ಪದ್ಮಶ್ರೀ ಅಂಕೇಗೌಡರ ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ ಗೊತ್ತಾ? ಸರ್ಕಾರಕ್ಕೆ ಅವರ ಮನವಿಯೇನು? ಇಲ್ಲಿದೆ ನೋಡಿ

ಪದ್ಮಶ್ರೀ ಅಂಕೇಗೌಡರ ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ ಗೊತ್ತಾ? ಸರ್ಕಾರಕ್ಕೆ ಅವರ ಮನವಿಯೇನು? ಇಲ್ಲಿದೆ ನೋಡಿ


ಮಂಡ್ಯ, ಜನವರಿ 26: ಜಿಲ್ಲೆಯ ಮಂಡ್ಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ಆದ ‘ಪುಸ್ತಕ ಮನೆ’ ಎಂಬ ಬೃಹತ್ ಗ್ರಂಥಾಲಯವನ್ನು ನಿರ್ಮಿಸಿರುವುದು ಈ ಗೌರವಕ್ಕೆ ಭಜನರಾಗಲು ಕಾರಣವಾಗಿದೆ. ನೂರು ವರ್ಷಗಳ ಹಳೆಯದಾದ ಶೇಕ್ಸ್‌ಪಿಯರ್ ಕೃತಿಗಳು ಸೇರಿದಂತೆ ಅನೇಕ ಅಮೂಲ್ಯ ಗ್ರಂಥಗಳನ್ನು ಅವರ ಮನೆಯಲ್ಲಿ ಸಂಗ್ರಹಿಸಲಾಗಿದೆ.

ಅಂಕೇಗೌಡರು ತಮ್ಮ ಗ್ರಂಥಾಲಯವನ್ನು ಕೇವಲ ಪುಸ್ತಕ ಸಂಗ್ರಹವಾಗಿ ನೋಡಿದ್ದಾರೆ, ಮುಂದಿನ ಪೀಳಿಗೆಗೆ ಪೂರ್ವಿಕರ ಇತಿಹಾಸ ಮತ್ತು ಜ್ಞಾನವನ್ನು ತಲುಪಿಸುವ ಸಾಧನವೆಂದು ಪರಿಗಣಿಸಲಾಗಿದೆ. ಇಲ್ಲಿ ಭಗವದ್ಗೀತೆ ಕುರಿತು 2,500, ಮಹಾತ್ಮ ಗಾಂಧಿ ಕುರಿತು 2,500 ಹಾಗೂ ರಾಮಾಯಣದ 3,000ಕ್ಕೂ ಹೆಚ್ಚು ವಿಭಿನ್ನ ಆವೃತ್ತಿಗಳಿವೆ. ಈ ಗ್ರಂಥಾಲಯ ಸ್ಪಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಒಂದು ದೊಡ್ಡ ಸಂಪನ್ಮೂಲ ಕೇಂದ್ರವಾಗಿದೆ. ಪದ್ಮಶ್ರೀ ಪ್ರಶಸ್ತಿ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಮತ್ತು ಹಣವೇ ಮುಖ್ಯವಲ್ಲ ಎಂದು ಸಮಾಜಕ್ಕೆ ಸಾರಿದೆ ಎಂದು ಅಂಕೇಗೌಡರು ಹೇಳುತ್ತಾರೆ. ಸರ್ಕಾರಕ್ಕೆ ನಿಮ್ಮ ಬೇಡಿಕೆಯೇನು ಎಂದು ಕೇಳಲಾದ ಪ್ರಶ್ನೆಗೆ ಅಂಕೇಗೌಡರು ಹೇಳಿದ್ದೇನು? ವಿಡಿಯೋದಲ್ಲಿದೆ ನೋಡಿ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *