
ಜೀವನ ಗುಣಮಟ್ಟ ಸೂಚ್ಯಂಕ 2026: ಒಂದು ದೇಶದ ಅಭಿವೃದ್ಧಿಯನ್ನು ಜಿಡಿಪಿ, ಆರ್ಥಿಕ ಬೆಳವಣಿಗೆ ಸೂಚಿಸುತ್ತೆ. ಆದರೆ, ಆರ್ಥಿಕವಾಗಿ ಬಲಿಷ್ಠವಾಗಿರುವ ದೇಶಗಳಲ್ಲೂ ಜನರ ಸಮಸ್ಯೆಗಳು ಹೆಚ್ಚಾಗಿವೆ. ಅಧಿಕ ಜನಸಂಖ್ಯೆ, ಹದಗೆಟ್ಟ ಆಡಳಿತ. ಇಂತಹ ಹಲವು ಕಾರಣಗಳಿಂದ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಜನರ ಜೀವನದ ಗುಣಮಟ್ಟ (Quality of Life) ಕಳಪೆಯಾಗಿದೆ. ಕೆಲವು ದೇಶಗಳು ಆರ್ಥಿಕವಾಗಿ ದುರ್ಬಲವಾಗಿದ್ದರೂ, ಅಲ್ಲಿನ ಜನರು ಉತ್ತಮ ಜೀವನಮಟ್ಟವನ್ನು ಹೊಂದಿದ್ದಾರೆ. ಯಾವುದೇ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ.
ಜನರು ಗುಣಮಟ್ಟದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲು ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ಒಂದು ದೇಶದಲ್ಲಿ ಜನರಿಗೆ ಸಂಪೂರ್ಣ ಭದ್ರತೆ, ಉತ್ತಮ ಆದಾಯ, ಸ್ವಚ್ಛ ಪರಿಸರ, ಆರೋಗ್ಯಕರ ವಾತಾವರಣ ಮತ್ತು ಉತ್ತಮ ಆರೋಗ್ಯ ರಕ್ಷಣೆ ಇದ್ದರೆ ಅಲ್ಲಿನವರ ಜೀವನ ಉತ್ತಮವಾಗಿದೆ ಎಂದರ್ಥ. ಹೀಗೆ ಎಲ್ಲಾ ವಿಷಯಗಳಲ್ಲೂ ತೃಪ್ತರಾಗಿ ನೆಮ್ಮದಿಯಿಂದ ಬದುಕಿದರೆ, ಆ ದೇಶವು ಉತ್ತಮ ಜೀವನ ಗುಣಮಟ್ಟವನ್ನು ಹೊಂದಿದೆ ಎಂದರ್ಥ. ಹೀಗೆ ಏಷ್ಯಾದಲ್ಲಿ ಉತ್ತಮ ಜೀವನ ಗುಣಮಟ್ಟ ಹೊಂದಿರುವ ಟಾಪ್ 10 ದೇಶಗಳ ಪಟ್ಟಿಯನ್ನು ಇತ್ತೀಚೆಗೆ ನಂಬಿಯೋ (Numbeo) ಸಂಸ್ಥೆ ಪ್ರಕಟಿಸಿದೆ. ಆ ದೇಶಗಳು ಯಾವುವು ಎಂದು ಇಲ್ಲಿ ತಿಳಿಯೋಣ.