ಬೆಳಗಾವಿ, ಜನವರಿ 26: ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್ ಬಳಿ 400 ಕೋಟಿ ರಾಬರಿ ಪ್ರಕರಣ ವಿಚಾರವಾಗಿ ಸಾಕಷ್ಟು ಶಾಕಿಂಗ್ ವಿಚಾರಗಳು ಬಯಲಾಗ್ತಿವೆ. ಹಣ ತುಂಬಿದ್ದ ಕಂಟೇನರ್ಗಳ ಹೈಜಾಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ಎಸ್ಐಟಿಯಿಂದ ತನಿಖೆ ಚುರುಕುಗೊಂಡಿದೆ. ಈ ನಡುವೆ ಕೆಲವು ಪ್ರಮುಖ ಅಂಶಗಳು ಹುಬ್ಬೇರುವಂತೆ ಮಾಡಿದ್ದು, ಎರಡು ಸಾವಿರ ಮುಖ ಬೆಲೆಯ ನೋಟುಗಳು ಗುಜರಾತ್ನ ಪವರ್ ಫುಲ್ ರಾಜಕಾರಣಿಗೆ ಸೇರಿದ್ದು ಎಂಬ ಸುದ್ದಿ ಹರಿದಾಡುತ್ತಿದೆ.
ಕಿಶೋರ್ ಸಾಳ್ವೆ ಅಲಿಯಾಸ್ ಸೇಠ್ ಬರೀ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು, ನೋಟು ಬದಲಾವಣೆಗಾಗಿ ಹಣ ಸಾಗಿಸುತ್ತಿದ್ದರು. ಇದರ ಜವಾಬ್ದಾರಿ ಆರೋಪಿ ವಿರಾಟ್ ಗೆ ಕಿಶೋರ್ ನೀಡಿದ್ದ. ವಿರಾಟ್ ಹುಡುಗರಿಂದ ಹಣ ಸಾಗಾಟದ ವೇಳೆ ಕಂಟೇನರ್ ಮಿಸ್ಸಿಂಗ್ ಆಗಿದ್ದಾರೆ. ಹಣದ ಸಮೇತ ಹುಡುಗರು ನಾಪತ್ತೆ ಆಗಿದ್ದಾರೆ. ಇನ್ನು ಕಿಶೋರ್ ಮತ್ತು ಜಯೇಶ್ ಮಾತನಾಡಿರುವ ಸಂಭಾಷಣೆಯಲ್ಲಿ ಹಣ ಗುಜರಾತ್ ನ ರಾಜಕಾರಣಿಗೆ ಸೇರಿದ್ದು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ. ಹೀಗಾಗಿ ಆಡಿಯೋ ಸಂಭಾಷಣೆ ಮತ್ತು ವಾಟ್ಸ್ಯಾಪ್ ಕಾಲ್ ಸಂಭಾಷಣೆ ಆಧಾರದ ಮೇಲೆ ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಸದ್ಯ ವಿರಾಟ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: 400 ಕೋಟಿ ರೂಬರಿ; ಚೋರ್ಲಾ ಘಾಟ್ನಲ್ಲೇ ದರೋಡೆ ನಡೆದಿದ್ದೇಕೆ? ಎಸ್ ಪಿ ಹೇಳಿದಷ್ಟು
ತನಿಖೆಗೆ ಸಲ್ಲಿಸಿದ ಆರೋಪಿ
ಇನ್ನು ರಾಬರಿ ಪ್ರಕರಣ ಸಂಬಂಧ ಕರ್ನಾಟಕ ಪೊಲೀಸರಿಗೆ ಪ್ರಕರಣ ದಾಖಲಿಸುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಯಾರಾದ್ರು ಬಂದು ದೂರು ಕೊಟ್ಟರೆ ನಮ್ಮ ಪೊಲೀಸರು ತನಿಖೆ ಮಾಡ್ತಾರೆ. ಚೋರ್ಲಾ ಘಾಟ್ ಬಹಳ ದೊಡ್ಡದಿದ್ದು ಘಟನೆ ನಡೆದ ಸ್ಥಳ ಮಹಾರಾಷ್ಟ್ರ, ಗೋವಾ ಅಥವಾ ಕರ್ನಾಟಕಕ್ಕೆ ಸೇರಿದ್ದ ಎಂಬ ಬಗ್ಗೆ ಗೊಂದಲವಿದೆ. 400 ಕೋಟಿ ಕಾಂಗ್ರೆಸ್ಗೆ ಸೇರಿದ ಹಣ ಮಹಾರಾಷ್ಟ್ರ ಸಿಎಂ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, ಹಣ ಎಣಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಘಟನೆ ನಡೆದಿದೆ ಎಂಬ ಬಗ್ಗೆ ಎಲ್ಲಿಯೂ ಸ್ಪಷ್ಟವಿಲ್ಲ, ಅಲ್ಲಿ ನಿಜವಾಗಿ ಏನಾಗಿದೆ ಎಂಬುದು ಗೊತ್ತಿಲ್ಲ.
ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ದರೋಡೆಯಾಗಿರುವ 400 ಕೋಟಿ ಹಣ ಯಾರದ್ದು ಏನು ಅಂತಾ ಗೊತ್ತಿಲ್ಲ. ಗೋವಾ, ಗುಜರಾತ್, ಮಹಾರಾಷ್ಟ್ರ ಲಿಂಕ್ ಇದೆ ಅಂತಿದ್ದಾರೆ. ಯಾರದ್ದೇ ಇರಲಿ, ಆ ಬಗ್ಗೆ ತನಿಖೆಯಾಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಇದ್ದಾರೆ. ಇಲ್ಲಿ ಬಿಜೆಪಿ ಎಂಎಲ್ಸಿ ಹಣ ತಿರುಪತಿಗೆ ಹೋಗುತ್ತಿತ್ತು. ಬಿಜೆಪಿಯವರಿಗೆ ಹಣದ ಬಗ್ಗೆ ಹೇಗೆ ಗೊತ್ತಾಯಿತು? ಚುನಾವಣೆ ವೇಳೆ ಬರುವ ಅಮಿತ್ ಶಾ ಈಗ ಎಲ್ಲಿ ಹೋದರು? ಕಲಬುರಗಿಯಲ್ಲಿ ರೊಟ್ಟಿ ಮಾಡುವುದು ಮೋದಿಗೆ ಗೊತ್ತಾಗುತ್ತದೆ. ಈ ಹಣದ ಬಗ್ಗೆ ಯಾಕೆ ಗೊತ್ತಾಗಿಲ್ಲ ಎಂದೂ ಪ್ರಿಯಾಂಕ್ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಇದು ಲೀಗಲ್ ಹಣ ಆಗುವುದಕ್ಕೆ ಸಾಧ್ಯವೇ ಇಲ್ಲ. ತನಿಖೆಯಾಗಲಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.