Brahmagantu Serial: ಬಯಲಾಯ್ತು ಸೌಂದರ್ಯಳ ಅಸಲಿ ಮುಖ! ಬ್ರಹ್ಮಗಂಟು ಸೀರಿಯಲ್​ ಅಂತ್ಯ?

Brahmagantu Serial: ಬಯಲಾಯ್ತು ಸೌಂದರ್ಯಳ ಅಸಲಿ ಮುಖ! ಬ್ರಹ್ಮಗಂಟು ಸೀರಿಯಲ್​ ಅಂತ್ಯ?

Brahmagantu Serial: ಬಯಲಾಯ್ತು ಸೌಂದರ್ಯಳ ಅಸಲಿ ಮುಖ! ಬ್ರಹ್ಮಗಂಟು ಸೀರಿಯಲ್​ ಅಂತ್ಯ?
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ಮತ್ತು ದೀಪಾ ನಡುವಿನ ಸವಾಲಿನಲ್ಲಿ ಗುಣವೇ ಗೆದ್ದಿದೆ. ಸೌಂದರ್ಯಳ ಅಸಲಿ ಮುಖ ಬಯಲಾಗಿದ್ದು, ದೀಪಾ ಮತ್ತು ಚಿರಾಗ್ ಒಂದಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಸೀರಿಯಲ್ ಮುಕ್ತಾಯದ ಹಂತ ತಲುಪಿದೆ ಎಂದು ಹೇಳಲಾಗುತ್ತಿದೆ.
ಬ್ರಹ್ಮಗಂಟು ಸೀರಿಯಲ್​ (Brahmagantu Serial) ಸದ್ಯ ರೋಚಕ ಹಂತ ತಲುಪಿದೆ. ಸೌಂದರ್ಯ ಮೇಲೋ, ಗುಣ ಮೇಲೋ ಎಂದು ದೀಪಾ ಮತ್ತು ಸೌಂದರ್ಯ ನಡುವೆ ಚಾಲೆಂಜ್​ ನಡೆದಿತ್ತು. ಅದಕ್ಕೆ ದಾಳವಾಗಿದ್ದು ಚಿರಾಗ್​. ಇದೀಗ ಗುಣನೇ ಮುಖ್ಯ ಎಂದು ಚಿರಾಗ್​ ಸಾಬೀತು ಮಾಡಿದ್ದಾನೆ.

ದಿಶಾಳ ಬಣ್ಣವನ್ನು ಕಳಚಿಟ್ಟು, ದೀಪಾ ತನ್ನ ನಿಜದ ರೀತಿಯಲ್ಲಿಯೇ ಮನೆಬಿಟ್ಟು ಹೋಗಿದ್ದಾಳೆ. ಅಷ್ಟಕ್ಕೂ ಗಂಡನ ಬಗ್ಗೆ ಅಪಾರ್ಥ ಮಾಡಿಕೊಂಡು ಆಕೆ ಮನೆ ಬಿಟ್ಟಿದ್ದಳು. ಆದರೆ ಪತ್ನಿ ಇಲ್ಲದೇ ಕೊರಗಿರೋ ಚಿರಾಗ್​ ದೀಪಾಳ ಮನಸ್ಸನ್ನು ಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಇದೀಗ ಅವರಿಬ್ಬರೂ ಒಂದಾಗುವ ಟೈಮ್​ ಬಂದೇ ಬಿಟ್ಟಿದೆ.

ಅದೇ ಇನ್ನೊಂದೆಡೆ, ಸೌಂದರ್ಯಳ ಮುಖವಾಡ ಮಾವನ ಎದುರು ಬಯಲಾಗಿದೆ. ತನಗೆ ಮಕ್ಕಳ ಭಾಗ್ಯ ಇಲ್ಲ ಎಂದುಕೊಂಡ ಸೌಂದರ್ಯ, ಆ ಮನೆಯಲ್ಲಿ ತೊಟ್ಟಿಲು ತೂಗುವುದನ್ನು ನೋಡುವುದಿಲ್ಲ ಎಂದಿದ್ದಾಳೆ. ತಾನು ಒಳ್ಳೆಯ ಮುಖವಾಡ ಹಾಕಿಕೊಂಡು, ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದೇನೆ ಎಂದು ಹೇಳಿದ್ದಾಳೆ.

ದೀಪಾ ಮತ್ತು ಚಿರಾಗ್​ ಒಂದಾಗಲು ನಾನು ಬಿಡುವುದಿಲ್ಲ. ಅವರಿಬ್ಬರಿಗೂ ಡಿವೋರ್ಸ್​ ಕೊಡಿಸುತ್ತೇನೆ ಎಂದಿದ್ದಾಳೆ. ಆದರೆ ಈ ಮಾತನ್ನೆಲ್ಲಾ ಮಾವ ಕೇಳಿಸಿಕೊಂಡಿದ್ದಾನೆ. ಇದು ತಿಳಿಯುತ್ತಲೇ ಮಾವನನ್ನೇ ಸಾಯಿಸಲು ಹೋಗಿದ್ದಾಳೆ ಸೌಂದರ್ಯ.

ಅಲ್ಲಿಗೆ ಸೌಂದರ್ಯಳ ಅಸಲಿ ಮುಖ ತಿಳಿದಿದೆ. ಅತ್ತ ದೀಪಾ ಮತ್ತು ಚಿರಾಗ್​ ಒಂದಾಗಿದ್ದಾರೆ. ಅದೇ ಇನ್ನೊಂದೆಡೆ ನರಸಿಂಹನ ತನ್ನ ಸಿಡುಕು ಪತ್ನಿಯನ್ನು ಹಾವಿನ ಕಡಿತದಿಂದ ಪಾರು ಮಾಡಿದ್ದು, ಅವಳಲ್ಲಿ ಪ್ರೇಮವನ್ನು ಮೂಡಿಸಿದ್ದಾನೆ.

ಹೀಗೆ ಎಲ್ಲವೂ ಮುಗಿದಿರುವ ಹಿನ್ನೆಲೆಯಲ್ಲಿ ಬ್ರಹ್ಮಗಂಟು ಸೀರಿಯಲ್​ ಮುಕ್ತಾಯ ಆಗಲಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಕೆಲವೇ ಎಪಿಸೋಡ್​ಗಳಲ್ಲಿ ಇದು ಅಂತ್ಯ ಹಾಡಲಿದೆ. ಏಕೆಂದರೆ ಸೀರಿಯಲ್ ಅನ್ನು ಮತ್ತಷ್ಟು ಎಳೆಯಲು ಯಾವುದೇ ವಿಷಯ ವೀಕ್ಷಕರಿಗೆ ಕಾಣಿಸುತ್ತಿಲ್ಲ. ಇದರ ಹೊರತಾಗಿಯೂ ಸೀರಿಯಲ್​ ಎಳೆಯುವುದು ಕೂಡ ದೊಡ್ಡ ವಿಷಯವೇನಲ್ಲ ಬಿಡಿ.

Source link

Leave a Reply

Your email address will not be published. Required fields are marked *