ಕನಕಪುರದಲ್ಲಿ ಕನಕೋತ್ಸವ ಕಾರ್ಯಕ್ರಮ ನಡೆಯಿತು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ 12) ರಿಯಾಲಿಟಿ ಶೋ ವಿನ್ನರ್ ಗಿಲ್ಲಿ ನಟ ಅದರಲ್ಲಿ ಭಾಗಿ ಆಗಿದ್ದಾರೆ. ಗಿಲ್ಲಿ ಅವರು ಹೋದಲ್ಲೆಲ್ಲ ಅಭಿಮಾನಿಗಳು ಸೇರುತ್ತಿದ್ದಾರೆ. ಗಿಲ್ಲಿ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆ. ಕನಕೋತ್ಸವ ಕಾರ್ಯಕ್ರಮದ ವೇದಿಕೆಗೆ ಗಿಲ್ಲಿ ಬಂದಾಗ ಕೆಲವು ಅಭಿಮಾನಿಗಳು ನುಗ್ಗಿದ್ದಾರೆ. ಅವರನ್ನು ನಿಯಂತ್ರಿಸಲಾಯಿತು. ಗಿಲ್ಲಿ ನಟ (ಗಿಲ್ಲಿ ನಟ) ಮೇಲೆ ಜನರಿಗೆ ಇರುವ ಕ್ರೇಜ್ ಎಷ್ಟು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದೇ ಕಾರ್ಯಕ್ರಮದಲ್ಲಿ ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಕೂಡಿ ಭಾಗಿ ಆಗಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಮೆಹಂದಿ ಹಾಗೂ ರಂಗೋಲಿ ಸ್ಪರ್ಧೆ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.