Viral: ವೈದ್ಯರು ಬಿಳಿ, ವಕೀಲರು ಕಪ್ಪು ಬಣ್ಣದ ಕೋಟು ಧರಿಸುವುದು ಯಾಕೆ ಗೊತ್ತಾ? ಇದೇ ನೋಡಿ ಕಾರಣ

Viral: ವೈದ್ಯರು ಬಿಳಿ, ವಕೀಲರು ಕಪ್ಪು ಬಣ್ಣದ ಕೋಟು ಧರಿಸುವುದು ಯಾಕೆ ಗೊತ್ತಾ? ಇದೇ ನೋಡಿ ಕಾರಣ


ಶಾಲಾ ಕಾಲೇಜುಗಳಲ್ಲಿ ನಿರ್ದಿಷ್ಟ ಡ್ರೆಸ್ ಕೋಡ್ (ಉಡುಗೆ ಕೋಡ್) ಹಾಗೂ ಯುನಿಫಾರ್ಮ್ ಇದ್ದೇ ಇರುತ್ತದೆ. ಆದರೆ ನೀವು ಆಸ್ಪತ್ರೆಗೆ ಹೋದಾಗ ವೈದ್ಯರು ಬಿಳಿ ಬಣ್ಣದ ಕೋಟ್ ಮತ್ತು ನ್ಯಾಯಾಲಯಕ್ಕೆ ಹೋದಾಗ ವಕೀಲರು ಕಪ್ಪು ಬಣ್ಣದ ಕೋಟ್ ಧರಿಸಿರುವುದನ್ನು ನೀವು ಗಮನಿಸಬಹುದು. ಆದರೆ ಡಾಕ್ಟರ್ಸ್ ಮತ್ತು ಲಾಯರ್‌ಗಳು ಏಕೆ ಈ ನಿರ್ದಿಷ್ಟ ಬಣ್ಣದ ಕೋಟುಗಳನ್ನೇ ಧರಿಸುತ್ತಾರೆ ಎಂಬ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀರಾ. ಈ ಬಣ್ಣದ ಕೋಟ್ ಧರಿಸುವುದರ ಹಿಂದಿನ ಕಾರಣವನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು.

ವೈದ್ಯರು ಬಿಳಿ ಬಣ್ಣದ ಕೋಟು ಏಕೆ ಧರಿಸುತ್ತಾರೆ?

ವೈದ್ಯರು ಮತ್ತು ನರ್ಸ್ ಆಸ್ಪತ್ರೆಯಲ್ಲಿ ಬಿಳಿ ಕೋಟುಗಳನ್ನು ಧರಿಸುತ್ತಾರೆ. ಈ ಬಣ್ಣದ ಆಯ್ಕೆಯ ಹಿಂದಿನ ಕಾರಣವೇ ಇದೆ. ಈ ಬಿಳಿ ಬಣ್ಣವು ಶುದ್ಧತೆ, ಶುಚಿತ್ವ ಹಾಗೂ ನಂಬಿಕೆಯ ಸಂಕೇತವಾಗಿದೆ. ಇನ್ನು, 19 ನೇ ಶತಮಾನದ ಮೊದಲು, ವೈದ್ಯರು ಸಹ ಸಾಮಾನ್ಯ ಬಟ್ಟೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ವೈದ್ಯಕೀಯ ವಿಜ್ಞಾನವು ಮುಂದುವರೆದಂತೆ, ಸೋಂಕುಗಳು ಮತ್ತು ಶುಚಿತ್ವದ ಮಹತ್ವವನ್ನು ನೀಡುತ್ತಾ ಹೋದಂತೆ ಆಸ್ಪತ್ರೆ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಲಾಯಿತು. ಹೀಗಾಗಿ ಈ ಬಿಳಿ ಬಣ್ಣದ ಕೋಟ್ ವೃತ್ತಿಪರ ಗುರುತಾಗಿ ಮಾರ್ಪಟ್ಟಿತು.

ಹೊಟ್ಟೆ ಬಿಳಿಯ ಕೋಡು ಕಾಣಿಸಿಕೊಂಡಾಗ, ರೋಗಿಗಳ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಭದ್ರತೆಯ ಭಾವನೆಯೊಂದಿಗೆ ನಮ್ಮನ್ನು ವೈದ್ಯರು ಬೇಗನೆ ಗುಣಪಡಿಸುತ್ತಾರೆ ಎಂಬ ವಿಶ್ವಾಸವು ಮೂಡುತ್ತದೆ. ಬಿಳಿ ಬಣ್ಣ ಆರೋಗ್ಯ ಮತ್ತು ಶುದ್ಧತೆಯನ್ನು ಸೂಚಿಸುತ್ತದೆ. ರೋಗಿಗಳಿಗೆ ಸುರಕ್ಷಿತ ವಾತಾವರಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಭರವಸೆ ಇದೆ. ಈ ಬಿಳಿ ಬಣ್ಣದ ಕಲೆಗಳು ಸುಲಭವಾಗಿ ಗೋಚರಿಸುವ ಕಾರಣ, ಇದು ವೈದ್ಯರಿಗೆ ಮತ್ತು ನೈರ್ಮಲ್ಯವನ್ನು ನೆನಪಿಸುತ್ತದೆ. ಈ ಬಣ್ಣದ ಕೋಟುಗಳನ್ನು ಧರಿಸಿದ ಕೂಡಲೇ ವಿಶ್ವಾಸರ್ಹರಾಗಿ ಕಾಣಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಬಿಳಿ ಬಣ್ಣದ ಕೋಟನ್ನೇ ವೈದ್ಯರು ಧರಿಸುತ್ತಾರೆ.

ವಕೀಲರು ಕಪ್ಪು ಬಣ್ಣದ ಕೋಟು ಏಕೆ ಧರಿಸುತ್ತಾರೆ?

ನ್ಯಾಯಾಲಯದಲ್ಲಿ ವಕೀಲರು ಕಪ್ಪು ಬಣ್ಣದ ಕೋಟನ್ನು ಧರಿಸುವುದನ್ನು ನೀವು ನೋಡುತ್ತೀರಿ. ಇದರ ಇತಿಹಾಸದ ಬಗ್ಗೆ ತಿಳಿಯುವುದಾದರೆ 17 ನೇ ಶತಮಾನದಲ್ಲಿ ಬ್ರಿಟಿಷ್ ರಾಜ ಚಾರ್ಲ್ಸ್ II ರ ಮರಣದ ನಂತರ, ಅವರ ಸಾವಿಗೆ ಸಂತಾಪ ಸೂಚಿಸುವ ವಕೀಲರು ಮತ್ತು ನ್ಯಾಯಾಧೀಶರು ಕಪ್ಪು ಬಟ್ಟೆಗಳನ್ನು ಧರಿಸಿದ್ದರು. ಆ ಬಳಿಕ ಇದುವೇ ಸಂಪ್ರದಾಯವಾಗಿ ಮುಂದುವರೆಯಿತು.

ಇದನ್ನೂ ಓದಿ: ಈ ರೆಸ್ಟೋರೆಂಟ್‌ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು!

ಈ ಕಪ್ಪು ಬಣ್ಣವು ನ್ಯಾಯ, ಅಧಿಕಾರ ಮತ್ತು ಘನತೆಯ ಸಂಕೇತವಾಗಿದೆ. ವಕೀಲ ವೃತ್ತಿಯಲ್ಲಿ ಇರುವವರು ಕಪ್ಪು ಕೋಟು ಧರಿಸಿದಾಗ ಅವರ ಮುಖದಲ್ಲಿ ಗಂಭೀರತೆ ಹಾಗೂ ನಿಷ್ಪಕ್ಷಪಾತ ಎದ್ದು ಕಾಣುತ್ತದೆ. ಈ ಬಣ್ಣದಲ್ಲಿ ಕಲೆಗಳು ಗೋಚರಿಸುವುದಿಲ್ಲ. ಕಪ್ಪು ಬಣ್ಣದ ಕೋಟು ಧರಿಸಿದ ಕೂಡಲೇ ವಕೀಲರು ವೃತ್ತಿಪರವಾಗಿ ಕಾಣುವಂತೆ ಮಾಡುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *