ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎಂಬ ಹುಚ್ಚುತನದಿಂದ, ಮುಗ್ದ ಜನರ ಮನಸ್ಸಿಗೆ ನೋವು ಮಾಡುವ ಕೆಲಸಗಳು ನಡೆಯುತ್ತಿವೆ. ಇದರಿಂದ ವೈಯಕ್ತಿಕ ವಿಚಾರಗಳಿಗೆ ಧಕ್ಕೆಯಾಗುತ್ತಿದೆ. ಇದೀಗ ಇಲ್ಲೊಂದು ವಿಡಿಯೋ ಭಾರೀ ವೈರಲ್ ಆಗಿದೆ. ಯುವತಿಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ, ಇದೀಗ ಈ ಸರ್ಕಾರದ ಬಗ್ಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕುಂದನ್ ಪಟೇಲ್ ಎಂಬುವವರು (ಕ್ಯಾಬ್ ಡ್ರೈವರ್ ವಿಡಿಯೋ) ಹಂಚಿಕೊಂಡಿರುವ ಈ ವಿಡಿಯೋ ಸದ್ಯ ದೊಡ್ಡ ಮಟ್ಟದ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಇಬ್ಬರು ಯುವತಿಯರು ಕ್ಯಾಬ್ ಚಾಲಕನೊಂದಿಗೆ ಬಾಡಿಗೆ ವಿಚಾರವಾಗಿ ಚರ್ಚಿಸುತ್ತಿರುವುದು ಕಂಡುಬರುತ್ತದೆ. ಕೇವಲ 100 ರೂ. ಡಿಸ್ಕೌಂಟ್ (ರಿಯಾಯಿತಿ) ಪಡೆಯಲು ಅವರ ಚಾಲಕನಿಗೆ “ಫ್ರೀ ಎಂಟರ್ಟೈನ್ಮೆಂಟ್) ನೀಡಲಾಗುವುದು” (ಉಚಿತ ಮನರಂಜನೆ) ನೀಡಿದ್ದಾರೆ.
ಕೇವಲ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅಥವಾ ‘ವ್ಯೂಸ್’ (ವೀಕ್ಷಣೆಗಳು) ಪಡೆಯಲು ಯುವತಿಯರು ಈ ರೀತಿ ವರ್ತಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಇಂತಹ ವರ್ತನೆಗಳು ಚಾಲಕರ ಮೇಲೆ ಎಂತಹ ಪ್ರಭಾವ ಬೀರುತ್ತವೆ ಮತ್ತು ಇದು ಸಾಮಾಜಿಕ ನೈತಿಕತೆಗೆ ಎಷ್ಟು ಸರಿ ಎಂಬ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರಕ್ಕಾಗಿ ಇಂತಹ ಕೆಟ್ಟ ವರ್ತನೆಗಳನ್ನು ತೋರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನೇಕರು ಇದನ್ನು “ಲಜ್ಜೆಗೆಟ್ಟ ವರ್ತನೆ” ಎಂದು ಕರೆದಿದ್ದಾರೆ ಮತ್ತು ಶಿಸ್ತುಕ್ರಮಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ಹುಡುಗಿಯರು ಕ್ಯಾಬ್ ಡ್ರೈವರ್ಗೆ ₹100 ರಿಯಾಯಿತಿಗೆ ಬದಲಾಗಿ “ಉಚಿತ ಮನರಂಜನೆ” ನೀಡುತ್ತಿರುವುದನ್ನು ತೋರಿಸುತ್ತದೆ. ಮೂಲತಃ ಕುಂದನ್ ಪಟೇಲ್ ಅವರು ಹಂಚಿಕೊಂಡ ಕ್ಲಿಪ್, ಗಡಿಗಳು, ಒಪ್ಪಿಗೆ, ಶೋಷಣೆ ಮತ್ತು… pic.twitter.com/SAwlH4WLBZ
– ಶೋನೀಕಪೂರ್ (@ShoneeKapoor) ಜನವರಿ 27, 2026
ದಿನವಿಡೀ ಕಷ್ಟಪಟ್ಟು ದುಡಿಯುವ ಕ್ಯಾಬ್ ಚಾಲಕರನ್ನು ಇಂತಹ ಹಾಸ್ಯಾಸ್ಪದ ಅಥವಾ ಮುಜುಗರದ ಸನ್ನಿವೇಶಗಳಿಗೆ ಸಿಲುಕಿಸುವುದು ತಪ್ಪು ಎಂಬ ಕಾಮೆಂಟ್‌ಗಳನ್ನು ಮಾಡಿದೆ. ಇನ್ನು ಕೆಲವು ಜನರು ಇದು ಕೇವಲ ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ಮಾಡಲಾದ ‘ಪ್ರಾಂಕ್’ ಎಂದು ಹೇಳಿದ್ದಾರೆ. ಒಂದು ವೇಳೆ ಹುಡುಗಿಯರಿಗೆ ಹೀಗೆ ಮಾಡಿದ್ರೆ ಏನಾಗುತ್ತಿತ್ತು. ಇಲ್ಲಿ ಕೂಡ ಲಿಂಗ ತಾರತಾಮ್ಯ ಇದೆ. ಪೊಲೀಸರು ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮಹಿಳೆಯರಿಗೆ ಹೀಗೆ ಆದರೆ ಪೊಲೀಸರು ದೂರು ನೀಡಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ತನ್ನ ಅಜ್ಜಿಗೆ ವಿಡಿಯೋ ಆಟ ಆಡುವುದು ಹೇಗೆಂದು ಹೇಳಿಕೊಟ್ಟ ಮೊಮ್ಮಗಳು
ಇನ್ನು ಈ ಪೋಸ್ಟ್ ಗೆ ಎಕ್ಸ್ ಖಾತೆ @ShoneeKapoor ಎಂಬುವವರು ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ. ಕ್ಯಾಬ್ ಚಾಲಕರು ಅಥವಾ ಯಾವುದೇ ಸೇವಾ ವಲಯದ ಕಾರ್ಮಿಕರು ಸಾರ್ವಜನಿಕ ಸೇವೆಯಲ್ಲಿದ್ದಾರೆ. ಅವರ ವೈಯಕ್ತಿಕ ಲಾಭಕ್ಕಾಗಿ ಅಥವಾ ಅಗ್ಗದ ಮನರಂಜನೆಗಾಗಿ ಬಳಸಿಕೊಳ್ಳುವುದು ಅವರ ವೃತ್ತಿ ಮತ್ತು ಘನತೆಗೆ ಮಾಡುವ ಅವಮಾನ. ಸಾರ್ವಜನಿಕ ಸ್ಥಳಗಳು ಇಂತಹ “ಬಾರ್ಗೇನಿಂಗ್ ಟೂಲ್ಸ್” ಆಗಬಾರದು. ಇಂತಹ ಘಟನೆಗಳು ಸಮಾಜದಲ್ಲಿ ಜವಾಬ್ದಾರಿಯುತ ನಡವಳಿಕೆಯ ಅಗತ್ಯತೆಯನ್ನು ಸಾರುತ್ತವೆ. ಕೇವಲ ‘ವ್ಯೂಸ್’ಗಾಗಿ ಗೌರವ ಮತ್ತು ಜವಾಬ್ದಾರಿಯನ್ನು ಕೊಡುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 4:53 pm, ಬುಧವಾರ, 28 ಜನವರಿ 26