ಬೆಂಗಳೂರಿನಲ್ಲಿ ಹುಡುಗಿಯರನ್ನ ಡೇಟಿಂಗ್​​ಗೆ​​​​​ ಕರೆದುಕೊಂಡು ಹೋಗುವ ಮುನ್ನ ಎಚ್ಚರ, ಮೂರು ಪಂಗನಾಮ ಹಾಕಿಯೇ ಕಳಿಸೋದು

ಬೆಂಗಳೂರಿನಲ್ಲಿ ಹುಡುಗಿಯರನ್ನ ಡೇಟಿಂಗ್​​ಗೆ​​​​​ ಕರೆದುಕೊಂಡು ಹೋಗುವ ಮುನ್ನ ಎಚ್ಚರ, ಮೂರು ಪಂಗನಾಮ ಹಾಕಿಯೇ ಕಳಿಸೋದು


ಬೆಂಗಳೂರು, ಜ.26: ಬೆಂಗಳೂರು ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ಇತ್ತೀಚೆಗೆ ‘ರೆಸ್ಟೋರೆಂಟ್ ಡೇಟಿಂಗ್ ಹಗರಣ’ (ರೆಸ್ಟೋರೆಂಟ್ ಡೇಟಿಂಗ್ ಸ್ಕ್ಯಾಮ್) ಎಂಬ ವಂಚನೆ ಭಾರಿ ಸದ್ದು ಮಾಡುತ್ತಿದೆ. ಒಂದು ಸಾಮಾನ್ಯ ಡೇಟ್‌ನಲ್ಲಿ ನೀವು ಕೇವಲ 2,000 ರೂ. ಖರ್ಚು ಮಾಡಬೇಕಾದ ಜಾಗದಲ್ಲಿ 20,000 ರೂ. ರಿಂದ 50,000 ರೂ. ವರೆಗೆ ಬಿಲ್ ಪಾವತಿಸಬೇಕಾದ ಪರಿಸ್ಥಿತಿ ಬರಬಹುದು. ಈ ವಂಚನೆ ಹೇಗಿದೆ ಎಂದು ತಿಳಿದುಕೊಂಡರೆ ಖಂಡಿತ ಅಚ್ಚರಿಪಡುವುದು ನಿಜ. ವಂಚಕರು (ಸಾಮಾನ್ಯವಾಗಿ ಯುವತಿಯರು) ಟಿಂಡರ್, ಬಂಬಲ್ ಅಥವಾ ಹಿಂಜ್ನಂತಹ ಆಪ್‌ಗಳಲ್ಲಿ ಆಕರ್ಷಕ ಪ್ರೊಫೈಲ್ ಸೃಷ್ಟಿಸಿ ಪುರುಷರನ್ನು ಸಂಪರ್ಕಿಸುತ್ತಾರೆ. ಮಾತುಕತೆ ಶುರುವಾದ ಸ್ವಲ್ಪ ಸಮಯದಲ್ಲೇ ಅವರು ಭೇಟಿಯಾಗಲು ಒತ್ತಾಯಿಸುತ್ತಾರೆ. ವಿಶೇಷವೆಂದರೆ, ಅವರು ತಮಗೆ ಮೊದಲೇ ಪರಿಚಯವಿರುವ ಅಥವಾ ನಗರದ ಯಾವುದೋ ಒಂದು ಮೂಲೆಯಲ್ಲಿ ನಿರ್ದಿಷ್ಟ ಕೆಫೆ ಅಥವಾ ಬಾರ್‌ಗೆ ಬರುವಂತೆ ನಿಮ್ಮನ್ನು ಒಪ್ಪುತ್ತಾರೆ.

ನೀವು ಅಲ್ಲಿಗೆ ಬಂದ ಕೂಡಲೇ, ಅವರ ಮೆನುವಿನಲ್ಲಿರುವ ಅತ್ಯಂತ ದುಬಾರಿ ವೈನ್, ಹುಕ್ಕಾ ಅಥವಾ ಆಹಾರ ಪದಾರ್ಥಗಳನ್ನು ಸಾರಸಗಟಾಗಿ ಆರ್ಡರ್ ಮಾಡುತ್ತಾರೆ. ಕೆಲವೊಮ್ಮೆ ಮೆನುವಿನಲ್ಲಿ ಬೆಲೆಗಳೇ ಇರುವುದಿಲ್ಲ. ಆಹಾರ ಸೇವಿಸಿದ ತಕ್ಷಣ ಅಥವಾ ಬಿಲ್ ಬರುವ ಮುನ್ನವೇ ಅವರಿಗೆ “ತುರ್ತು ಕರೆ ಬಂದಿದೆ” ಅಥವಾ “ಮನೆಯಲ್ಲಿ ಏನೋ ಸಮಸ್ಯೆಯಾಗಿದೆ” ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ನಂತರ ನಿಮ್ಮ ಕೈ ಸೇರುವ ಬಿಲ್ ನೋಡಿ ನೀವು ಬೆಚ್ಚಿಬೀಳುತ್ತೀರಿ. ಸಾಮಾನ್ಯ ಕೆಫೆಯಲ್ಲಿ 20,000 ರೂ. ಬಿಲ್ ಬಂದಿರುತ್ತದೆ. ಒಂದು ವೇಳೆ ಇದನ್ನು ನೀವು ಪ್ರಶ್ನಿಸಿದರೆ, ರೆಸ್ಟೋರೆಂಟ್‌ನ ಬೌನ್ಸರ್‌ಗಳು ಅಥವಾ ಮ್ಯಾನೇಜರ್ ನಿಮಗೆ ಸುತ್ತುವರಿದು ಹಣ ಪಾವತಿಸುವಂತೆ ಬೆದರಿಕೆ ಹಾಕುತ್ತಾರೆ.

ಇದನ್ನೂ ಓದಿ: “ಮದರ್ ಆಫ್ ಆಲ್ ಟ್ರೆಡ್ ಡೀಲ್ಸ್”: ಈ ಒಪ್ಪಂದದಿಂದ ಅಗ್ಗ ವಸ್ತು ಈ ವಸ್ತುಗಳ ಬೆಲೆ

ಎಂ.ಜಿ. ರಸ್ತೆ ಮತ್ತು ಕೋರಮಂಗಲದ ಕೆಲವು ಕೆಫೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಒಬ್ಬ ವ್ಯಕ್ತಿಗೆ ಕೇವಲ ಒಂದು ಗಂಟೆಯ ಡೇಟ್‌ನಲ್ಲಿ 40,000 ರೂ. ಬಿಲ್ ನೀಡಲಾಯಿತು. ಅಂಧೇರಿ ಮತ್ತು ಬಾಂದ್ರಾ ಭಾಗದ ಕೆಲವು ಕ್ಲಬ್‌ಗಳಲ್ಲಿ ಈ ದಂಧೆ ಹೆಚ್ಚಾಗಿರುತ್ತದೆ. ಇನ್ನು ಈ ದಂಧೆಗಾಗಿ ರೆಸ್ಟೋರೆಂಟ್ ಮತ್ತು ವಂಚಕ ಯುವತಿಯರು ಮೊದಲೇ ಒಪ್ಪಂದ ಮಾಡಿಕೊಂಡಿದ್ದಾರೆ. ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಎಂ.ಜಿ. ರೋಡ್‌ನಲ್ಲಿ ಇಂತಹ ದಂಧೆ ಹೆಚ್ಚಿದೆ. ಬೆಂಗಳೂರು ಇತ್ತೀಚೆಗೆ ಇಂತಹ ಹತ್ತಾರು ಜಾಲಗಳನ್ನು ರೆಸ್ಟೋರೆಂಟ್ ಮ್ಯಾನೇಜರ್‌ಗಳನ್ನು ಬಂಧಿಸಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *