ಗಿಲ್ಲಿ ನಟ (ಗಿಲ್ಲಿ ನಾಟಾ), ಪ್ರಸ್ತುತ ರಾಜ್ಯದಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಹೆಸರು. ಬಿಗ್ಬಾಸ್ ವಿನ್ನರ್ ಆಗಿರುವ ಗಿಲ್ಲಿಗೆ ರಾಜ್ಯದ ಜನ ಭರಪೂರ ಪ್ರೀತಿ ಕೊಡುತ್ತಿದ್ದಾರೆ. ಗಿಲ್ಲಿ ಹೋದಲ್ಲೆಲ್ಲ ಜನ ಸಾಗರವೇ ಸೇರುತ್ತಿದೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ತಮ್ಮ ಹಾಸ್ಯ, ತಮ್ಮ ಮ್ಯಾನರಿಸಂ ಮುಂತಾದವುಗಳಿಂದ ಗಮನ ಸೆಳೆದಿದ್ದಾರೆ. ಈಗ ಗಿಲ್ಲಿ ಸೆಲೆಬ್ರಿಟಿ. ಗಿಲ್ಲಿ ವೇದಿಕೆ ಏರಿದರೆ ಜನ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದಾರೆ. ಆದರೆ ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಏನಾಗಿತ್ತು ಗೊತ್ತೆ? ಗಿಲ್ಲಿಯ ಗೆಳೆಯರು, ಗಿಲ್ಲಿಗೆ ಆರಂಭದ ಅವಕಾಶಗಳನ್ನು ನೀಡಿದ ಗುರು ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ.
ಗುರು ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ವೇದಿಕೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಗಿಲ್ಲಿಯ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಗುರು ಅವರು ಗಿಲ್ಲಿಗೆ ಕರೆ ಮಾಡಿ ವೇದಿಕೆ ಕಾರ್ಯಕ್ರಮ ನೀಡಲು ಕರೆದರಂತೆ. ಈ ಬಗ್ಗೆ ಗಿಲ್ಲಿ ಸಹ ಸಂದರ್ಶನದಲ್ಲಿ ಹೇಳಲಾಗಿದೆ. ಆದರೆ ಗಿಲ್ಲಿ ಮೊದಲ ಬಾರಿಗೆ ವೇದಿಕೆ ಏರಿದಾಗ ಬಹಳ ಭಯಗೊಂಡಿದ್ದರಂತೆ. ಬಹಳ ನರ್ವಸ್ ಆಗಿದ್ದರಂತೆ. ಗಿಲ್ಲಿಗೆ ಕೇವಲ ಐದು ನಿಮಿಷ ಸಹ ವೇದಿಕೆ ಮೇಲೆ ನಿಲ್ಲಲು ಆಗಲಿಲ್ಲ.
ಗಿಲ್ಲಿ ಮೊದಲ ಬಾರಿಗೆ ತನ್ನ ಯೂಟ್ಯೂಬ್ ವಿಡಿಯೋ ವೇಷದಲ್ಲಿಯೇ ವೇದಿಕೆ ಏರಿದ್ದರಂತೆ. ಭಯದಲ್ಲಿಯೇ ಮೊದಲ ಐದು ನಿಮಿಷ ಅದೂ ಇದೂ ತಮಾಷೆ ಡೈಲಾಗ್‌ಗಳನ್ನು ಹೇಳಿದ ಗಿಲ್ಲಿ, ನವರ್ಸ್ ಆಗಿ ವೇದಿಕೆ ಇಳಿದು ಬಿಟ್ಟರಂತೆ. ಆಗ ಗುರು ಅವರು ನೀವು ಕನಿಷ್ಟ 30 ನಿಮಿಷವಾದರೂ ಜನರನ್ನು ಎಂಗೇಜಿಂಗ್ ಆಗಿ ಇಡಬೇಕು, ಜನರನ್ನು ನಗಿಸಬೇಕು ಎಂದರಂತೆ. ಆ ಬಳಿಕ ಗಿಲ್ಲಿ, ತಯಾರಿ ಮಾಡಲು ಆರಂಭಿಸಿದರಂತೆ.
ಇದನ್ನೂ ಓದಿ:ಗಿಲ್ಲಿ ನಟನಿಗೆ ಬಿಗ್ ಬಾಸ್ ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ
ಗುರು ಹೇಳುವಂತೆ, ಗಿಲ್ಲಿಗೆ ಯಾರಾದರೂ ಯಾರಾದರೂ ಎದುರಿಗೆ ಇರಬೇಕು, ಯಾರಾದರೂ ಮಾತನಾಡಬೇಕಾದರೆ ಮೂರು ನಾಲ್ಕು ಗಂಟೆ ಮಾತನಾಡುತ್ತಾರೆ, ನಗುತ್ತಾರೆ ಆದರೆ ಒಬ್ಬರಿಗೇ ಮಾಡುವುದು ಅವರಿಗೆ ಕಷ್ಟ. ನಮ್ಮೊಂದಿಗೆ ಹಲವು ಜಿಲ್ಲೆಗಳಲ್ಲಿ ಪ್ರದರ್ಶನಗಳನ್ನು ಮಾಡಲಾಗಿದೆ. ನಮ್ಮೊಟ್ಟಿಗೆ ಇದ್ದಾಗಲೂ ಸಹ ಬೇರೆ ಬೇರೆ ಭಾಷೆಯ ಕಾಮಿಡಿ ವಿಡಿಯೋಗಳನ್ನು ನೋಡುವುದು ಅವುಗಳಿಂದ ಕಲಿಯುವುದು ಮಾಡುತ್ತಲೇ ಇರುತ್ತದೆ. ಮೊಬೈಲ್ ನಲ್ಲಿ ಸದಾ ಕಾಮಿಡಿ ವಿಡಿಯೋಗಳನ್ನು ನೋಡುತ್ತಾ ಪಂಚ್, ಡೈಲಾಗ್ ಡೆಲಿವರಿಗಳನ್ನು ಕಲಿಯುತ್ತಾ ಎಂದು ನೆನಪಿಸಿಕೊಂಡಿದ್ದಾರೆ ಗುರು.
ನಮ್ಮೊಟ್ಟಿಗೆ ಹಲವು ಜಿಲ್ಲೆಗಳಲ್ಲಿ ಗಿಲ್ಲಿ ಸುತ್ತಿದ್ದಾರೆ. ನಮಗಾಗಿ ಹಲವು ಶೋಗಳನ್ನು ಮಾಡಲಾಗಿದೆ. ಬಹಳ ಒಳ್ಳೆಯ ವ್ಯಕ್ತಿ, ಸಂಭಾವಿತ. ‘ಭರ್ಜರಿ ಬ್ಯಾಚುಲರ್’ ಬಳಿಕ ಗಿಲ್ಲಿ ಮತ್ತು ಗಗನಾ ಅವರನ್ನು ಹಲವಾರು ಶೋಗಳಿಗೆ ನಾವು ಕರೆದುಕೊಂಡು ಹೋಗಿದ್ದೇವೆ. ಅವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಆದರೆ ಹೋದಲ್ಲೆಲ್ಲ ಇವರ ಜೋಡಿಗಳಂತೆ ಬಿಂಬಿಸಲು ಪ್ರಾರಂಭಿಸಿದರು. ಅದು ಗಗನ ಅವರ ಮನೆಯವರಿಗೆ ಹಿಡಿಸಲಿಲ್ಲ. ಇದೆ ವಿಷಯಕ್ಕೆ ಇಬ್ಬರಿಗೂ ಸಣ್ಣ ಈಗೋ ಕ್ಲ್ಯಾಶ್ ಆಯ್ತು ಅನಿಸುತ್ತದೆ’ ಸಹ ಗುರು.
ಗುರು ಅವರು ಗಿಲ್ಲಿ ಮತ್ತು ಗಗನಾ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆಯನ್ನೂ ಹೊಂದಿದ್ದರಂತೆ. ಆದರೆ ಆಗ ಆಗಲಿಲ್ಲವಂತೆ. ಈಗ ಕಾವ್ಯ ಮತ್ತು ಗಿಲ್ಲಿಯನ್ನು ಹಾಕಿಕೊಂಡು ಸಿನಿಮಾ ಮಾಡುವ ಯೋಜನೆಯಾಗಿದೆ ಎಂದು ಸಹ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 4:54 pm, ಮಂಗಳವಾರ, 27 ಜನವರಿ 26