Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 28ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 28ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 28ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ತಮಾಷೆಗೆ ಎಂದು ಪ್ರಾರಂಭಿಸಿದ ಮಾತು ಹೊಸ ವ್ಯವಹಾರವನ್ನೋ ವ್ಯಾಪಾರವನ್ನೋ ಆರಂಭಿಸುವ ಮಟ್ಟಕ್ಕೆ ಒಯ್ಯಲಿದೆ. ನಿಮ್ಮ ಗುಣ ಸ್ವಭಾವಕ್ಕೆ ಶಿಸ್ತಿನ ಚೌಕಟ್ಟು ಹಾಕಲು ಮುಂದಾಗಿದೆ. ಹಿಂದೆಲ್ಲ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಒಪ್ಪಿಕೊಂಡು ಬಿಡುತ್ತಿದ್ದ ಕೆಲಸ- ಕಾರ್ಯಗಳಂಥ ಸುಳಿಗೆ ಇನ್ನು ಮುಂದೆ ಸಿಕ್ಕಿಹಾಕಿಕೊಳ್ಳಬಾರದು ಎಂಬ ದೃಢವಾದ ನಿಶ್ಚಯ ಮಾಡುತ್ತೀರಿ. ಆದಾಯದಲ್ಲಿ ಏರಿಕೆಯಾಗಲು ದೊರೆಯುವ ಅವಕಾಶಗಳು ಯಾವುದಕ್ಕೆ ಆಯ್ಕೆ ಮಾಡಿಕೊಳ್ಳಲು ನಿಮಗೆ ಸ್ಪಷ್ಟತೆ ತುಂಬ ಮುಖ್ಯ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಹೆಚ್ಚಿನ ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳಲು ಹೋಗಬೇಡಿ. ನಿಮ್ಮ ಮನವೊಲಿಸಲು ಕೆಲವು ಸ್ನೇಹಿತರು ನೀಡುವ ಕಾರಣಗಳನ್ನು ವಿಶ್ಲೇಷಣೆ ಮಾಡದೆ ಒಪ್ಪಿಕೊಂಡು ಬಿಟ್ಟರೆ ಆ ನಂತರ ಪರಿತಪಿಸುವಂತೆ ಆಗಲಿದೆ. ದಂಪತಿಗಳು ಹಣಕಾಸಿನ ವಿಚಾರಕ್ಕೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಿಲ್ಲದ ಸ್ಥಳಕ್ಕೆ ಯಾರದೋ ಬಲವಂತಕ್ಕೆ ತೆರಳಿ, ಅಲ್ಲಿ ಅವಮಾನ ಪಡುವಂತೆ ಆಗಲಿದೆ. ಕೆಲವು ಕೆಲಸ- ಕಾರ್ಯಗಳು ನಿಧಾನವಾಗಿಯಾದರೂ ಪರವಾಗಿಲ್ಲ, ಆತುರ ಮಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ಮೂಡುವ ಅಸಮಾಧಾನದಿಂದ ಆಚೆ ಬರುವುದಕ್ಕೆ ನಾನಾ ಪ್ರಯತ್ನಗಳನ್ನು ಮಾಡಿದೆ. ನಿಮಗೆ ಬರಬೇಕಾದ ಹಣಕ್ಕೆ ಏನಾದರೊಂದು ಕಾರಣ ಒಡ್ಡಿ, ಅಡ್ಡಗಾಲು ಹಾಕಿದವರು ಯಾರು ಎಂಬ ಮಾಹಿತಿ ದೊರೆಯಲಿದೆ. ಕೆಲವು ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ನಿಮ್ಮ ಮಾತಿನ ಮೂಲಕ ಕೆಲವು ಕೆಲಸ- ಕಾರ್ಯ ಮಾಡಿಸಿಕೊಳ್ಳಲಾಗಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *