Headlines

ರಾಜೀವ್​​ ಗೌಡಗೆ ಮತ್ತಷ್ಟು ಸಂಕಷ್ಟ: ಖಾಕಿ ನಡೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ

ರಾಜೀವ್​​ ಗೌಡಗೆ ಮತ್ತಷ್ಟು ಸಂಕಷ್ಟ: ಖಾಕಿ ನಡೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ


ಚಿಕ್ಕಬಳ್ಳಾಪುರ, ಜನವರಿ 25: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡನ ಬಂಧನ ಇನ್ನೂ ಆಗದ ಕಾರಣ ಪೊಲೀಸರ ಕಾರ್ಯವೈಖರಿ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಬಳಿ ಮಾಹಿತಿ ಪಡೆದಿರುವ ಮುಖ್ಯಮಂತ್ರಿಗಳು, ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ವಜಾ ಆಗಿದ್ದರೂ ಯಾಕೆ ಆತನನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಶೀಘ್ರವೇ ಆರೋಪಿಯ ಬಂಧನ’

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ ವಿಳಂಬ ವಿಚಾರ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಪೊಲೀಸರಿಗೆ ಬಹಳ ಕಠಿಣವಾಗಿ ಸೂಚನೆ ನೀಡಿದ್ದೇನೆ. ಎಲ್ಲಿಗೆ ಎಷ್ಟು ದಿನ ಅಂತಾ ರಾಜೀವ್ ತಪ್ಪಿಸಿಕೊಂಡು ಹೋಗ್ತಾರೆ? ದೂರು ಬಂದ ಮೊದಲ ದಿನವೇ, ಆತನ ಅರೆಸ್ಟ್ ಮಾಡಿ ಎಂದಿದ್ದೆ. ಆದರೆ ಅಷ್ಟರಲ್ಲಿ ಮುಖಂಡ ರಾಜೀವ್ ಗೌಡ ತಪ್ಪಿಸಿಕೊಂಡು ಹೋಗಿದ್ದಾರೆ. ಯಾರ ಒತ್ತಡ, ಕಾಂಪ್ರಮೈಸ್ ಇಲ್ಲ, ಅಷ್ಟು ಬೇಗ ಆರೋಪಿಯನ್ನು ಹಿಡಿಯುತ್ತೇವೆ ಎಂದು.

ಇದನ್ನೂ ಓದಿ: ಶಿಡ್ಲಘಟ್ಟ ಮಹಿಳಾ ಅಧಿಕಾರಿಗಳಿಗೆ ಬೆದರಿಕೆ; ರಾಜೀವ್ ಗೌಡ ಜಾಮೀನು ಅರ್ಜಿ ವಜಾ

ರಾಜೀವ್ ಸಹೋದರಿಯ ವಿಚಾರಣೆ

ಇನ್ನು ತನ್ಮ ಮೇಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ರಾಜೀವ್ ಗೌಡ ಮಂಗಳೂರಿನಿಂದ ಬೆಂಗಳೂರಿನಲ್ಲಿರುವ ಸಹೋದರರಿಗೆ ಕರೆ ಮಾಡಿದ್ದರು. ಕಳೆದ 3 ದಿನಗಳಿಂದ ರಾಜೀವ್ ಗೌಡ ಮಂಗಳೂರಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಆತನ ಸಹೋದರಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ರಾಜೀವ್ ಗೌಡ ಅದಾಗಲೇ ಮಂಗಳೂರಿನಿಂದಲೂ ಪರಾರಿಯಾಗಿದ್ದಾನೆ. ವಾಹನ ನಿಲ್ದಾಣದಲ್ಲಿ ಕಾರು ಬಿಟ್ಟು ಎಸ್ಕೇಪ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಕಾರು ಬಂದಿರುವ ಮಾರ್ಗದಲ್ಲಿ ಮಂಗಳೂರು ರೈಲ್ವೇ, ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಯ ಸಿಸಿ ಟಿವಿಗಳ ಪರಿಶೀಲನೆ ನಡೆಸಲಾಗಿದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ರಾಜೀವ್ ಗೌಡನ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ನಡೆದಿದೆ.

ಮನೆಗಳಲ್ಲಿ ಖಾಕಿ ತಲಾಶ್

ಮತ್ತೊಂದೆಡೆ ಆರೋಪಿ ರಾಜೀವ್ ಗೌಡ ಪತ್ನಿ ಸಹನಾ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದ್ದು, ಮನೆ ಕೆಲಸದವರ ಸಮ್ಮುಖದಲ್ಲಿ ಆರೋಪಿ ಮನೆಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನ ಸಂಜಯ್ ನಗರ, ಡಾಲರ್ ಕಾಲೋನಿಯಲ್ಲಿರುವ ಮನೆಯಿಂದ ಉಪಕರಣಗಳನ್ನು ಜಾಲಾಡಿದ್ದಾರೆ. ಸರ್ಚ್ ವಾರಂಟ್ ಪಡೆದು ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *