Headlines

Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು? ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್​

Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು?  ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್​

Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು?  ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್​

ಬಿಗ್​ಬಾಸ್​ ಸೀಸನ್​ 12ರ ಬಳಿಕವೂ ಗಿಲ್ಲಿ ನಟನ ಹವಾ ಮುಂದುವರೆದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿ,  ಬಟ್ಟೆಗಾಗಿ ಖರ್ಚು ಮಾಡಿರುವ ಲೆಕ್ಕಾಚಾರವನ್ನು ಗಿಲ್ಲಿ ನಟ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದು ಕೇಳಿ ಫ್ಯಾನ್ಸ್​ ಶಾಕ್​!

ಬಿಗ್​ಬಾಸ್​ ಸೀಸನ್​ 12 (Bigg Boss Season 12) ಮುಗಿದು ಕೆಲವು ದಿನಗಳು ಕಳೆದರೂ ಗಿಲ್ಲಿ ನಟನ ಮೇಲಿನ ಕ್ರೇಜ್​ ಹೆಚ್ಚುತ್ತಲೇ ಇದೆ. ಗಿಲ್ಲಿ ನಟ ಅವರಿಗೆ ಸಕತ್​ ಡಿಮಾಂಡ್​ ಇದ್ದು, ಇವರ ಹವಾ ಸೋಷಿಯಲ್​ ಮೀಡಿಯಾದಲ್ಲಿಯೂ ಹೆಚ್ಚುತ್ತಿದೆ.

ಸಾಮಾನ್ಯವಾಗಿ ಬಿಗ್​ಬಾಸ್​ಗೆ ಕರೆ ಬಂದರೆ, ಇದಾಗಲೇ ಬಹುತೇಕ ಎಲ್ಲಾ ಸ್ಪರ್ಧಿಗಳು ಹೇಳಿರುವಂತೆ ಕನಿಷ್ಠ ಏನಿಲ್ಲವೆಂದರೂ 2-3 ಲಕ್ಷ ಬರೀ ಬಟ್ಟೆಗೇ ಖರ್ಚು ಮಾಡಿದ್ದಾರೆ. ಇನ್ನು ಮೇಕಪ್​ ಸಾಮಗ್ರಿ ಅದೂ ಇದೂ ಎಂದೆಲ್ಲಾ ಮತ್ತೊಂದಿಷ್ಟು ಲಕ್ಷ ಖರ್ಚು ಮಾಡಿರುವುದು ಇದೆ.

ಇದೀಗ ಗಿಲ್ಲಿ ನಟ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ಬಿಗ್​ಬಾಸ್​ ಮನೆಗೆ ಹೋಗುವಾಗ ಅವರು ಎಷ್ಟು ಖರ್ಚು ಮಾಡಿದ್ದರು, ಎಷ್ಟು ಬೆಲೆ ಬಾಳುವ ಡ್ರೆಸ್​ ತೆಗೆದುಕೊಂಡು ಹೋಗಿದ್ದರು ಎನ್ನುವುದು. ಅವರ ಮಾತನ್ನು ಕೇಳಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

ಇದಕ್ಕೆ ಕಾರಣ, ಗಿಲ್ಲಿ ನಟ ಹೇಳಿದ್ದು, ನಾನು ಬಟ್ಟೆಗೆ ಅಬ್ಬಬ್ಬಾ ಎಂದರೆ 5 ರಿಂದ 10 ಸಾವಿರ ಖರ್ಚು ಮಾಡಿದ್ದೇನೆ. ನನ್ನ ಎಲ್ಲಾ ಖರ್ಚು ಸೇರಿ ಆಗಿದ್ದು ಇಷ್ಟೇ. ಬಿಗ್​ಬಾಸ್​ಗೆ ಹೋಗುವಾಗ ಮನೆಯಲ್ಲಿ ಒಂದು ವಾಷಿಂಗ್​ ಮಷಿನ್​ ಕೊಡಿಸಿ ಹೋಗಿದ್ದೆ. ಅದನ್ನು ಬಿಟ್ಟರೆ ಬಿಗ್​ಬಾಸ್​​ಗೆ ಹೋಗುವಾಗ ಆದ ಸಂಪೂರ್ಣ ಖರ್ಚು ಇಷ್ಟೇ ಎಂದಿದ್ದಾರೆ.

ವಾರಾಂತ್ಯದಲ್ಲಿ ನನಗೆ ಸ್ನೇಹಿತರೊಬ್ಬರು ಬಟ್ಟೆ ತಂದುಕೊಡುತ್ತಿದ್ದರು. ಇದನ್ನು ನೋಡಿ ನನಗೆ ಶಾಕ್​ ಆಗಿ ಹೋಗಿತ್ತು. ದುಬಾರಿ ಬಟ್ಟೆ ತಂದುಕೊಟ್ಟರೆ, ಹೊರಗಡೆ ಬಂದು ಆ ಹಣವನ್ನು ತೀರಿಸೋದು ಹೇಗೆ, ಸಿಕ್ಕಾಪಟ್ಟೆ ಸಾಲ ಮಾಡಿಬಿಟ್ಟರೆ ನನ್ನ ಕಥೆ ಏನು ಎಂದೆಲ್ಲಾ ಎನ್ನಿಸುತ್ತಿತ್ತು ಎಂದು ಗಿಲ್ಲಿ ನಟ ಹೇಳಿದ್ದಾರೆ.

ಈ ಮೂಲಕ ಆಡಂಬರ, ಶ್ರೀಮಂತಿಕೆ, ತೋರಿಕೆ, ಬೆಲೆ ಬಾಳುವ ಬಟ್ಟೆ ಬರೆಗಳು, ಕೆಜಿಗಟ್ಟಲೆ ಮೇಕಪ್​ಗಳು, ಅರೆಬರೆ ಡ್ರೆಸ್​ ಯಾವುದಕ್ಕೂ ಅರ್ಹತೆಯ ಮುಂದೆ ಬೆಲೆ ಇಲ್ಲ. ಇವೆಲ್ಲವೂ ಅರ್ಹತೆಗೆ ತಲೆಬಾಗಲೇ ಬೇಕು ಎನ್ನೋದನ್ನು ಗಿಲ್ಲಿ ತೋರಿಸಿಕೊಟ್ಟಿದ್ದಾರೆ. ಅದೇ ರೀತಿ ರಕ್ಷಿತಾ ಶೆಟ್ಟಿ ಕೂಡ ಹೆಚ್ಚು ಆಡಂಬರವಿಲ್ಲದೇ ಮೊದಲ ರನ್ನರ್​ ಅಪ್​ ಆಗಿ ಮಿಂಚಿದ್ದಾರೆ.

Source link

Leave a Reply

Your email address will not be published. Required fields are marked *