Video: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ

Video: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ


ಮುಂಬೈ, ಜನವರಿ : ಮನೆಯೇ ಮೊದಲ ಪಾಠ ಶಾಲೆ, ತಾಯಿ (ತಾಯಿ) ತಾನೇ ಮೊದಲು ಗುರು ಎನ್ನುವ ಮಾತಿದೆ. ಹೀಗಾಗಿ ಏನೇ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ಕಲಿತರೂ ಅದು ಮನೆಯಿಂದಲೇ. ಮಕ್ಕಳಿಗೆ ಜೀವನ ಪಾಠ ಕಲಿಸುವಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುತ್ತಾಳೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ತನ್ನ ಮಕ್ಕಳಿಗೆ ಜೀವನ ಪಾಠ ಕಲಿಸಲು ಆತನಿಗೆ ಮುಂಬೈನ (ಮುಂಬೈ) ಧೋಬಿ ಘಾಟ್‌ಗೆ ಕರೆದುಕೊಂಡು ಹೋಗಿದ್ದಾಳೆ. ಕೊರಿಯನ್‌ ತಾಯಿ ಕೆಲಸಗಾರರು ಪಡುವ ಕಷ್ಟವನ್ನು ಅಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ಮಕ್ಕಳು ಕೆಲಸ ಮಾಡಿ ವಿಶೇಷ ಅನುಭವ ಇದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ ನೆಟ್ಟಿಗರು ಮಕ್ಕಳಿಗೆ ಇಂತಹ ಪಾಠಗಳು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

@wonny_brothers ಹೆಸರಿನ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಬದುಕಿನ ಪಾಠಗಳನ್ನು ಕಲಿಸುತ್ತದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಕೊರಿಯನ್ ಮಕ್ಕಳು ಧೋಬಿ ಘಾಟ್‌ನಲ್ಲಿ ನಿಜವಾದ ಭಾರತೀಯ ಜೀವನವನ್ನು ಅನುಭವಿಸುತ್ತಿದ್ದಾರೆ. ನಿಜವಾದ ಕೆಲಸ, ನಿಜವಾದ ಗೌರವ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಕಳೆದ ಕೆಲವು ವರ್ಷಗಳಿಂದ ಈ ಕೊರಿಯನ್ ಕುಟುಂಬ ಭಾರತದಲ್ಲಿ ನೆಲೆಸಿದೆ. ಈ ಮಹಿಳೆ ತನ್ನ ಮಕ್ಕಳಿಗೆ ಜೀವನ ಪಾಠ ಕಲಿಸಿ ಕೊಡಲು ಧೋಬಿ ಘಾಟ್‌ಗೆ ಕರೆದುಕೊಂಡು ಹೋಗಿದ್ದಾಳೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಬಟ್ಟೆಗಳನ್ನು ಒಗೆಯುವುದು, ಹಿಂಡುವುದು ಹೇಗೆಂದು ಹತ್ತಿರದಲ್ಲೇ ಮಕ್ಕಳು ಗಮನಿಸುತ್ತಿದ್ದಾರೆ. ಇಬ್ಬರೂ ಮಕ್ಕಳು ಬಟ್ಟೆ ಹಿಡಿದು ಒಗೆಯುತ್ತಿರುವುದನ್ನು ಕಾಣಬಹುದಾಗಿದೆ. ಕಾರ್ಮಿಕರು ಬೆವರು ಸುರಿಸಿ ದುಡಿಯುವುದನ್ನು ತೋರಿಸುವ ಚಿತ್ರಣ ಇದೆ.

ಇದನ್ನೂ ಓದಿ:ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ಎತ್ತಿಕೊಂಡು ಹೋದ ತಾಯಿ

ಈ ವಿಡಿಯೋವನ್ನು ಇದುವರೆಗೆ ಹೆಚ್ಚಿನ ವೀಕ್ಷಣೆಗಳನ್ನು ಸೇರಿಸಿದ್ದು, ಒಬ್ಬ ಬಳಕೆದಾರ, ಬದುಕಿನ ನಿಜವಾದ ಪಾಠ ಇಲ್ಲೇ ಅಡಗಿರುವುದು. ಮತ್ತೊಬ್ಬರು, ಇಂದಿನ ಮಕ್ಕಳಿಗೆ ಇಂತಹ ಪಾಠಗಳು ಅತ್ಯಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಪ್ರತಿಯೊಬ್ಬರು, ಪ್ರತಿಯೊಬ್ಬ ತಾಯಿಯೂ ಮಕ್ಕಳ ಜೀವನ ಮೌಲ್ಯಗಳನ್ನು ಕಲಿಸಿ ಕೊಡಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *