‘ಕೈದಿ 2’, ‘ವಿಕ್ರಂ 2’, ‘ರೋಲೆಕ್ಸ್’ ಸಿನಿಮಾಗಳು ನಿಂತು ಹೋದವೆ?

‘ಕೈದಿ 2’, ‘ವಿಕ್ರಂ 2’, ‘ರೋಲೆಕ್ಸ್’ ಸಿನಿಮಾಗಳು ನಿಂತು ಹೋದವೆ?


ಲೋಕೇಶ್ ಕನಕರಾಜ್ (ಲೋಕೇಶ್ ಕಂಗರಾಜ್) ತಮಿಳಿನ ಸ್ಟಾರ್ ನಿರ್ದೇಶಕ. ಆದರೆ ಇತ್ತೀಚೆಗೆ ಅವರು ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳಿಂದ ಅವರ ಅಭಿಮಾನಿಗಳು ಇದ್ದಾರೆ, ತಮಿಳು ಚಿತ್ರರಂಗದ ಕೆಲ ಸ್ಟಾರ್ ನಟರ ಅಭಿಮಾನಿಗಳು ಸಹ ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಟೀಕೆ, ನಿಂದನೆಗೆ ಗುರಿಯಾಗುತ್ತಿದೆ. ‘ಕೈದಿ’, ‘ವಿಕ್ರಂ’ ಸಿನಿಮಾಗಳಿಂದ ಭಾರಿ ಜನಪ್ರಿಯತೆ ಪಡೆದ ಲೋಕೇಶ್ ಕನಕರಾಜ್, ಅದೇ ಕತೆಗಳನ್ನು ಮುಂದುವರೆಸಿ ಅವರು ಸೀಕ್ವೆಲ್ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಯಶಸ್ಸು ಸಿಗುತ್ತಲೇ ತಮಿಳು ಹೀರೋಗಳ ಕೈಬಿಟ್ಟು ಬಾಲಿವುಡ್ ನಟರು, ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಹಿಂದೆ ಹೋಗಿದ್ದಾರೆ. ಇದೇ ಕಾರಣಕ್ಕೆ ತಮಿಳು ಸಿನಿಮಾ ಪ್ರೇಮಿಗಳು ಲೋಕೇಶ್ ಅವರನ್ನು ಟೀಕಿಸುತ್ತಿದ್ದಾರೆ.

ಲೋಕೇಶ್ ಅವರು ಪ್ರಾರಂಭ ಮಾಡಿದ ‘ಎಲ್ ಸಿಯು’ (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ನಿಂತು ಹೋಗಿದೆ. ಲೋಕೇಶ್ ಅವರು ‘ಕೈದಿ 2’, ‘ವಿಕ್ರಂ 2’, ‘ರೋಲೆಕ್ಸ್’, ‘ಬೆಂಜ್’ ಸಿನಿಮಾಗಳನ್ನು ನಿರ್ದೇಶಿಸುವುದಿಲ್ಲ ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿದೆ. ಲೋಕೇಶ್ ಕನಗರಾಜ್ ಇತ್ತೀಚೆಗೆ ಸಿನಿಮಾ ಒಂದರಲ್ಲಿ ನಾಯಕನಾಗಿ ನಟಿಸಲು ಆರಂಭಿಸಿದ್ದು, ಲೋಕೇಶ್ ಅವರ ನಿರ್ದೇಶನದಿಂದಲೇ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಲೋಕೇಶ್ ಕನಗರಾಜ್, ‘ಸಿಯು’ ಎಂದು ನಾನು ಪ್ರಾರಂಭಿಸಿಲ್ಲ, ಕೆಲ ಅಭಿಮಾನಿಗಳು ನನ್ನ ಸಿನಿಮಾಗಳ ಕಥೆಗಳು ಒಂದಕ್ಕೊಂದು ಲಿಂಕ್ ಇದೆ ನೋಡಿ ‘ಎಲ್ ಸಿಯು’ ಎಂದು ಕರೆದರು, ನಾನು ಅದನ್ನು ಮುಂದುವರೆಸಿದೆ. ಇನ್ನು ಕೆಲವು ‘ಕೈದಿ 2’, ‘ವಿಕ್ರಂ 2’ ಇನ್ನೂ ಕೆಲವು ಎಲ್‌ಸಿಯು ಸಿನಿಮಾಗಳು ನಿಂತು ಹೋಗಿವೆ, ಲೋಕೇಶ್ ಅವರು ಆ ಸಿನಿಮಾಗಳನ್ನು ನಿರ್ದೇಶಿಸುವುದಿಲ್ಲ. ಆದರೆ ಅದು ಸುಳ್ಳು. ಖಂಡಿತ ನಾನು ಆ ಸಿನಿಮಾಗಳನ್ನು ನಿರ್ದೇಶಿಸುತ್ತೇನೆ. ‘ಕೈದಿ 2’, ‘ವಿಕ್ರಂ 2’, ರೋಲೆಕ್ಸ್ ಪಾತ್ರದ ಬಗ್ಗೆ ಒಂದು ಸ್ಟಾಂಡ್ ಅಲೋನ್ ಸಿನಿಮಾ ಮತ್ತು ಕಥೆಯ ಒಳಗೆ ಬರುವ ‘ಬೆಂಜ್’ ಸಿನಿಮಾವನ್ನು ನಾನು ನಿರ್ದೇಶಿಸುತ್ತೇನೆ. ಅದು ನನ್ನ ಆಯೋಗದ ಲೋಕೇಶ್.

ಇದನ್ನೂ ಓದಿ:’ಕೂಲಿ’ ಚಿತ್ರದ ನಿರ್ಮಾಪಕರಿಗೆ 5 ಕೋಟಿ ರೂ. ಉಳಿಸಿದ ನಿರ್ದೇಶಕ ಲೋಕೇಶ್ ಕನಕರಾಜ್

ಪ್ರಸ್ತುತ ಲೋಕೇಶ್ ಸಿನಿಮಾ ಒಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅದರ ಬಳಿಕ ಅಲ್ಲು ಅರ್ಜುನ್ ನಟಿಸಲಿರುವ ಹೊಸ ಸಿನಿಮಾವನ್ನು ಲೋಕೇಶ್ ನಿರ್ದೇಶನ ಮಾಡಲಿದ್ದಾರೆ. ಅದಾದ ಬಳಿಕ ಅಮೀರ್ ಖಾನ್ ನಟನೆಯ ಸೂಪರ್ ಹೀರೋ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಸಲಿಗೆ ಕತೆಯನ್ನು ಲೋಕೇಶ್ ಸೂರ್ಯಗಾಗಿ ಮಾಡಿದರು. ಆದರೆ ಈಗ ಆಮಿರ್ ಖಾನ್ ಅವರಿಗಾಗಿ ನಿರ್ದೇಶಿಸುತ್ತಿದ್ದಾರೆ. ಲೋಕೇಶ್ ಅವರು ಜನಪ್ರಿಯತೆ ಮತ್ತು ಹಣದ ಹಿಂದೆ ಹೋಗಿ ತಮಿಳಿನ ಸ್ಟಾರ್ ನಟರ ಕೈ ಬಿಡುತ್ತಿದ್ದಾರೆ ಎಂದು ಸಿನಿಮಾ ಪ್ರೇಮಿಗಳು ಟೀಕೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *