ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಿನಿ ಹರಾಜಿಗಾಗಿ ಬರೋಬ್ಬರಿ 1390 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದರು. ಈ 1390 ಆಟಗಾರರಲ್ಲಿ ಹರಾಜಿಗೆ ಆಯ್ಕೆ ಕೇವಲ 359 ಆಟಗಾರರು ಮಾತ್ರ. ಇವರಲ್ಲಿ 77 ಆಟಗಾರರನ್ನು ಮಾತ್ರ ಖರೀದಿಸಲಾಗಿದೆ. ಅಂದರೆ ಬರೋಬ್ಬರಿ 1313 ಆಟಗಾರರು ಅವಕಾಶ ವಂಚಿತರಾಗಿದ್ದರು. ಇದೀಗ ಅವಕಾಶ ವಂಚಿತ ಆಟಗಾರರ ಪಟ್ಟಿಯನ್ನು ಬಿಸಿಸಿ ಪ್ರಕಟಿಸಿದೆ. ಅದು ಕೂಡ RAPP ಪಟ್ಟಿಯಲ್ಲಿ ಎಂಬುದು ವಿಶೇಷ.
ಏನಿದು RAPP ಪಟ್ಟಿ?
RAPP ಪಟ್ಟಿ ಎಂದರೆ ರಿಜಿಸ್ಟರ್ ಅವೇಲೇಬಲ್ ಪ್ಲೇಯರ್ ಪೂಲ್ (RAPP). ಐಪಿಎಲ್ಗಾಗಿ ನೋಂದಾಯಿತ ಪ್ರಸಿದ್ಧ ಆಟಗಾರರ ಪಟ್ಟಿ. ಬದಲಿ ಆಟಗಾರರ ಆಯ್ಕೆಗಾಗಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಅಂದರೆ ಯಾವುದಾದರೂ ಆಟಗಾರರು ಐಪಿಎಲ್ ನಿಂದ ಹೊರಗುಳಿದರೆ, RAPP ಪಟ್ಟಿಯಲ್ಲಿರುವ ಆಟಗಾರರನ್ನೇ ಆಯ್ಕೆ ಮಾಡಲಾಗುತ್ತದೆ. ಜೊತೆಗೆ ಅವರು ಹರಾಜಿಗಾಗಿ ನೊಂದಾಯಿಸಿರುವ ಮೂಲ ಬೆಲೆಗಿಂತ ಕಡಿಮೆ ಬೆಲೆಗೆ ನೀಡಲಾಗಿದೆ.
ಅದರಂತೆ ಇದೀಗ 1307 ಆಟಗಾರರ ಹೆಸರನ್ನು ಹೊಂದಿರುವ RAPP ಪಟ್ಟಿಯನ್ನು ಬಿಸಿಮಾಡಲು ಸಿದ್ಧಪಡಿಸಲಾಗಿದೆ. ಹೀಗಾಗಿ ಈ ಪಟ್ಟಿಯಲ್ಲಿರುವ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
RAPP ಪಟ್ಟಿ ನಿಯಮಗಳು:
- ಫ್ರಾಂಚೈಸಿಗಳು ಈ ನಿರ್ದಿಷ್ಟ ಪೂಲ್ನಿಂದ ಬದಲಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಉದಾಹರಣೆಗೆ, ತಂಡದ ಸದಸ್ಯರಿಗೆ ಬದಲಾಗಿ RAPP ಪಟ್ಟಿಯಲ್ಲಿರುವ ಆಟಗಾರರನ್ನು ಆಯ್ಕೆ ಮಾಡಬೇಕು.
- ಒಬ್ಬ ಆಟಗಾರನನ್ನು ಅವರ ಮೂಲ ಹರಾಜಿನ ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಸಹಿ ಮಾಡಿದೆ. ಉದಾಹರಣೆಗೆ, ಸ್ಟೀವ್ ಸ್ಮಿತ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಲಾಗಿದೆ. ಅವರನ್ನು ಅದಕ್ಕಿಂತ ಕಡಿಮೆ ಮೊತ್ತಕ್ಕೆ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
- RAPP ಪಟ್ಟಿಯಲ್ಲಿರುವ ಆಟಗಾರರನ್ನು ನೆಟ್ ಬೌಲರ್ಗಳಾಗಿ ನೇಮಿಸಿಕೊಳ್ಳಬಹುದು. ಆದರೆ ಬೇರೆ ಯಾವುದಾದರೂ ಫ್ರಾಂಚೈಸಿ ಆ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಲು ತಕ್ಷಣವೇ ಬಿಡುಗಡೆಗೊಳಿಸಲಾಗುತ್ತದೆ.
RAPP ಲಿಸ್ಟ್ನಲ್ಲಿ ಸ್ಥಾನ ಪಡೆದಿರುವ ಪ್ರಮುಖ ಆಟಗಾರರು:
- 2 ಕೋಟಿ ರೂ. ಮೂಲ ಬೆಲೆ: ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ಡೆವೊನ್ ಕಾನ್ವೆ (ನ್ಯೂಝಿಲೆಂಡ್), ಜೇಕ್ ಫ್ರೇಸರ್-ಮೆಕ್ಗುರ್ಕ್ (ಆಸ್ಟ್ರೇಲಿಯಾ), ರೀಸ್ ಟೋಪ್ಲಿ (ಇಂಗ್ಲೆಂಡ್), ಮತ್ತು ಜೇಮೀ ಸ್ಮಿತ್ (ಇಂಗ್ಲೆಂಡ್).
- 1.5 ಕೋಟಿ ರೂ. ಮೂಲ ಬೆಲೆ: ರಹಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಮತ್ತು ಟಿಮ್ ಸೈಫರ್ಟ್ (ನ್ಯೂಝಿಲೆಂಡ್).
- 1 ಕೋಟಿ ರೂ. ಮೂಲ ಬೆಲೆ: ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್), ಫಝಲ್ಹಕ್ ಫಾರೂಕಿ (ಅಫ್ಘಾನಿಸ್ತಾನ್).
ಇದನ್ನೂ ಓದಿ: 6,6,6,6,6,6,6,6,6: ಶರವೇಗದ ಶತಕಗಳೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್
RAPP ಪಟ್ಟಿಯಲ್ಲಿರುವ ಭಾರತದ ಪ್ರಮುಖ ಆಟಗಾರರು:
- ಉಮೇಶ್ ಯಾದವ್ , ನವದೀಪ್ ಸೈನಿ , ಚೇತನ್ ಸಕರಿಯಾ, ಸಂದೀಪ್ ವಾರಿಯರ್ , ಮಾಯಾಂಕ್ ಅಗರ್ವಾಲ್ , ದೀಪಕ್ ಹೂಡಾ , ಕೆ.ಎಸ್. ಭರತ್, ಯಶ್ ಧುಲ್, ಅಭಿನವ್ ಮನೋಹರ್, ಅಥರ್ವ ಟೈಡೆ, ಮನನ್ ವೋಹ್ರಾ, ಮಹಿಪಾಲ್ ಲೋಮ್ರೋರ್, ಕಮಲೇಶ್ ನಾಗರಕೋಟಿ ಮತ್ತು ರಾಜವರ್ಧನ್ ಹಂಗರ್ಗೇಕರ್.