ಟಿ20 ನಿಂದ ಪಾಕಿಸ್ತಾನ ತಂಡವು ಹೊರಗುಳಿದರೆ ಬಾಂಗ್ಲಾದೇಶ ತಂಡಕ್ಕೆ ಚಾನ್ಸ್ ಸಿಗಲಿದೆ. ಇಂತಹದೊಂದು ಟ್ವಿಸ್ಟ್ ನೀಡಲು ಐಸಿಸಿ ಮುಂದಾಗಿದೆ. ಬಾಂಗ್ಲಾದೇಶ ತಂಡವನ್ನು ಟಿ20 ನಿಂದ ಹೊರಗಿಟ್ಟಿರುವುದನ್ನು ಖಂಡಿಸಿ ಪಾಕಿಸ್ತಾನ್ ತಂಡವು ಮುಂಬರುವ ಆವೃತ್ತಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ಒಂದು ವೇಳೆ ಪಾಕಿಸ್ತಾನ ತಂಡವು ಟಿ20 ನಿಂದ ಹೊರಗುಳಿದರೆ ಬಾಂಗ್ಲಾದೇಶ ತಂಡಕ್ಕೆ ಮತ್ತೆ ಅವಕಾಶ ನೀಡಲು ಮುಂದಾಗಿದೆ. ಏಕೆಂದರೆ ಪಾಕಿಸ್ತಾನದ ಪಂದ್ಯಗಳು ನಡೆಯಬೇಕಿರುವುದು ಶ್ರೀಲಂಕಾದಲ್ಲಿ. ಅತ್ತ ಬಾಂಗ್ಲಾದೇಶ ತಂಡದ ಬೇಡಿಕೆ ಕೂಡ ಪಂದ್ಯಗಳ ಸ್ಥಳಾಂತರ. ಹೀಗಾಗಿ ಪಾಕ್ ತಂಡ ಹೊರಗುಳಿದರೆ ಐಸಿಸಿ ಬಾಂಗ್ಲಾದೇಶ ತಂಡಕ್ಕೆ ಮತ್ತೊಮ್ಮೆ ಅವಕಾಶ ನೀಡುವುದು ಖಚಿತವಾಗಿದೆ.
ಬಾಂಗ್ಲಾದೇಶ ಹೊರಬಿದ್ದಿದ್ದೇಕೆ?
ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಟಿ20 ಪಂದ್ಯಗಳನ್ನು ಭಾರತದಲ್ಲಿ ನೋಡಲು ಬಾಂಗ್ಲಾದೇಶ ನಿರಾಕರಿಸಿದೆ. ಜೊತೆಗೆ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಐಸಿಸಿಗೆ ಬೇಡಿಕೆಯಿಟ್ಟಿತ್ತು. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.
ಅಷ್ಟೇ ಅಲ್ಲದೆ ಭಾರತದಲ್ಲೇ ಆಡುವಂತೆ ಸೂಚಿಸಿದೆ. ಈ ಸೂಚನೆ ಭಾರತದಲ್ಲಿ ಟಿ20 ನೋಡಲು ಬಾಂಗ್ಲಾದೇಶ ಹಿಂದೇಟು ಹಾಕಿದೆ. ಹೀಗಾಗಿ ಬಾಂಗ್ಲಾದೇಶ್ ತಂಡವನ್ನು ಟಿ20 ನಿಂದ ಕೈ ಬಿಟ್ಟು ಅವರ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ.
ಪಾಕಿಸ್ತಾನ್ ನಡೆಯೇನು?
ಬಾಂಗ್ಲಾದೇಶ ತಂಡವನ್ನು ಟಿ20 ನಿಂದ ಹೊರಗಿಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅನ್ನು ಖಂಡಿಸಲಾಗಿದೆ. ಅಷ್ಟೇ ಅಲ್ಲದೆ ಬಾಂಗ್ಲಾಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಟಿ20 ನಿಂದ ಹೊರಗುಳಿಯುವ ಬೆದರಿಕೆಯೊಡ್ಡಿದೆ. ಈ ಬೆದರಿಕೆ ಬೆನ್ನಲ್ಲೇ ಐಸಿಸಿ, ಪಾಕ್ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ರವಾನಿಸಿದೆ.
ಟಿ20 ನಿಂದ ಹಿಂದೆ ಸರಿದ ಪಾಕ್ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್ನ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ ಐಸಿಸಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ಗೆ ಎಚ್ಚರಿಕೆ ನೀಡಿದೆ. ಇದಾಗ್ಯೂ ಪಿಸಿಬಿ ಭಂಡ ಡೈರ್ಯ ಪ್ರದರ್ಶಿಸಲು ಮುಂದಾಗುತ್ತಿದೆ.
ಮುಂಬರುವ TI2CB0 ಅಂದರೆ ನಲ್ಲಿ ಭಾಗವಹಿಸುವುದರ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಹೀಗಾಗಿಯೇ ಪಾಕ್ಗೆ ಬಿಸಿ ಮುಟ್ಟಿಸಲು ಐಸಿಸಿ ಮತ್ತೊಂದು ಪ್ಲ್ಯಾನ್ ರೂಪಿಸಿದೆ.
ಪಾಕ್ ಬದಲಿಗೆ ಬಾಂಗ್ಲಾ:
ಒಂದು ವೇಳೆ ಪಾಕಿಸ್ತಾನ್ ತಂಡವು ಟಿ20 ನಿಂದ ಹೊರಗುಳಿದರೆ, ಪಾಕ್ ತಂಡದ ಸ್ಥಾನದಲ್ಲಿ ಬಾಂಗ್ಲಾದೇಶ ತಂಡವನ್ನು ಕಣಕ್ಕಿಳಿಸಲು ಐಸಿಸಿ ಯೋಜನೆ ರೂಪಿಸಿದೆ. ಇಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಅಂದರೆ ಬೋರ್ಡ್ನ ಬೇಡಿಕೆ ಇರುವುದು ತನ್ನ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರ ಮಾಡಬೇಕೆಂಬುದು.
ಅತ್ತ ಪಾಕಿಸ್ತಾನದ ಎಲ್ಲಾ ಪಂದ್ಯಗಳು ನಡೆಯಲಿರುವುದು ಶ್ರೀಲಂಕಾದಲ್ಲಿ. ಹೀಗಾಗಿ ಪಾಕ್ ತಂಡ ಹೊರಗುಳಿದರೆ ಬಾಂಗ್ಲಾದೇಶ ತಂಡವನ್ನು ಗ್ರೂಪ್-ಎ ಗೆ ಆಯ್ಕೆ ಮಾಡುವ ಮೂಲಕ ಶ್ರೀಲಂಕಾದಲ್ಲಿ ಕಣಕ್ಕಿಳಿಯಲು ಬಿಡುಗಡೆ ಮಾಡಲು ಐಸಿಸಿ ನಿರ್ಧರಿಸಿದೆ.
ಐಸಿಸಿಯ ಈ ಮಾಸ್ಟರ್ ಸ್ಟ್ರೋಕ್ ನಿಂದ ಕಂಗೆಟ್ಟಿರುವುದು ಪಾಕಿಸ್ತಾನ್. ಏಕೆಂದರೆ ಪಾಕಿಸ್ತಾನ್ ಟಿ20 ನಿಂದ ಹೊರಗುಳಿಯಲು ನಿರ್ಧರಿಸಿರುವುದು ಬಾಂಗ್ಲಾದೇಶಕ್ಕೆ ಬೆಂಬಲವಾಗಿದೆ. ಈ ಬೆಂಬಲದೊಂದಿಗೆ ಪಾಕಿಸ್ತಾನ್ ಟಿ20 ನಿಂದ ಹೊರಗುಳಿದರೆ, ಅದೇ ಸ್ಥಾನದಲ್ಲಿ ಬಾಂಗ್ಲಾದೇಶ ತಂಡವನ್ನು ಕಣಕ್ಕಿಳಿಸಲು ಐಸಿಸಿ ಪ್ಲ್ಯಾನ್ ರೂಪಿಸಿದೆ.
ಇದನ್ನೂ ಓದಿ: 6,6,6,6,6,6,6,6,6: ಶರವೇಗದ ಶತಕಗಳೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್
ಹೀಗಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಪಾಕಿಸ್ತಾನ್ ಟಿ20 ನಿಂದ ಹೊರಗುಳಿದರೂ, ಆ ಸ್ಥಾನದಲ್ಲಿ ಬಾಂಗ್ಲಾದೇಶ್ ಕಣಕ್ಕಿಳಿಯುವುದಿಲ್ಲ ಎನ್ನಲು ಸಾಧ್ಯವಿಲ್ಲ. ಇಲ್ಲಿ ಪಾಕ್ ನೀಡಿದ ಬೆಂಬಲಕ್ಕಿಂತ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ಗೊಡ್ಡು ಬೆದರಿಕೆಯನ್ನು ಬದಲಿಸುವ ಸಾಧ್ಯತೆಯಿದೆ.