ಗಂಡನ ಅನುಮಾನದ ಭೂತಕ್ಕೆ ಬಲಿಯಾದ ಹೆಂಡ್ತಿ: ಪೊಲೀಸ್​​ ಮುಂದೆ ಪತ್ನಿಯ ಲವ್ವಿಡವ್ವಿ ಬಿಚ್ಚಿಟ್ಟ ಪತಿ

ಗಂಡನ ಅನುಮಾನದ ಭೂತಕ್ಕೆ ಬಲಿಯಾದ ಹೆಂಡ್ತಿ: ಪೊಲೀಸ್​​ ಮುಂದೆ ಪತ್ನಿಯ ಲವ್ವಿಡವ್ವಿ ಬಿಚ್ಚಿಟ್ಟ ಪತಿ


ಚಿತ್ರದುರ್ಗ, ಜನವರಿ 27: ಆ ಕುಟುಂಬಕ್ಕೆ ಪತ್ನಿಯೇ ಆಧಾರ ಸ್ತಂಭವಾಗಿದ್ದರು. ಕ್ಯಾನ್ಸರ್ ಪೀಡಿತ ಪತಿಯ ಜೊತೆಗೆ ಮನೆಯ ಜವಾಬ್ದಾರಿ ಕೂಡ ಹೊತ್ತಿದ್ದರು. ಆದರೆ ಪತಿಯ ತಲೆಗೆ ಹೊಕ್ಕ ಅನುಮಾನದ ಶಂಕೆಯೊಂದು ಪತ್ನಿಯ ಕೊಲೆ (ಕೊಲೆ) ಮಾಡಿದೆ. ಕೋಲಿನಿಂದ ತಲೆಗೆ ಹೊಡೆದು ಪತಿ (ಗಂಡ) ರವಿಕುಮಾರ್ ಪತ್ನಿ ಮಮತಾ(45)ರನ್ನು ಹತ್ಯೆಗೈದಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣಾ ಘಟನೆ ನಡೆದಿದೆ.

ನಡೆದದ್ದೇನು?

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇ ಎಮ್ಮಿಗನೂರು ಗ್ರಾಮ ಇಂದು ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿತ್ತು. ಬೆಳಗ್ಗೆ 6:30ರ ಸುಮಾರಿಗೆ ಮಮತಾ(45) ಹೆಣವಾಗಿದ್ದರು. ಮನೆಯಲ್ಲಿ ಯಾವುದೇ ಫೈಲ್ ಹುಡುಕುವ ವೇಳೆ ಏಣಿಯಿಂದ ಬಿದ್ದು ತೆಲೆಗೆ ಪೆಟ್ಟಾಗಿ, ರಕ್ತಸ್ರಾವದಿಂದ ಸಿರುಚೆಲ್ಲಿದ್ದಾರೆ ಎಂದು ಪತಿ ಕಥೆ ಕಟ್ಟಿದ್ದರು.

ಇದನ್ನೂ ಓದಿ: ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಂದ ರಕ್ಕಸ ಮಗ: ಕಾರಣ ಕೇಳಿದ್ರೆ ಎಂತವರಿಗೂ ಪಿತ್ತ ನೆತ್ತಿಗೇರುತ್ತೆ!

ಮನೆಯ ಜವಾಬ್ದಾರಿ ಹೊತ್ತಿದ್ದ ಮಮತಾ ಕ್ಯಾನ್ಸರ್‌ ಪೀಡಿತ ಪತಿ ರವಿಕುಮಾರ್‌ (52) ಅವರನ್ನು ಪೂರೈಸಿದ್ದಾರೆ. ಹೀಗಾಗಿ ಗ್ರಾಮಸ್ಥರು ಸಹಜವಾಗಿ ನಂಬಿದ್ದರು. ಜೊತೆಗೆ ಅನ್ಯೋನ್ಯವಾಗಿದ್ದರು ದಂಪತಿಗಳು ಗಲಾಟೆ ಮಾಡಿದ್ದು, ಯಾರೂ ಕಂಡಿರಲಿಲ್ಲ. ಆದರೆ ಸ್ಥಳಕ್ಕೆ ಬಂದು ತನಿಖೆ ನಡೆಸಿದಾಗ ಅಸಲಿಯತ್ತು ಬಯಲಾಗಿತ್ತು.

ಅಕ್ರಮ ಸಂಬಂಧ ಹತ್ಯೆ ಹಿನ್ನೆಲೆ

ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ ಪಿ ಪಿ. ದಿನಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಜಾಜೂರು ಆರೋಪಿ ರವಿಕುಮಾರ್ ನನ್ನನ್ನು ವಶಕ್ಕೆ ಪಡೆದು ವಿಚಾರಣೆ. ಮನೆಯ ಖರ್ಚು, ವೆಚ್ಚ, ಸಾಲ-ಸೋಲ ಮತ್ತು ಆಸ್ತಿ ಮಾರಾಟದ ಬಗ್ಗೆ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿತ್ತು. ಅದೇ ಕಾರಣಕ್ಕೆ ಮನೆಯಲ್ಲಿದ್ದ ಕೋಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಆರೋಪ ಕೇಳಿ ಬರುತ್ತಿದೆ. ಆದರೆ ಆರೋಪಿ ರವಿ ಪತ್ನಿಗೆ ಅಕ್ರಮ ಸಂಬಂಧವಿತ್ತು. ಹೀಗಾಗಿ, ಕೊಲೆ ಮಾಡಿದ್ದೇನೆಂದು ಪೊಲೀಸರೆದುರು ಒಪ್ಪಿಕೊಂಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ದೇವನಹಳ್ಳಿ: ಸಿಗರೇಟ್ ಸೇದಲು ಮ್ಯಾಚ್ ಬಾಕ್ಸ್ ಕೊಡದ್ದಕ್ಕೆ ಜೀವವೇ ಹೋಯ್ತು!

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಹಿರೇ ಎಮ್ಮಿಗನೂರು ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಂದು ಹಾಕಿದ ದಾರುಣ ಘಟನೆ ನಡೆದಿದೆ. ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸಂಪೂರ್ಣ ತನಿಖೆ ನಡೆಸಿ ಅಸಲಿಗೆ ಕೊಲೆಗೆ ಕಾರಣವೇನು ಎಂಬುದು ಪತ್ತೆ ಹಚ್ಚಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *