Headlines

ಜಾತ್ರೆಯ ರಥಕ್ಕೇ ಹೋಗಿ ಡಿಕ್ಕಿ ಹೊಡೆಯಿತು ಎತ್ತಿನಗಾಡಿ! ಇಬ್ಬರ ಸ್ಥಿತಿ ಗಂಭೀರ

ಜಾತ್ರೆಯ ರಥಕ್ಕೇ ಹೋಗಿ ಡಿಕ್ಕಿ ಹೊಡೆಯಿತು ಎತ್ತಿನಗಾಡಿ! ಇಬ್ಬರ ಸ್ಥಿತಿ ಗಂಭೀರ


ಚಿಕ್ಕಮಗಳೂರು, ಜನವರಿ 28: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದ ಅಂತರಘಟ್ಟಮ್ಮನ ಜಾತ್ರೆಯಲ್ಲಿ ಸಾಲುಸಾಲು ಅವಘಡಗಳು ಸಂಭವಿಸಿವೆ. ರಥೋತ್ಸವದ ನಂತರ ನಡೆಯುವ ಪಾನಕದ ಎತ್ತಿನ ಗಾಡಿಗಳ ಓಟದ ವೇಳೆ ನಿಯಂತ್ರಣ ತಪ್ಪಿದ ಎತ್ತಿನಗಾಡಿಗಳು ಜನರ ನಡುವೆ ನುಗ್ಗಿದವು. ಈ ವೇಳೆ ರಥಕ್ಕೆ ಡಿಕ್ಕಿಹೊಡೆಯುವುದಲ್ಲದೇ ಅಡ್ಡ ಬಂದ ವ್ಯಕ್ತಿಯೂ ಎತ್ತಿನಗಾಡಿ ಡಿಕ್ಕಿ ಹೊಡೆದಿದ್ದು, ಮತ್ತೊಬ್ಬ ವ್ಯಕ್ತಿ ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿ ಅಪಾಯ ಎದುರಿಸುವಂತಾಗಿದೆ. ಬೀರೂರು ನಿವಾಸಿ ಚಂದ್ರಶೇಖರ್ (50) ಅವರಿಗೆ ಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದರೆ, ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *