ಕಾಂಗ್ರೆಸ್ ಲೋಕಭವನ ಚಲೋಗೆ ಸುರೇಶ್ ಕುಮಾರ್ ಆಕ್ಷೇಪ
ಬೆಂಗಳೂರು, ಜನವರಿ 26: ಮನ್ರೇಗಾ ಯೋಜನೆ ಹೆಸರು ಕೇಂದ್ರ ಸರ್ಕಾರ ಬದಲಾಯಿಸಿರೋದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಿಂದ ನಾಳೆ ಲೋಕಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ, ಸಿಎಂ ಡಿಸಿಎಂ ನೇತೃತ್ವದಲ್ಲಿ ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭಾಗವಹಿಸಲಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದು, ಕಾಂಗ್ರೆಸ್ ಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಸುರೇಶ್ ಕುಮಾರ್ ಆಕ್ಷೇಪ ಏನು?
ನಾಳೆ ಕರ್ನಾಟಕ ವಿಧಾನಸಭೆಯ ಅಧಿವೇಶನವನ್ನು ಬೆಳಗ್ಗೆ 10 ಗಂಟೆಗೆ ಕರೆಯಲಾಗಿದೆ. ಮೊದಲು ಪ್ರಶ್ನೋತ್ತರ, ನಂತರ ರಾಜ್ಯಪಾಲರ ಭಾಷಣದ ಮೇಲೆ ಗೊಂದಲ ನಿರ್ಣಯದ ಕುರಿತು ಚರ್ಚೆ ಎಂಬುದು ನಾಳಿನ ಕಲಾಪದ ಅಜೆಂಡಾ. ಆದರೆ ನಾಳೆ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್ ಲೋಕದ ಮುತ್ತಿಗೆ ಕಾರ್ಯಕ್ರಮ ನಡೆಯುತ್ತಿದೆ ಎಂಬ ಪ್ರಕಟಣೆ ಕಾಂಗ್ರೆಸ್ ಪಕ್ಷದಿಂದ ಹೊರ ಬಿದ್ದಿದೆ. ಈಗ ಎರಡು ಪ್ರಶ್ನೆಗಳು ಉದ್ಭವವಾಗಿದೆ. ಅಧಿವೇಶನದ ಸಮಯದಲ್ಲಿಯೇ ಆಳುವ ಪಕ್ಷ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ತನ್ನ ಶಾಸಕರೆಲ್ಲಾ ಇದರಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿರುವುದು ಎಷ್ಟು ಸಮಂಜಸ? ಬೆಂಗಳೂರಿನಲ್ಲಿ ಉಚ್ಚ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಮುತ್ತಿಗೆ ಮಾಡುವಂತಹ ಕಾರ್ಯಕ್ರಮವನ್ನು ನ್ಯಾಯಾಲಯದ ನಿರ್ದೇಶನದಂತೆ ನಿಷೇಧಿಸಲಾಗಿದೆ. ಒಂದೊಮ್ಮೆ ಆಳುವ ಪಕ್ಷಕ್ಕೆ ಈ ರೀತಿ ಮುತ್ತಿಗೆ ಎಂಬ ಕಾರ್ಯಕ್ರಮಕ್ಕೆ ಮಾಡಿಕೊಟ್ಟರೆ, ಮುಂದೆ ಬೇರೆ ಪಕ್ಷಗಳಿಗೂ ಅವಕಾಶವಿದೆಯೇ? ಎಂದು ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅಧಿವೇಶನ ಭಾಷಣ, ಗದ್ದಲ ಬಗ್ಗೆ ರಾಷ್ಟ್ರಪತಿಗೆ ರಾಜ್ಯಪಾಲ ವರದಿ; ಏನೆಲ್ಲಾ ಅಂಶಗಳಿವೆ?
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವೇ ಕಾನೂನನ್ನು ಉಲ್ಲಂಘಿಸುವುದು ಎಷ್ಟು ಸಮಂಜಸ? ಆಡಳಿತ ನಡೆಸಬೇಕಾದ ಪಕ್ಷವೇ ರೀತಿ ಮುತ್ತಿಗೆ ಹಾಕುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೂಕ್ತವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಪ್ರಶ್ನೆ ಎತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.