ಬೆಂಗಳೂರು, ಜನವರಿ 28: ಅಪರೂಪದ ಪ್ರಸಂಗವೊಂದಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ನಡೆದ ಕಳ್ಳತನ ಪ್ರಕರಣ ಸಂಬಂಧ ಅಮೇರಿಕಾ ರಾಯಭಾರ ಕಚೇರಿ ಮಧ್ಯಪ್ರವೇಶ ಮಾಡಿದ್ದು, ಎಂಬಸಿಯಿಂದಲೇ ನೇರವಾಗಿ ಡಿಜಿ, ಐಜಿಪಿಗೆ ದೂರು ಬಂದಿದೆ. ಅಮೆರಿಕಾ ಮೂಲದ ದಂಪತಿಗಳು ಕೆಲಸ ಮಾಡುತ್ತಿದ್ದಾರೆ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಕೆಲಸಗಾರನೋರ್ವ ಮನೆಯಲ್ಲಿ ಕಳ್ಳತನ ನಡೆಸಿದ್ದು,ಈ ಬಗ್ಗೆ ರಾಯಭಾರ ಕಚೇರಿಗೆ ದೂರು ನೀಡಿದ್ದರು.
ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದ ಪತ್ನಿ ಮೆರಿಯಲ್ ಮೊರೆನೊ, ಪತಿ ಟೊಮ್ಮೋ ಕಂಕನಿಯನ್ ಅಮೆರಿಕದ ಟೆಕ್ಸಸ್ ಮೂಲದವರು. ಪತಿ ಅಮೆರಿಕಾಗೆ ಹೋದ್ರೆ, ಪತ್ನಿ ಕೆಲಸಕ್ಕೆ ತೆರಳಿದ್ದರು. ಕಳೆದ ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂಬಾತ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಸೇರಿ 600 ಅಮೆರಿಕನ್ ಡಾಲರ್ ಕದ್ದಿದ್ದ. ಜ.21ರಂದು ಘಟನೆ ನಡೆದಿದ್ದು, ಮಹಿಳೆ ಮನೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿತ್ತು. ವಿಷಯವನ್ನು ಪತ್ನಿ ಮೆರಿಯಲ್ ಮೊರೆನೋ ಪತಿಯ ಗಮನಕ್ಕೆ ತಂದಿದ್ದು, ಅಮೆರಿಕಾದಲ್ಲಿದ್ದ ಪತಿ ರಾಯಭಾರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಜೀವನ್ ಭೀಮಾನಗರ ಠಾಣಾ ಕೃತ್ಯ ನಡೆದಿದ್ದ ಕಳ್ಳತನ ಸಂಬಂಧ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಕಳ್ಳತನ ಮಾಡಿದ್ದ ವಸ್ತುಗಳನ್ನು ಆತನಿಂದ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ವಂಚನೆ! ಮಾಜಿ ಉದ್ಯೋಗಿಯಿಂದ ಸೋರ್ಸ್ ಕೋಡ್ ಕಳವು
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳರು
ಕೆ.ಆರ್.ಪುರದ ದೇವಸಂದ್ರ ಬಳಿ ಜನರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ದಂಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗಾಯತ್ರಿಮತ್ತು ಶ್ರೀಕಾಂತ್ ಬಂಧಿತ ಆರೋಪಿಗಳಿಂದ 60 ಲಕ್ಷ ಮೌಲ್ಯದ 398 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಪದ್ಮಿ ಬೊಂಬೆ ವ್ಯಾಪಾರ ಮಾಡಿದ್ರೆ, ಪತಿ ಜಾತ್ರೆಗೆ ಬರುವ ಮಹಿಳೆಯರ ಚಿನ್ನಾಭರಣ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:52 pm, ಬುಧವಾರ, 28 ಜನವರಿ 26