ಬಜೆಟ್​ನಲ್ಲಿ ಜಿಎಸ್​ಟಿ ದರ ಇಳಿಕೆಗೆ ಕ್ರಮ: ಎಂಎಸ್​ಎಂಇಗಳಿಂದ ನಿರೀಕ್ಷೆ

ಬಜೆಟ್​ನಲ್ಲಿ ಜಿಎಸ್​ಟಿ ದರ ಇಳಿಕೆಗೆ ಕ್ರಮ: ಎಂಎಸ್​ಎಂಇಗಳಿಂದ ನಿರೀಕ್ಷೆ


ಜನವರಿ 26: ದಿನನಿತ್ಯ ಬಳಕೆಯ ಸರಕುಗಳ ಮೇಲೆ ಜಿಎಸ್ಟಿ ದರಗಳನ್ನು ಮುಂಬರುವ ಬಜೆಟ್ನಲ್ಲಿ (ಕೇಂದ್ರ ಬಜೆಟ್) ಕಡಿಮೆ ಮಾಡಬೇಕು ಎಂದು ಸಣ್ಣ ಉದ್ದಿಮೆದಾರರು ನಿರೀಕ್ಷಿಸುತ್ತಿದ್ದಾರೆ. ಅಧಿಕ ತೆರಿಗೆಗಳು ಹಾಗೂ ಅಧಿಕ ಖರೀದಿ ವೆಚ್ಚದಿಂದಾಗಿ ತಮ್ಮ ವ್ಯಾಪಾರ ಸಂಸ್ಥೆಗಳು ತುಸು ತೊಡಕು ಎದುರಿಸುತ್ತಿವೆ ಎಂಬುದು ಇವರ ಕೂಗು. ದಿನ ನಿತ್ಯದ ವಸ್ತುಗಳ ಮೇಲೆ ತೆರಿಗೆ ಹೆಚ್ಚು ಲಾಭದಾಯಕವಾಗಿ ನಡೆಸುವುದು ಕಷ್ಟವಾಗುತ್ತದೆ, ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು ಹೈದರಾಬಾದ್‌ನಲ್ಲಿರುವ ವ್ಯಾಪಾರಿಗಳು ಅಳಲು ತೊಡುತ್ತಿದ್ದಾರೆ.

ಅಗತ್ಯ ಸರಕುಗಳ ಬೆಲೆ ಬಾರಿ ಬಾರಿ ಆಗಿದೆ, ಸರಕುಗಳನ್ನು ಖರೀದಿಸಲು ಸಂಗ್ರಹಿಸುವುದು ಕಷ್ಟ. ಲಾಭದ ಮಾರ್ಜಿನ್ ಕಡಿಮೆ ಆಗುತ್ತಿದೆ. ನಿತ್ಯದ ವಹಿವಾಟುಗಳು ಕಡಿಮೆಗೊಂಡಿವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್ ನಲ್ಲಿ ಗಮನಿಸಬೇಕಾದ ಸಂಗತಿಗಳು

ಹಾಲು, ಸಕ್ಕರೆ ಇತ್ಯಾದಿ ಮೂಲಭೂತವಾದ ಆಹಾರ ಮತ್ತು ಡೈರಿ ಉತ್ಪನ್ನಗಳು ಮತ್ತು ಇತರ ನಿತ್ಯ ಬಳಕೆಯ ವಸ್ತುಗಳ ಮೇಲೆ ಜಿಎಸ್ಟಿಯನ್ನು ತೆಗೆದುಹಾಕಬೇಕು ಇಲ್ಲವೇ ಕಡಿಮೆ ಮಾಡಬೇಕು. ಇದರಿಂದ ರೀಟೇಲ್ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರಿಗೂ ರಿಲೀಫ್ ಸಿಕ್ಕಂತಾಗುತ್ತದೆ ಎಂಬುದು ಅವರ ಅನಿಸಿಕೆ.

ಅಗತ್ಯ ವಸ್ತುಗಳ ಮೇಲಿನ ತೆರಿಗೆ ಪ್ರಮಾಣವು ತಳಮಟ್ಟದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ. ಜನಸಾಮಾನ್ಯರ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಒಟ್ಟಾರೆ ಮಾರುಕಟ್ಟೆ ಭಾವನೆಗೂ ಹಿನ್ನಡೆ ತರುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್‌ನಲ್ಲಿದೆ?

ಇತ್ತೀಚೆಗಷ್ಟೇ ಸರ್ಕಾರವು ಜಿಎಸ್ ಟಿ ಸಿಸ್ಟಂ ಅನ್ನು ಸರಳೀಕೃತಗೊಳಿಸಿತ್ತು. ನಾಲ್ಕು ವಿಧ ಇದ್ದ ಜಿಎಸ್ಟಿ ದರಗಳನ್ನು ಎರಡಕ್ಕೆ ಇಳಿಸಲಾಯಿತು. ಶೇ. 5 ಮತ್ತು ಶೇ. 18ರ ದರಗಳು ಮಾತ್ರವೇ ಇದೆ. ಶೇ. 12 ಮತ್ತು ಶೇ. 28ರ ದರಗಳನ್ನು ಕೈಬಿಡಲಾಗಿದೆ. ಹೆಚ್ಚಿನ ಸರಕುಗಳ ಮೇಲಿನ ಟ್ಯಾಕ್ಸ್ ಕಡಿಮೆಯಾಗಿದೆ. ಅದೇ ವೇಳೆ ಜಿಎಸ್ಟಿ ಇನ್ನಷ್ಟು ಇಳಿಯಬೇಕು ಎಂಬ ಆಗ್ರಹ ಮುಂದುವರಿದಿದೆ. ಇನ್ನೂ ಕೆಲವು ಸರಕುಗಳ ಮೇಲೆ ಸಮಾನವಾಗಿ ಕನಿಷ್ಠ ಜಿಎಸ್ಟಿ ಮಾತ್ರ ಹಾಕಿ ಎಂದು ವಾದಿಸಲಾಗುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *