ಕರ್ನಾಟಕ ಸಾರಿಗೆ ನೌಕರರಿಂದ ಜ. 29ರಂದು ‘ಬೆಂಗಳೂರು ಚಲೋ’: ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್​​!

ಕರ್ನಾಟಕ ಸಾರಿಗೆ ನೌಕರರಿಂದ ಜ. 29ರಂದು ‘ಬೆಂಗಳೂರು ಚಲೋ’: ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್​​!


ಸಾರಿಗೆ ನೌಕರರಿಂದ ‘ಬೆಂಗಳೂರು ಚಲೋಗೆ ಕರೆ

ಬೆಂಗಳೂರು, ಜನವರಿ 28: ವಿವಿಧ ಬೇಡಿಕೆಗಳಿಗೆ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಡಿಡೆದ್ದಿದ್ದು, ನಾಳೆ ‘ಬೆಂಗಳೂರು ಚಲೋ’ಗೆ ಕರೆ ನೀಡಿದರು. ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ, ಕಳೆದ ವರ್ಷ ಆಗಸ್ಟ್ 5 ರಂದು ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆದರೆ ಈ ವರ್ಷದ ಆರಂಭದಲ್ಲೇ ಬೆಂಗಳೂರು ಚಲೋಗೆ ಕರೆ ನೀಡಿದರು. ನಾಲ್ಕೂ ನಿಗಮಗಳ ವತಿಯಿಂದ ಪ್ರತಿಭಟನೆ.

ಬೇಡಿಕೆ ಇದ್ದರೆ ಮುಷ್ಕರಕ್ಕೆ ಸಿದ್ಧತೆ

ನಾಳೆ ಸಂಜೆ 4 ಗಂಟೆಯೊಳಗೆ ಸಾರಿಗೆ ನೌಕರರ ಬೇಡಿಕೆಯಿಲ್ಲ ಅಂದರೆ, ಸುದ್ದಿಗೋಷ್ಟಿ ಕರೆದು ಮುಷ್ಕರಕ್ಕೆ ಕರೆ ಮಾಡಲಾಗಿತ್ತು. ಇದಕ್ಕೆ ಬೇಕಾಗಿರುವ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಿದೆ. ಮತ್ತೊಂದೆಡೆ ನೌಕರರಿಗೆ ಕೆಎಸ್ ಆರ್ ಟಿಸಿ ಶಾಕ್ ಕೊಟ್ಟಿದ್ದು, ಸಾರಿಗೆ ಮುಷ್ಕರ ಹೂಡಿದ್ದಾರೆ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸಲಾಗಿದೆ. ಗುರುವಾರ ಡ್ಯೂಟಿಗೆ ಬಂದಿಲ್ಲ ಅಂದರೆ ‘ನೋ ವರ್ಕ್ ನೋ ಪೇ’ ಎಂದು ಅಕ್ರಂ ಪಾಷಾ ಎಂಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಜ.29ರಂದು ಬೆಂಗಳೂರು ಚಲೋ ಕೈಗೊಂಡ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ ಕೆ.ಎಸ್.ಆರ್.ಟಿ.ಸಿ

01-01-2020 ರಿಂದ 28-02-2023ರ ವೇತನ 38 ತಿಂಗಳ ಪರಿಷ್ಕರಣೆಯ ಹಿಂಬಾಕಿ ಹಾಗೂ 01.01.2024 ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಜಂಟಿ ಕ್ರಿಯಾ ಸಮಿತಿಯು ಜನವರಿ 29 ರಂದು ಗುರುವಾರ ಬೆಂಗಳೂರು ಚಲೋಗೆ ಕರೆ ನೀಡಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಇಲಾಖೆ ಮುಂಜಾಗ್ರತೆ ವಹಿಸಿದೆ. ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು ಎಂದು ಅಧಿಕಾರಿಗಳಿಗೆ ಎಂಡಿ ಖಡಕ್ ಸೂಚನೆ ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 11:57 am, ಬುಧವಾರ, 28 ಜನವರಿ 26



Source link

Leave a Reply

Your email address will not be published. Required fields are marked *