Headlines

ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಹಳೇ ಪ್ರೇಯಿಸಿ ಜತೆ ಪತಿ ಆತ್ಮಹತ್ಯೆ

ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಹಳೇ ಪ್ರೇಯಿಸಿ ಜತೆ ಪತಿ ಆತ್ಮಹತ್ಯೆ


ಬೆಳಗಾವಿ, (ಜನವರಿ 28): ಪತ್ನಿ ಹೆರಿಗೆಂದು ತವರು ಮನೆಗೆ ಹೋದಾಗ ಪತಿ ತನ್ನ ಹಳೇ ಪ್ರೇಯಸಿ ಜೊತೆ ನದಿಗೆ ಹಾರಿ ಆತ್ಮಹತ್ಯೆ (ಆತ್ಮಹತ್ಯೆ) ಮಾಡಿಕೊಂಡಿರುವ ಘಟನೆ ಬೆಳಗಾವಿ (ಬೆಳಗಾವಿ) ಜಿಲ್ಲೆ ರಾಮದುರ್ಗ ಮಲ್ಲಾಪುರ ಬಳಿ ನಡೆದಿದೆ. ಮಲ್ಲಾಪುರದ ಜಗದೀಶ್ ಕವಳೆಕರ(27), ಗಂಗಮ್ಮ(26) ಆತ್ಮಹತ್ಯೆಗೆ ಶರಣಾದ ಜೋಡಿ. ಮೊದಲಿನಿಂದಲೂ ಜಗದೀಶ್ ಹಾಗೂ ಗಂಗಮ್ಮ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಜಗದೀಶ್ ಬೇರೆ ಯುವತಿ ಜೊತೆ ಮದುವೆಯಾಗಿದ್ದು, ಸದ್ಯ ಪತ್ನಿ ಗರ್ಭಿಣಿ. ಹೀಗಾಗಿ ಆಕೆ ತವರು ಮನೆಗೆ ಹೋದಾಗ ಇತ್ತ ಪ್ರೇಯಿಸಿ ನದಿಗೆ ಹಾರಿ ಸಾವಿನ ಮನೆ ಸೇರಿದ್ದಾನೆ. ತೋರಿಸಿದ ಹೆಂಡ್ತಿಯೇ ಜಗದೀಶ್ ಹಾಗೂ ಗಂಗಮ್ಮಳ ಮದ್ವೆ ಮಾಡುವುದಾಗಿ ಹೇಳಿದ್ದಳು.

ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಇರುವ ಮಲಪ್ರಭಾ ನದಿಯಲ್ಲಿ ಇಂದು (ಜನವರಿ 28) ಮಲಪ್ರಭಾ ನದಿಯಲ್ಲಿ ತಬ್ಬಿದ ರೀತಿಯಲ್ಲಿ ಎರಡು ಶವಗಳು ತೇಲಿ ಬಂದಿದ್ದು, ಇದನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವಗಳನ್ನು ನದಿಯ ದಡಕ್ಕೆ ತಂದು ನೋಡಿದಾಗ ಜಗದೀಶ್ ಹಾಗೂ ಗಂಗಮ್ಮ ಗೊತ್ತಾಗಿದೆ. ಮದುವೆಯಾಗಿದ್ದವ ಪತ್ನಿ ಬಿಟ್ಟು ಪ್ರೇಯಸಿ ಜೊತೆಗೆ ಸಾವಿನ ಮನೆ ಸೇರಿದ್ದಾನೆ. ಇನ್ನೊಂದೆಡೆ ಗಂಗಮ್ಮಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ಪತ್ನಿ ಕಿರಿಕ್; ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಸಾವಿನಲ್ಲೂ ಒಂದಾಗಿರಬೇಕೆಂದು ಬಟ್ಟೆ ಕಟ್ಟಿಕೊಂಡಿದ್ದ ಜೋಡಿ

ಜಗದೀಶ್ ಕಳವೇಕರ್ (27) ಇದೇ ಗ್ರಾಮದ ಗಂಗಮ್ಮಳನ್ನು ಬೈಕ್ ಮೇಲೆ ಕರೆದುಕೊಂಡು ಮಲ್ಲಾಪುರ- ಗೋಣಗನೂರು ಬ್ರಿಡ್ಜ್ ಬಳಿ ಹೋಗಿದ್ದಾರೆ. ಬಳಿಕ ಇಷ್ಟು ದಿನ ದೂರವಾಗಿದ್ವಿ. ಈಗ ಸಾವಿನಲ್ಲೂ ಒಂದಾಗಿರೋಣ ಎಂದು ಇಬ್ಬರು ಸೊಂಟಕ್ಕೆ ಬಟ್ಟೆ ಕಟ್ಟಿಕೊಂಡು ಬಳಿಕ ಮಲಪ್ರಭಾ ನದಿಗೆ ಹಾರಿದ್ದಾರೆ. ಇಂದು (ಜನವರಿ 28) ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿಯೇ ಮೃತದೇಹಗಳು ಇವೆ. ಮೃತ ಜಗದೀಶ್ ಗೆ ಮದುವೆಯಾಗಿದ್ದು, ಎರಡು ತಿಂಗಳ ಹಿಂದೆ ಪತ್ನಿ ಹೆರಿಗೆ ಎಂದು ತವರು ಮನೆಗೆ ಹೋಗಿದ್ದಳು. ಈ ವೇಳೆ ಜಗದೀಶ್ ಈ ರೀತಿ ಮಾಡಿಕೊಂಡಿದ್ದಾನೆ.

ಇಬ್ಬರಿಗೂ ಮದ್ವೆ ಮಾಡುವುದಾಗಿ ಹೇಳಿದ್ದ ಪತ್ನಿ

ಪತ್ನಿ ಹೆರಿಗೆಂದು ತವರಿಗೆ ಹೋಗುತ್ತಿದ್ದಂತೆಯೇ ಜಗದೀಶ್, ತನ್ನ ಪ್ರೇಯಸಿ ಗಂಗಮ್ಮಳನ್ನು ಕರೆದುಕೊಂಡು ಬಂದು 2 ತಿಂಗಳಿಂದ ಮನೆಯಲ್ಲಿಟ್ಟುಕೊಂಡಿದ್ದ. ಈ ವಿಚಾರವಾಗಿ ಕುಟುಂಬದಲ್ಲಿ ಸಾಕಷ್ಟು ಕಲಹ ಉಂಟಾಗಿತ್ತು. ಪತ್ನಿ ಕೂಡ ಈ ವಿಚಾರ ಗೊತ್ತಾಗಿ ಗಂಡನೊಟ್ಟಿಗೆ ಜಗಳ ಕೂಡ ಮಾಡಿದ್ದಳು. ಆದರೆ, ಜಗದೀಶ್ ಮಾತ್ರ ಗಂಗಮ್ಮಳನ್ನ ಬಿಟ್ಟುಲ್ಲ. ಕೊನೆಗೆ ಆಕೆಯ ಗಂಡನ್ನ ಬಿಡುವುದಿಲ್ಲ ಎಂದು ಗೊತ್ತಾಗಿ ಪತ್ನಿ ಕೂಡ ಹೆರಿಗೆಯಾದ ಬಳಿಕ ಇಬ್ಬರಿಗೂ ಮದುವೆ ಮಾಡುತ್ತೇನೆ ಎಂದು ಹೇಳಿದ್ದಾಳೆ. ಆದರೆ,ಇಲ್ಲಿದ್ದ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನೆಯೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

ಘಟನೆಯಿಂದ ಬೆಚ್ಚಿ ಬಿದ್ದಿರುವ ಗ್ರಾಮಸ್ಥರು ಇಬ್ಬರು ಪ್ರೀತಿ ಮಾಡ್ತಿದ್ರೆ ಮದುವೆಯಾಕಾಬೇಕಿತ್ತು. ಎರಡು ತಿಂಗಳ ಇಬ್ಬರು ಒಟ್ಟಿಗೆ ಇದ್ರೂ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆಂದು ಸ್ಥಳೀಯರ ಮಾತು. ಸದ್ಯ ಈ ಬಗ್ಗೆ ರಾಮದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆಗೆ ಕಾರಣವೇನು ಎನ್ನುವುದನ್ನು ತನಿಖೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಪ್ರೀತಿ ಪ್ರೇಮ ಅಂತ ಹುಡ್ಗಿ ದುರಂತ ಅಂತ್ಯ ಕಂಡಿದ್ದರೆ, ತಂದೆಯಾಗಬೇಕಿದ್ದವ ಮಸಣ ಸೇರಿದ್ದು ದುರ್ದೈವದ ಸಂಗತಿ

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *