Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 26ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 26ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 26ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಯೋಗ ಇದೆ. ಬಹಳ ಸಮಯದಿಂದ ನೀವು ಹೇಳಬೇಕು ಅಂದುಕೊಳ್ಳುತ್ತಾ ಇದ್ದ ಕೆಲವು ವಿಚಾರಗಳನ್ನು ಸಂಬಂಧ ಪಟ್ಟವರಿಗೆ ಹೇಳಲಾಗಿದೆ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ನೀವು ಕೈಯಿಂದ ಹಣ ಹಾಕಿ, ಮಾಡಿಕೊಟ್ಟ ಕೆಲಸದ ಬಾಕಿ ವಸೂಲಿ ಮಾಡುವುದು ಈ ದಿನದಿಂದ. ಓದಿನಲ್ಲಿ ಆಸಕ್ತಿ ಕುದುರುವುದು ಕಷ್ಟ ಆಗಲಿದೆ. ಸ್ನೇಹಿತರ ಜೊತೆಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಮನೆಯ ಖರ್ಚು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿಗೆ ಆಗಲಿದೆ. ಆದಾಯ ಹಾಗೂ ಅದನ್ನು ಬಳಸುವುದಕ್ಕೂ ತಾಳೆ ಆಗುತ್ತಿಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಆದಾಯದ ಮೂಲ ಜಾಸ್ತಿ ಮಾಡಿಕೊಳ್ಳಲು ಹಾಕುವಂಥ ಶ್ರಮ ಫಲ ​​ನೀಡುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಅವರ ಬೇಕು- ಬೇಡಗಳನ್ನು ಕೇಳಿಕೊಂಡು, ಅದನ್ನು ಒದಗಿಸಿಕೊಡಲು ಆದ್ಯತೆ ನೀಡಬೇಕಾಗಿದೆ. ನಿಮ್ಮ ನಿಲುವು- ಉದ್ದೇಶದ ಬಗ್ಗೆ ಆಕ್ಷೇಪದ ಮಾತುಗಳನ್ನು ಹೇಳಲಿದ್ದಾರೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿರ್ಭಾವುಕ ನಿರ್ಧಾರ ತೆಗೆದುಕೊಳ್ಳಬೇಕು, ಯಾರನ್ನೂ ಹಚ್ಚಿಕೊಳ್ಳಬಾರದು ಎಂದುಕೊಳ್ಳಬೇಕು. ಉದ್ಯೋಗ ಸ್ಥಳದಲ್ಲಿ ನಿಮ್ಮ ನಿರೀಕ್ಷೆ ಮಾಡುವುದರಿಂದ ತಲುಪಲು ಸಾಧ್ಯ ಇಲ್ಲದಷ್ಟು ಎತ್ತರದಲ್ಲಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ನೀವು ಒಪ್ಪಿದ ಕೆಲಸ- ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದಾಗಿ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದರಿಂದ ನೀವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೀರಿ. ಪ್ರಯಾಣಕ್ಕೆ ಹೆಚ್ಚು ಖರ್ಚು ಮಾಡುವ ಯೋಗ ಇದೆ. ಮಾತಿನಂತೆ ನಡೆದುಕೊಳ್ಳಬೇಕು ನಿಮ್ಮ ಬದ್ಧತೆಗೆ ಮೆಚ್ಚುಗೆ ಸೂಚಿಸಲಾಗುವುದು.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *