Headlines

Amruthadhaare Serial: ಮಗನ ಜೊತೆ ಜಯದೇವ್‌ ಮನೆಗೆ ಬಂದ ಗೌತಮ್;‌ ರಣರೋಚಕ ಟ್ವಿಸ್ಟ್‌, ಮುಯ್ಯಿಗೆ ಮುಯ್ಯಿ!

Amruthadhaare Serial: ಮಗನ ಜೊತೆ ಜಯದೇವ್‌ ಮನೆಗೆ ಬಂದ ಗೌತಮ್;‌ ರಣರೋಚಕ ಟ್ವಿಸ್ಟ್‌, ಮುಯ್ಯಿಗೆ ಮುಯ್ಯಿ!

Amruthadhaare Serial: ಮಗನ ಜೊತೆ ಜಯದೇವ್‌ ಮನೆಗೆ ಬಂದ ಗೌತಮ್;‌ ರಣರೋಚಕ ಟ್ವಿಸ್ಟ್‌, ಮುಯ್ಯಿಗೆ ಮುಯ್ಯಿ!

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಅಮ್ಮಮ್ಮ-ಮೊಮ್ಮಕ್ಕಳ ಸಮಾಗಮವಾಗಿದೆ. ಅಂದಹಾಗೆ ಕೇಡಿ ಜಯದೇವ್‌ಗೆ ಕೇಡುಗಾಲ ಶುರುವಾಗಿದೆ. ಹಾಗಾದರೆ ಏನಾಯ್ತು? ಜಯದೇವ್‌ ಕಥೆ ಏನಾಗಬಹುದು?

ಕೊನೆಗೂ ಎಲ್ಲ ವಿಷಯವನ್ನು ಮನಸಾರೆ ಬಿಚ್ಚಿಟ್ಟು, ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದಾರೆ. ಇದೇ ಖುಷಿಯಲ್ಲಿ ವಠಾರದಲ್ಲಿ ಸೀತಾರಾಮ ಕಲ್ಯಾಣ ಆಯೋಜಿಸಲಾಗಿತ್ತು. ಭೂಮಿ ಮನೆಯವರು, ಗೌತಮ್‌ ತಾಯಿ, ಅಜ್ಜಿ, ಆನಂದ್-ಅಪರ್ಣಾ ಕೂಡ ಈ ಸಮಾರಂಭಕ್ಕೆ ಬಂದಿದ್ದರು.

ಈಗ ಜಯದೇವ್‌ ಜಾತಕದಲ್ಲಿ ಸಮಸ್ಯೆ ಇದೆಯಂತೆ. ಅದರಲ್ಲಿಯೂ ಜಯದೇವ್‌ಗೆ ಎಡಗಣ್ಣು ಹೊಡೆದುಕೊಳ್ಳುತ್ತಿದೆ, ಗಂಡು ಮಕ್ಕಳಿಗೆ ಎಡಗಣ್ಣು ಹೊಡೆದುಕೊಂಡರೆ ಅಪಶಕುನ ಆಗುವುದು. ಈಗ ಜಯದೇವ್‌ಗೆ ಗತಿ ಕಾಣಿಸಬೇಕು ಎಂದು ಅವನ ಎರಡನೇ ಪತ್ನಿ ದಿಯಾ ಕೂಡ ಪ್ಲ್ಯಾನ್‌ ಮಾಡಿದ್ದಾಳೆ.

ಜಯದೇವ್‌ ಹಾಗೂ ಶಕುಂತಲಾರಿಂದ ಏನೆಲ್ಲ ಸಮಸ್ಯೆ ಆಗಿದೆ? ತನ್ನ ಮಗ ಆಕಾಶ್‌ಗೂ ಕೂಡ ಅಪಾಯ ಆಗುತ್ತಿತ್ತು ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ತನ್ನ ಮನೆಗೆ ಬಂದಿದ್ದಾನೆ. ಸದ್ಯ ಪ್ರೋಮೋ ಕೂಡ ರಿಲೀಸ್‌ ಆಗಿದ್ದು, ಜಯದೇವ್‌ಗೆ ಏನು ಮಾಡಲಿದ್ದಾನೆ ಎಂದು ಕಾದು ನೋಡಬೇಕಿದೆ.

ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದಾರೆ. ಇನ್ನೊಂದು ಕಡೆ ಜಯದೇವ್‌ಗೆ ತಕ್ಕ ಶಾಸ್ತಿಯೂ ಆಗಬೇಕಿದೆ. ಈ ದುಷ್ಟರಿಗೆ ಶಿಕ್ಷೆ ಕೊಡಿಸೋದು ನನ್ನ ಉದ್ದೇಶ ಅಲ್ಲ ಎಂದು ಭೂಮಿಕಾ ಹೇಳಿದ್ದಾಳೆ. ಹೀಗಾಗಿ ಗೌತಮ್‌ ಈಗ ಜಯದೇವ್‌ ಸೊಕ್ಕು ಮುರಿಯೋದು ಡೌಟ್.‌ ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲಕಾರಿಯಾಗಿವೆ.

ಈಗಾಗಲೇ ಸೀರಿಯಲ್‌ ಸಾವಿರ ಸಂಚಿಕೆಯತ್ತ ದಾಪುಗಾಲಿಟ್ಟಿದೆ. ಗೌತಮ್‌ ಹಾಗೂ ಭೂಮಿಕಾ ಒಂದಾಗೋದು ಒಂದು ಕಡೆಯಾದರೆ, ಜಯದೇವ್‌ಗೆ ಶಿಕ್ಷೆ ಆಗಬೇಕು ಎನ್ನೋದು ಮತ್ತೊಂದು ಕಡೆಯ ಕಥೆ ಆಗಿತ್ತು. ಹೀಗಾಗಿ ಜಯದೇವ್‌ ಪತನದತ್ತ ಮುಂದೆ ಕಥೆ ಸಾಗಬಹುದು.

Source link

Leave a Reply

Your email address will not be published. Required fields are marked *