೆ. ಇನ್ನು ಉತ್ತರಾಷಾಢ ನಕ್ಷತ್ರದಲ್ಲಿ ಜನವರಿ 28 ರಬರೆಗೆ ಕುಜನು ಇರಲಿದ್ದು ಇದರ ಅಧಿಪತಿ ಸೂರ್ಯ. ಕುಜ ಮತ್ತು ಸೂರ್ಯ ಮಿತ್ರ ಗ್ರಹಗಳಿರುವುದರಿಂದ, ಈ ನಕ್ಷತ್ರದಲ್ಲಿ ಕುಜನಿರುವುದು ಸಾಮಾನ್ಯವಾಗಿ ಆಡಳಿತಾತ್ಮಕ ಕೆಲಸಗಳಲ್ಲಿ ಇರುವವರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ತುಂಬಾ ಒಳ್ಳೆಯದು. ಇದು ದೃಢ ನಿರ್ಧಾರ ತೆಗೆದುಕೊಳ್ಳುತ್ತದೆ. ಶುಭ ಫಲಗಳನ್ನು ಪಡೆಯುವ ರಾಶಿಗಳು ಕುಜನು ಮಕರ ರಾಶಿಯಲ್ಲಿ ಈ ಕೆಳಗಿನ ರಾಶಿಯವರಿಗೆ ಹೆಚ್ಚಿನ ಲಾಭ ಮತ್ತು ಪ್ರಗತಿ ಕಂಡುಬರುತ್ತದೆ.

ಮೇಷ ರಾಶಿ:

ನಿಮ್ಮ ರಾಶಿಪತಿಯಾದ ಕುಜನು ದಶಮ ಸ್ಥಾನದಲ್ಲಿ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಹೊಸ ಉದ್ಯೋಗ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:

ತೃತೀಯ ಸ್ಥಾನದಲ್ಲಿ ಕುಜನ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ. ಕೈಗೊಂಡ ಕಾರ್ಯಗಳಲ್ಲಿ ವಿಜಯ ಲಭಿಸುತ್ತದೆ. ಸಣ್ಣ ಪ್ರಯಾಣದಿಂದ ಲಾಭದಾಯಕ.

ಕನ್ಯಾ ರಾಶಿ:

ಪಂಚಮ ಸ್ಥಾನದಲ್ಲಿ ಕುಜನಿರುವುದು ಆರ್ಥಿಕವಾಗಿ ಲಾಭದಾಯಕ. ಹಳೆಯ ಹೂಡಿಕೆಗಳಿಂದ ಆದಾಯ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ.

ಮೀನ ರಾಶಿ:

ಲಾಭದ ಸ್ಥಾನದಲ್ಲಿ ಕುಜನ ಹಣಕಾಸಿನ ಹರಿವು ಉತ್ತಮವಾಗಿದೆ. ಸ್ನೇಹಿತರಿಂದ ಮತ್ತು ಸಹೋದರರಿಂದ ಬೆಂಬಲ ಸಿಗಲಿದೆ.

ಮಿಶ್ರ ಫಲ:

ಮಕರ ರಾಶಿ:

ಕುಜನು ನಿಮ್ಮದೇ ರಾಶಿಯಲ್ಲಿದ್ದಾಗ ಅಧಿಕಾರ ಮತ್ತು ಶಕ್ತಿ ನೀಡುತ್ತಾನೆ, ಆದರೆ ಅತಿಯಾದ ಆತುರ ಮತ್ತು ಕೋಪ ಉಂಟಾಗಬಹುದು. ಅಸ್ವಸ್ಥತೆ ಅಥವಾ ಸಣ್ಣಪುಟ್ಟ ಗಾಯಗಳ ಬಗ್ಗೆ ಎಚ್ಚರವಿರಲಿ.

ಕರ್ಕಾಟಕ ರಾಶಿ:

ಏಳನೇ ಮನೆಯಲ್ಲಿ ಕುಜನ ಇಲ್ಲದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ.

ಅಶುಭ ಫಲ:

ಮಿಥುನ ರಾಶಿ:

ಎಂಟನೇ ಮನೆಯಲ್ಲಿ ಕುಜನಿರುವುದು ಅನಿರೀಕ್ಷಿತ ಅಡೆತಡೆಗಳನ್ನು ತರಬಹುದು. ಆರೋಗ್ಯದ ಕಡೆ ಗಮನವಿರಲಿ ಮತ್ತು ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ.

ಧನು ರಾಶಿ:

ಎರಡನೇ ಮನೆಯಲ್ಲಿ ಕುಜನದಿಂದ ಮಾತಿನಲ್ಲಿ ಕಠೋರತೆ ಬರಬಹುದು. ಇದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

ಕುಜನ ಪ್ರಭಾವದಿಂದ ತೊಂದರೆ ಆಗುತ್ತಿದೆ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದು ಅಥವಾ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡುವುದು ಉತ್ತಮ. ​

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *