‘ಜನ ನಾಯಗನ್’ ಸಿನಿಮಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ: ನೂರಾರು ಕೋಟಿ ನಷ್ಟದ ಭೀತಿ

‘ಜನ ನಾಯಗನ್’ ಸಿನಿಮಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ: ನೂರಾರು ಕೋಟಿ ನಷ್ಟದ ಭೀತಿ


ದಳಪತಿ ವಿಜಯ್ (ತಲಪತಿ ವಿಜಯ್) ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಕನ್’ ಸಿನಿಮಾಕ್ಕೆ ಸಿಬಿಎಫ್ ಸಿ ಕಾರಣಕ್ಕೆ ತೀವ್ರ ಹಿನ್ನಡೆ ಆಗಿದ್ದು, ಬಿಡುಗಡೆಗೆ ಮುನ್ನ ನಿರ್ಮಾಪಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಎಂತೆಂಥ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರ ನೀಡಿರುವ ಸೆನ್ಸಾರ್ ಮಂಡಳಿ, ರಿಮೇಕ್ ಸಿನಿಮಾ ಆಗಿರುವ ‘ಜನ ನಾಯಕನ್’ ಚಿತ್ರಕ್ಕೆ ಪ್ರಮಾಣ ಪತ್ರ ನಿರಾಕರಿಸಿದೆ. ಪ್ರಕರಣ ಇದೀಗ ಮದ್ರಾಸ್ ನಲ್ಲಿದೆ. ಹೀಗಿರುವ ಸಿನಿಮಾದ ನಿರ್ಮಾಪಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿನಿಮಾ ಬಿಡುಗಡೆ ಮಾಡದಿದ್ದರೆ ನಷ್ಟಪರಿಹಾರ ಒಟಿಟಿಯವರು ನಿರ್ಮಾಪಕರಿಗೆ ಒಪ್ಪಂದ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.

‘ಜನ ನಾಯಕನ್’ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಮುಂಗಡವಾಗಿ ಅಮೆಜಾನ್ ಪ್ರೈಮ್ ವಿಡಿಯೋಕ್ಕೆ ಭಾರಿ ಮೊತ್ತಕ್ಕೆ ನಿರ್ಮಾಪಕ ವೆಂಕಟ್ ನಾರಾಯಣ್ ಅವರು ಮಾರಾಟ ಮಾಡಿದ್ದರು. ಅಮೆಜಾನ್ ಜೊತೆಗಿನ ಒಪ್ಪಂದದಂತೆ ಸಿನಿಮಾದ ಬಿಡುಗಡೆ ದಿನಾಂಕದ ನಾಲ್ಕು ವಾರಗಳ ತರುವಾಯ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಬೇಕಿತ್ತು. ಒಪ್ಪಂದದ ಪ್ರಕಾರ ‘ಜನ ನಾಯಕನ್’ ಸಿನಿಮಾವನ್ನು ಅಮೆಜಾನ್ ಬಿಡುಗಡೆ ಮಾಡಲು ಕೆಲವೇ ದಿನಗಳು ಬಾಕಿ ಇವೆ.

ಇದೀಗ ಅಮೆಜಾನ್ ಪ್ರೈಂ ವಿಡಿಯೋದವರು ನಿರ್ಮಾಪಕ ವೆಂಕಟ್ ನಾರಾಯಣ್ ಅವರಿಗೆ ಎಚ್ಚರಿಕೆ ನೀಡಿದ್ದು, ಒಂದೊಮ್ಮೆ ಒಪ್ಪಂದದ ಪ್ರಕಾರ ನಿಗದಿತ ಸಮಯಕ್ಕೆ ‘ಜನ ನಾಯಕನ್’ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿದ್ದು ಭಾರಿ ಮೊತ್ತದ ನಷ್ಟ ಪರಿಹಾರವನ್ನು ತುಂಬಬೇಕು. ಜೊತೆಗೆ, ಸಿನಿಮಾ ಬಿಡುಗಡೆ ಮಾಡದೇ ಇದ್ದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಕನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

‘ಜನ ನಾಯಕನ್’ ಸಿನಿಮಾಕ್ಕೆ ಸಿಬಿಎಫ್ ಸಿಯು ಪ್ರಮಾಣ ಪತ್ರವನ್ನು ನಿರಾಕರಿಸಿದೆ. ಇದೇ ಕಾರಣಕ್ಕೆ ನಿರ್ಮಾಪಕರು ಮದ್ರಾಸ್ ಸಿನಿಮಾ ಮೆಟ್ಟಿಲೇರಿದ್ದಾರೆ. ಅಲ್ಲಿ ಚಿತ್ರದ ಪರವಾಗಿ ತೀರ್ಪು ಬಂದಿತ್ತು. ಆದರೆ ತೀರ್ಪುಬಿದ್ದ ಕೆಲವೇ ಗಂಟೆಗಳಲ್ಲಿ ಸಿಬಿಎಫ್ ಸಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದು, ಸಿನಿಮಾದ ಪರವಾಗಿ ಆದೇಶ ನೀಡಿದ್ದ ಮದ್ರಾಸ್ ಹೈಕಮಾಂಡ್ ತನ್ನ ಆದೇಶಕ್ಕೆ ತಡೆ ನೀಡಿತು. ಪ್ರಕರಣ ಪ್ರಮುಖ ಮೆಟ್ಟಿಲೇರಿ ಬಂದಿದ್ದೂ ಆಗಿದೆ. ಜನವರಿ 27 ರಂದು ಪ್ರಕರಣದ ಬಗ್ಗೆ ಆದೇಶ ಹೊರಬೀಳಲಿದೆ.

‘ಜನ ನಾಯಕನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರಿಮೇಕಾಗಿದೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಸಿನಿಮಾದ ನಿರ್ಮಾಣ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:39 pm, ಭಾನುವಾರ, 25 ಜನವರಿ 26



Source link

Leave a Reply

Your email address will not be published. Required fields are marked *