ಬೆಂಗಳೂರು, (ಜನವರಿ 26): ಮದುವೆಯಾದ ಎರಡೇ ಜನಿಸಿದ ಗೃಹಿಣಿ ಒಬ್ಬರು (ಮಹಿಳೆ) ಆತ್ಮಹತ್ಯೆ (ಆತ್ಮಹತ್ಯೆ) ಮಾಡಿಕೊಂಡಿರುವ ಘಟನೆ ಬೆಂಗಳೂರು (ಬೆಂಗಳೂರು) ಯಡಿಯೂರಿನಲ್ಲಿ ನಡೆದಿದೆ. ಕೀರ್ತಿ ಶ್ರೀ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗಂಡನ ಹಾಗೂ ಅವರ ಕುಟುಂಬಸ್ಥರ ವರದಕ್ಷಿಣಿ ಕಿರುಕುಳದಿಂದ ಸಾವಿಗೆ ಶರಣಾಗಿದ್ದಾಳೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಕೀರ್ತಿ ಕುಟುಂಬದವರು ನೀಡಿದ ದೂರನ್ನು ಬನಶಂಕರಿ ಠಾಣೆಗೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೀರ್ತಿ, 2023ರ ನವೆಂಬರ್ನಲ್ಲಿ ಗುರುಪ್ರಸಾದ್ ಎಂಬುವವರನ್ನು ಮದುವೆಯಾಗಿದ್ದರು. 2023ರಲ್ಲಿ ಗುರುಪ್ರಸಾದ್ ಹಾಗೂ ಮೃತ ಕೀರ್ತಿ ಶ್ರೀ ಮದುವೆಯಾಗಿದ್ದರು.ಸುಮಾರು 35 ಲಕ್ಷವನ್ನು ಖರ್ಚು ಮಾಡಿ 400 ಗ್ರಾಂ ಚಿನ್ನ ಹಾಗೂ 5 ಲಕ್ಷ ಹಣವನ್ನು ನೀಡಿ ಮದುವೆಯನ್ನು ಕೊಟ್ಟಿದ್ದರು. ಆದರೆ ಇಷ್ಟಾದರೂ ಮೃತ ಕೀರ್ತಿ ಶ್ರೀ ಗಂಡ ಗುರುಪ್ರಸಾದ್ ಹಾಗೂ ಆತನ ಮನೆಯವರು ಹಣಕ್ಕಾಗಿ ನಿತ್ಯ ಕಿರುಕುಳವನ್ನು ನೀಡುತ್ತಿದ್ದರು. ಹೀಗಾಗಿ ಅವರೇ ಕೊಲೆ ಮಾಡಿದ್ದಾರೆ ಎಂದು ಕೀರ್ತಿಶ್ರೀ ತಂದೆ ಆರೋಪಿಸಿದ್ದಾರೆ.
ಇದನ್ನೂ ನೋಡಿ: ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ
ಈ ಹಿಂದೆ ಕೀರ್ತಿ ಶ್ರೀಯನ್ನು ಗಂಡನ ಮನೆಯವರು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರಂತೆ. ಇದನ್ನ ಮೃತ ಕೀರ್ತಿ ಶ್ರೀ ತಂದೆ ತಾಯಿಯ ಬಳಿ ಹೇಳಿಕೊಂಡಿದ್ದಾರೆ. ಬರಬರುತ್ತಾ ಕೀರ್ತಿಗೆ ಆಕೆಯ ಗಂಡನ ಮನೆಯವರ ಕಿರುಕುಳ ವಿಪರೀತವಾಗಿದ್ದು, ಬಾತ್ರೂಮ್ನಲ್ಲಿ ಕೂಡಿಹಾಕಿ ಆಕೆಗೆ ಹೊಡೆದು ದೈಹಿಕ ಹಿಂಸೆ ನೀಡಿದ್ದರು. ಈ ಸಂಬಂಧ ರ ಕೀರ್ತಿ ಮನೆ ಕಡೆಯವರು ಗುರುಪ್ರಸಾದ್ ಮನೆಯಲ್ಲಿ 3 ಬಾರಿ ಜಗಳವನ್ನು ಶಮನ ಮಾಡುವ ಪಂಚಾಯತಿ ಕೂಡ ಮಾಡಿದ್ದರು.
ಆದರೆ, ನಿನ್(ಜನವರಿ 25)ನ ಮದುವೆ ಸಮಯದಲ್ಲಿ ನಾವು ಕೇಳಿದಷ್ಟು ವರದಕ್ಷಿಣೆ ಕೊಟ್ಟಿಲ್ಲ ಅಂತ ನಿಂದಿಸುತ್ತಾ ಎಲ್ಲರ ಮುಂದೆಯೇ ಆತ ಕೇಳಿದನಂತೆ. ಇದಾದ ನಂತರ ಮನೆ ಕಟ್ಟಲು 10 ಲಕ್ಷ ರೂ. ಕೊಡಿ ಆಮೇಲೆ ಬಾಕಿ ಇದೆ ಎಂದು ನೇರವಾಗಿಯೇ ಗಂಡನ ಮನೆಯವರು ಕೇಳಿದರಂತೆ. ಈ ವೇಳೆ ಎಂಟು ಲಕ್ಷ ಹಣವನ್ನು ಕೊಟ್ಟಿದ್ದರೂ ಸಹ ಕಿರುಕುಳ ಎಂದು ಆರೋಪಿಸಿದ್ದಾರೆ. ಹೀಗಾಗಿ ಇದು ಆತ್ಮಹತ್ಯೆ ಅಲ್ಲ ಗಂಡ ಗುರುಪ್ರಸಾದ್ ಹಾಗೂ ಆತನ ಮನೆಯವರು ಕೀರ್ತಿಯನ್ನ ಕೊಲೆ ಮಾಡಿದ್ದಾರೆ ಎಂದು ಕೀರ್ತಿ ತಂದೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ .
ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಂತೆ ಗಂಡ ಹೆಂಡತಿ ನಡ್ಕೋಬೇಕು. ಜಗಳ ಹಾಗೂ ಹಣದ ಆಸೆ ಹೆಚ್ಚಾದರೆ ಈ ರೀತಿಯ ಕೃತ್ಯಗಳನ್ನು ಮಾಡಿ ಬಿಡುತ್ತಾರೆ. ಸದ್ಯ ಗಂಡ ಗುರುಪ್ರಸಾದ್ ಸೇರಿ 5 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಬನಶಂಕರಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.