Headlines

ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ

ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ


ಚಾಮರಾಜನಗರ, ಜನವರಿ 27: ಆಪರೇಷನ್ ಟಿ2 ಆಲ್ಫಾ ಐದನೇ ಹಂತ ಯಶಸ್ವಿಯಾಗಿದೆ. 6 ಹುಲಿಗಳ ಮೇಲಕ್ಕೆ 5 ಹುಲಿ (ಹುಲಿಗಳು) ಸೆರೆ ಹಿಡಿದ, ಇನ್ನು ಕೇವಲ 1 ಹುಲಿ ಮಾತ್ರ ಬಾಕಿ ಇದೆ. ಥರ್ಮಲ್ ಡ್ರೋನ್ ಕ್ಯಾಮರಾ ಮೂಲಕ ಕೂಂಬಿಂಗ್ ನಡೆಸಿದ್ದ ಸಿಬ್ಬಂದಿ 10 ತಿಂಗಳ ಹೆಣ್ಣು ಹುಲಿ ಮರಿ ಸೆರೆ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮತ್ತೊಂದು ಹೆಣ್ಣು ಹುಲಿ ಮರಿ ಸೆರೆ

ಕಳೆದೊಂದು ತಿಂಗಳಿನಿಂದ ಬಿಟ್ಟು ಬಿಡದೆ ಮೂರ್ನಾಲ್ಕು ಗ್ರಾಮಸ್ಥರು ನಿದ್ದೆಗೆಡಿಸಿದ್ದ 5 ಹುಲಿಗಳ ಮೇಲೆ ಇಂದು ಮತ್ತೊಂದು ಹೆಣ್ಣು ಹುಲಿ ಮರಿ ಸೆರೆಯಾಗಿದೆ. ಆದರೆ ಈಗ ಸೆರೆ ಸಿಕ್ಕಿದ್ದು ಕೇವಲ 3 ಮರಿ ಮಾತ್ರ. ಇನ್ನು ಒಂದು ಮರಿ ಹುಲಿಗಳು ಸೆರೆಗಾಗಿ ಆಪರೇಷನ್ ಟಿ2 ಆಲ್ಫಾ ಚಾಲ್ತಿಯಲ್ಲಿದೆ. ನಾಳೆಯೂಳಿದ ಹುಲಿಗಾಗಿ ಶೋಧಕಾರ್ಯ ಮುಂದುವರೆಯಲಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ

ಸೆರೆ ಸಿಕ್ಕ ತಾಯಿ ಹುಲಿಗೆ ಹಾಗೂ 3 ಮರಿ ಹುಲಿಗಳಿಗೆ ಪಶು ವೈದ್ಯರಿಂದ ಅರವಳಿಕೆ ಮದ್ದು ನೀಡಿ ಅವರ ಆರೋಗ್ಯದ ಸ್ಥಿತಿಗತಿಯನ್ನ ಪರಿಶೀಲಿಸಲಾಗಿದೆ. ಮೈಸೂರು ಕೇಜ್‌ನಿಂದ ನಾರ್ಮಲ್ ಕೇಜ್‌ಗೆ ಹುಲಿಯನ್ ಸ್ಥಳಾಂತರಿಸಲಾಗಿದೆ. ಇನ್ನು ಸೆರೆ ಸಿಕ್ಕ ಹೆಣ್ಣು ಹುಲಿ ಮರಿಯ ಆರೋಗ್ಯ ತಪಾಸಣೆ ಮಾಡಿರುವ ಪಶು ವೈದ್ಯರೇ ಆಗಿದ್ದಾರೆ.

ಇನ್ನು ಅದೇ ಬೋನಿನಲ್ಲಿ ಹುಲಿಯನ್ನ ಇರಿಸಿ ಉಳಿದ ಒಂದು ಮರಿ ಹುಲಿಗಾಗಿ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ. ಥರ್ಮಲ್ ಡ್ರೋನ್ ಕ್ಯಾಮರಾ ತರೆಸಿಕೊಂಡಿರುವ ಅರಣ್ಯ ಸಿಬ್ಬಂದಿ ರಾತ್ರಿಯಿಡಿ 1 ಮರಿ ಹುಲಿಗಳಿಗಾಗಿ ಆಪರೇಷನ್ ಟಿ2 ಆಲ್ಫಾ ನಡೆಸಲಿದ್ದಾರೆ.

ಇದನ್ನೂ ಓದಿ: ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ, ಹೆಬ್ಬುಲಿ ಕಂಡು ಭೀತಿಯಲ್ಲಿ ಗ್ರಾಮಸ್ಥರು

ಅದೇನೆ ಹೇಳಿ ಸದ್ಯ ತಾಯಿ ಹುಲಿ ಸೇರಿ ಒಟ್ಟು 5 ಹುಲಿ ಕ್ಯಾಪ್ಚರ್ ಆಗಿದ್ದು ನಂಜೆದೇವನಪುರ ವೀರನಪುರ ಹಾಗೂ ಉಡೀಗಾಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು ಈ 1 ಹುಲಿ ಸೆರೆಗಾಗಿ ಶತಾಯಗತಾಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *