Headlines

ಪದ್ಮ ಪ್ರಶಸ್ತಿ: ಮಮ್ಮುಟಿ, ಧರ್ಮೇಂದ್ರ ಇನ್ನೂ ಹಲವರಿಗೆ ಗೌರವ

ಪದ್ಮ ಪ್ರಶಸ್ತಿ: ಮಮ್ಮುಟಿ, ಧರ್ಮೇಂದ್ರ ಇನ್ನೂ ಹಲವರಿಗೆ ಗೌರವ


ಭಾರತದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಘೋಷಿಸಿದೆ. ಕಲೆ, ಸಮಾಜ ಸೇವೆ, ಸಾಹಿತ್ಯ, ಶಿಕ್ಷಣ, ಆಡಳಿತ, ವಿಜ್ಞಾನ, ಕ್ರೀಡೆ, ಉದ್ಯಮ, ವೈದ್ಯಕೀಯ ಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವ ವ್ಯಕ್ತಿಗೆ ಈ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ, ಕಲಾದಲ್ಲಿ ಈ ಬಾರಿ ಹಲವು ಸಿನಿಮಾ ನಟ, ನಟಿಯರಿಗೆ ಪದ್ಮ ಪ್ರಶಸ್ತಿಗಳು ದೊರಕಿವೆ, ಇಲ್ಲಿದೆ ನೋಡಿ ಪಟ್ಟಿ…

ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಧರ್ಮೇಂದ್ರ ಅವರು 2025ರ ನವೆಂಬರ್‌ನಲ್ಲಿ ನಿಧನ ಹೊಂದಿದರು. ತಮಿಳುನಾಡು ಮೂಲಕ ವೈಯಲಿನ್ ವಾದಕಿ ಎನ್ ರಾಜನ್ ಅವರಿಗೂ ಸಹ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪದ್ಮ ವಿಭೂಷಣ ದೊರಕಿರುವ ಐವರಲ್ಲಿ ಕಲಾ ಕ್ಷೇತ್ರಕ್ಕೆ ಎರಡು ಪ್ರಶಸ್ತಿ ಬಂದಿರುವುದು ವಿಶೇಷ.

ಇದನ್ನೂ ಓದಿ:ರಾಜ್ಯ ಕಡಲೆ ಬೆಳೆಗಾರರ ​​ಬೆನ್ನಿಗೆ ನಿಂತ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಎಷ್ಟು?

ಒಟ್ಟು 13 ಪದ್ಮ ಭೂಷಣ ಪ್ರಶಸ್ತಿಗಳನ್ನು ಘೋಷಿಸಲಾಗಿದೆ, ನಾಲ್ಕು ಕಲಾ ಪ್ರದರ್ಶನಗಳು. ಹಿಂದಿ, ಕನ್ನಡ ಸೇರಿದಂತೆ ದೇಶದ ಹಲವಾರು ಭಾಷೆಗಳಲ್ಲಿ ಹಾಡಿರುವ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ದೇಶದ ಅತ್ಯುತ್ತಮ ನಟ ಮತ್ತು ಅಪರೂಪದ ಸೂಪರ್ ಸ್ಟಾರ್ ಆಗಿರುವ ಮಲಯಾಳಂನ ಖ್ಯಾತ ನಟ ಮಮ್ಮುಟಿ ಅವರಿಗೆ ಪದ್ಮ ಭೂಷಣ ಗೌರವ ದಕ್ಕಿದೆ. ಭಾರತದ ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಗೌರವ ದಕ್ಕಿದೆ. ಇನ್ನು ಕರ್ನಾಟಕದ ಶತಾವಧಾನಿ ಗಣೇಶ್ ಅವರಿಗೆ ಕಲಾ ಕ್ಷೇತ್ರದ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಹಾಗೂ ಮಾಗಂಟಿ ಮುರಳಿ ಮೋಹನ್ ಸೇರಿದಂತೆ ಇನ್ನೂ ಕೆಲವು ಕಲಾವಿದರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕಳೆದ ವರ್ಷ ಹಠಾತ್ತಾಗಿ ನಿಧನ ಹೊಂದಿದ ಹೆಸರಾಂತ ಖ್ಯಾತ ನಟ, ನಿರ್ದೇಶಕ ಸತೀಶ್ ಶಾ ಅವರ ಮರೋಣತ್ತರ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:10 pm, ಭಾನುವಾರ, 25 ಜನವರಿ 26



Source link

Leave a Reply

Your email address will not be published. Required fields are marked *