ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?


ಜನವರಿ 28: ಕೇಂದ್ರ ಬಜೆಟ್ (ಕೇಂದ್ರ ಬಜೆಟ್) ಮಂಡನೆಗೆ ದಿನಗಣನೆ ನಡೆದಿದೆ. ಬಜೆಟ್ ಅಧಿವೇಶನ ಶುರುವಾಗಿದೆ. ಹಲ್ವಾ ಕಾರ್ಯಕ್ರಮ ಮುಕ್ತಾಯವಾಗಿ ಬಜೆಟ್ ರೂಪಿಸುತ್ತಿರುವವರೆಲ್ಲರೂ ಹೊರಪ್ರಪಂಚದಿಂದ ಮರೆಯಾಗಿದ್ದಾರೆ. ಫೆಬ್ರುವರಿ 1 ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಏನಿರುತ್ತೆ, ಏನಿರಲ್ಲ, ಯಾರಿಗೆ ಹೆಚ್ಚು ಭಾಗ್ಯ, ಇತ್ಯಾದಿ ನಿರೀಕ್ಷೆಗಳು, ಅಪೇಕ್ಷೆಗಳು ಬಹಳ ಇವೆ. ಪ್ರತೀ ಬಜೆಟ್‌ನಲ್ಲಿ ಜನಸಾಮಾನ್ಯರು ಅತಿಹೆಚ್ಚು ಗಮನಿಸುವುದು ಆದಾಯ ತೆರಿಗೆಗಳು. ಈ ಬಾರಿಯ ಬಜೆಟ್‌ನಲ್ಲಿ ಇನ್ಕಮ್ ಟ್ಯಾಕ್ಸ್ ವಿಚಾರವನ್ನು ನಿರ್ಮಲಾ ಸೀತಾರಾಮನ್ ತರುತ್ತಾರಾ ಪ್ರಶ್ನೆ.

ಕಳೆದ ವರ್ಷದ ಬಜೆಟ್‌ನಲ್ಲಿ (2025ರದ್ದು) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಭರಪೂರ ಕೊಡುಗೆಗಳನ್ನು ಜನಸಾಮಾನ್ಯರಿಗೆ ಕೊಟ್ಟಿದ್ದರು. ಸ್ಲ್ಯಾಬ್ ದರಗಳು ಬದಲಾದವು, ಸರಳಗೊಂಡವು. 12 ಲಕ್ಷ ರೂ ಆದಾಯ ಇದ್ದವರಿಗೆ ಟ್ಯಾಕ್ಸ್ ಮನ್ನಾಗಾಗಿ. 75,000 ರೂ.

ಇದನ್ನೂ ಓದಿ: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್ ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?

ಭಾರತದಲ್ಲಿ ಹೆಚ್ಚಿನ ಆದಾಯ ತೆರಿಗೆ ಪಾವತಿದಾರರ ವಾರ್ಷಿಕ ಆದಾಯ 12.75 ಲಕ್ಷ ರೂ ಮಿತಿಯೊಳಗೆಯೇ ಇದೆ. ಹೀಗಾಗಿ, ಕಳೆದ ಬಾರಿಯ ಬಜೆಟ್ ನಿಂದ ಕೋಟ್ಯಂತರ ಜನರ ಟ್ಯಾಕ್ಸ್ ರಿಲೀಫ್ ಪಡೆದಿದ್ದರು. ಆದರೆ, ಈ ಟ್ಯಾಕ್ಸ್ ರಿಲೀಫ್ ಕೊಡ ಆದರೆ ಹೊಸ ಟ್ಯಾಕ್ಸ್ ರೆಜೀಮ್ ನಲ್ಲಿ ಮಾತ್ರ. ಹಳೆಯ ಟ್ಯಾಕ್ಸ್ ರೆಜಿಮ್ ಹಾಗೆಯೇ ಇದೆ. ಇದು ಗೊಂದಲ ತಂದಿರುವ ಸಂಗತಿ.

ಈ ಬಾರಿಯ ಬಜೆಟ್‌ನಲ್ಲಿ ಹಳೆಯ ಟ್ಯಾಕ್ಸ್ ರೆಜಿಮ್ ವಿಚಾರದಲ್ಲಿ ಇರುವ ಗೊಂದಲವನ್ನು ನಿವಾರಿಸುವ ಪ್ರಯತ್ನವಾಗುತ್ತಾ ಎಂಬುದು ಪ್ರಶ್ನೆಯಾಗಿದೆ. ಹೊಸ ಟ್ಯಾಕ್ಸ್ ರೆಜೀಮ್‌ನಲ್ಲಿ ಸಿಕ್ಕಾಪಟ್ಟೆ ಟ್ಯಾಕ್ಸ್ ರಿಲೀಫ್ ಕೊಡಲಾಗಿದ್ದರೂ, ಹಳೆಯ ಟ್ಯಾಕ್ಸ್ ರೆಜಿಮ್ನ ಆಕರ್ಷಣೆ ಉಳಿದಿರುವುದು ಅದರ ಡಿಡಕ್ಷನ್ ಅವಕಾಶ.

ಓಲ್ಡ್ ಟ್ಯಾಕ್ಸ್ ರೆಜೀಮ್ನಲ್ಲಿ ಸುಮಾರು 3 ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶವಿದೆ. ಜನರು ಪಿಪಿಎಫ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿ ಅದರಿಂದ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಬಿಟ್ಟರೆ ಬೇರೆ ಡಿಡಕ್ಷನ್ ಸೌಲಭ್ಯವಿಲ್ಲ. ಹೀಗಾಗಿ, ಕೂಡ ಬಹಳ ಜನರು ಹಳೆಯ ಟ್ಯಾಕ್ಸ್ ರೆಜಿಮ್ ಅನ್ನೇ ಬಳಸುತ್ತಿರುವುದು.

ಇದನ್ನೂ ಓದಿ: ಬಜೆಟ್‌ನಲ್ಲಿ ಜಿಎಸ್ಟಿ ದರ ಇಳಿಕೆ ಕ್ರಮ: ಎಂಎಸ್‌ಎಂಇಗಳಿಂದ ನಿರೀಕ್ಷೆ

ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಳೆಯ ಟ್ಯಾಕ್ಸ್ ಸಿಸ್ಟಂ ಅನ್ನು ನಿಲ್ಲಿಸುವ ನಿರ್ಧಾರ ಮಾಡುತ್ತಾರಾ? ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ ಇನ್ನಷ್ಟು ಡಿಕ್ಷನ್ ಆಯ್ಕೆಗಳನ್ನು ಕೊಟ್ಟು ಹಳೆಯ ರೆಜಿಮ್ ಅನ್ನು ನಿಲ್ಲಿಸಿದರೂ ಅಚ್ಚರಿ ಇರುವುದಿಲ್ಲ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *